ಮೆಗ್ಗಾನ್ ಆಸ್ಪತ್ರೆಯಲ್ಲಿ ಸಲಹಾ ಸಮಿತಿ ಸದಸ್ಯರುಗಳನ್ನು ನೇಮಕಕ್ಕೆ ಹೆಚ್ ಸಿ ಯೋಗೀಶ್ ಮನವಿ



ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಇಂದು ಸನ್ಮಾನ್ಯ ದಿನೇಶ್ ಗುಂಡೂರಾವ್ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವರಿಗೆ ಶಿವಮೊಗ್ಗ ನಗರದಲ್ಲಿನ ಕೆಲವು ಆರೋಗ್ಯ ಕೇಂದ್ರಗಳು ಹಾಗೂ ಜಿಲ್ಲಾ ಸರ್ಕಾರಿ ಆಸ್ಪತ್ರೆ ವಿಚಾರವಾಗಿ ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರ 2023ರ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಹೆಚ್ ಸಿ ಯೋಗೇಶ್ ರವರು ಮನವಿ ನೀಡಿದರು. 

ಶಿವಮೊಗ್ಗ ಜಿಲ್ಲಾ ಮೆಗ್ಗಾನ್ ಆಸ್ಪತ್ರೆಯಲ್ಲಿ ಸಲಹಾ ಸಮಿತಿ ಸದಸ್ಯರುಗಳನ್ನು ನೇಮಕ ಮಾಡುವುದರಿಂದ ಆಸ್ಪತ್ರೆಗೆ ಸಂಬಂಧಪಟ್ಟ ಲೋಪ ದೋಷಗಳನ್ನು, ರೋಗಿಗಳಿಗೂ ಸಾರ್ವಜನಿಕರಿಗೂ ಹಾಗೂ ವೈದ್ಯರ ನಡುವೆ ನಡೆಯುವ ಕೆಲವು ಲೋಪ ದೋಷಗಳನ್ನು ಅಥವಾ ಅಹಿತಕರ ಘಟನೆಗಳಿಗೆ ಸಂಬಂಧಿಸಿದಂತೆ ಸಲಹಾ ಸದಸ್ಯ ಸಮಿತಿ ಇದ್ದಲ್ಲಿ ಇವುಗಳನ್ನು ತಡೆದು ಎಲ್ಲರಿಗೂ ಸಹಕಾರ ವಾಗುವಂತೆ ನೋಡಿಕೊಳ್ಳಬಹುದು. 

ಆಸ್ಪತ್ರೆಯ ಲೋಪದೋಷಗಳನ್ನು ಪರಿಶೀಲಿಸಲು, ವೈದ್ಯರ ನಿರ್ಲಕ್ಷದ ಸಮಸ್ಯೆ ರೋಗಿಗಳ ಮೇಲಾಗುವ ಪರಿಣಾಮಗಳನ್ನು ಪರಿಶೀಲಿಸಿ, ಆಸ್ಪತ್ರೆಯಲ್ಲಿನ ಎಲ್ಲಾ ದರ್ಜೆಯ ನೌಕರರ ಕುಂದು ಕೊರತೆಗಳನ್ನು ಬಗೆಹರಿಸುವ ಹಾಗೂ ಸರಿಪಡಿಸುವುದಕ್ಕೆ ಸಹಕಾರವಾಗುತ್ತದೆ. ಇವುಗಳನ್ನು ಗಮನದಲ್ಲಿಟ್ಟುಕೊಂಡು ಸಲಹಾ ಸಮಿತಿ ಸದಸ್ಯರ ನೇಮಕ ಮಾಡಿಕೊಡಬೇಕಾಗಿ ಕೇಳಿಕೊಳ್ಳುತ್ತೇವೆ.


ಶಿವಮೊಗ್ಗ ನಗರವು ಬೃಹದಾಕಾರವಾಗಿ ಬೆಳೆದಿದ್ದು ನಗರದ ಹೊರಭಾಗಗಳಿಂದ ಜಿಲ್ಲಾ ಮೆಗ್ಗಾನ್ ಆಸ್ಪತ್ರೆಗೆ ಬಂದು ಹೋಗಲು ಬಹಳಷ್ಟು ತೊಂದರೆ ಆಗುತ್ತಿದ್ದು, ವಾಹನ ದಟ್ಟಣೆ ಫ್ಲೈ ಓವರ್ ಗಳು ನಿರ್ಮಾಣವಾಗಿದ್ದು ರೋಗಿಗಳಿಗೆ ಅನುಕೂಲ ವಾಗುವ ಉದ್ದೇಶದಿಂದ ಶಿವಮೊಗ್ಗ ನಗರದ ನಾಲ್ಕು ಭಾಗಗಳಲ್ಲೂ ನಮ್ಮ ಕ್ಲಿನಿಕ್ ಪ್ರಾರಂಭಿಸುವುದರಿಂದ ವೃದ್ದರಿಗೆ ಬಿಪಿ ಹಾಗು ಶುಗರ್ ಪರೀಕ್ಷೆ ಮಾಡಿಸಿಕೊಳ್ಳಲು ಸಣ್ಣಪುಟ್ಟ ಅಪಘಾತ ಸಂದರ್ಭದಲ್ಲಿ ಪ್ರಥಮ ಚಿಕಿತ್ಸೆ ನೀಡಲು ಅನುಕೂಲವಾಗುತ್ತದೆ. 

ಈಗಾಗಲೇ ಶಿವಮೊಗ್ಗ ವಿದ್ಯಾನಗರ ಭಾಗದಲ್ಲಿರುವ  ಸಾರ್ವಜನಿಕ ಆರೋಗ್ಯ ಕೇಂದ್ರಗಳಿಗೆ ಇನ್ನು ಅನೇಕ ಎಮರ್ಜೆನ್ಸಿ ಉಪಕರಣಗಳು ಕೊಡಬೇಕಾಗಿ ಹಾಗೂ ಡೇ ಕೇರ್ ಸೆಂಟರ್ ಪ್ರಾರಂಭಿಸಿ ಕೊಡಬೇಕಾಗಿ ಮನವಿ ನೀಡಿದರು.

ಈ ಸಂದರ್ಭದಲ್ಲಿ ಉತ್ತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ ಎಸ್ ಶಿವಕುಮಾರ್ ರವರು, ಮಾಜಿ ಮಹಾನಗರ ಪಾಲಿಕೆ ಸದಸ್ಯರಾದ ರಮೇಶ್ ಹೆಗಡೆ ರವರು, ವಿಶ್ವನಾಥ್ ಕಾಶಿ ರವರು, ಕಾಂಗ್ರೆಸ್ ಪಕ್ಷದ ಮುಖಂಡರುಗಳಾದ ಚಿನ್ನಪ್ಪ ರವರು, ಶೇಷಾದ್ರಿ ರವರು, ಸುವರ್ಣ ನಾಗರಾಜ್ ರವರು, ಕುಮಾರ್ ಅವರು, ವಾರ್ಡ್ ಅಧ್ಯಕ್ಷರಾದ ಆಕೀಫ್ ರವರು ಕಾರ್ಯಕರ್ತರು ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close