ಕಂದಕದಲ್ಲಿ ಪತ್ತೆಯಾದ ಕಾಡಾನೆಯ ಮೃತದೇಹ



ಸುದ್ದಿಲೈವ್/ಶಿವಮೊಗ್ಗ

ವೀರಗಾರನ ಬೈನಕೊಪ್ಪದಲ್ಲಿ ರೈತನ ಗದ್ದೆಗೆ ಹೊಡದಿರುವ ಆನೆ ನಿರೋಧಕ  ಕಂದಕದಲ್ಲಿ ಬಿದ್ದು ಗಂಡು ಕಾಡಾನೆಯ ಮೃತದೇಹವೊಂದು ಪತ್ತೆಯಾಗಿದ್ದು, ಕಾಡಾನೆಯ ಸಾವು ಹಲವು ಅನುಮಾನಗಳನ್ನ ಹುಟ್ಟಿಹಾಕಿವೆ.  

ಪುರುದಾಳು, ಆಲದದೇವರ ಕೊಪ್ಪ, ಮಂಚರಿಕೊಪ್ಪ, ಸಿರಿಗೆರೆ ಮೊದಲಾದ ಕಡೆ ರೈತರ ಹೊಲಗಳಿಗೆ ಮತ್ತು ತೋಟಗಳಿಗೆ ಹಾವಳಿ ಇಡುತ್ತಿದ್ದ ಸುದ್ದಿಗಳ ನಡುವೆ ಕಾಡಾನೆಯೊಂದು ಸಾವನ್ನಪ್ಪಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. 

ವೀರಗಾರನ ಬೈರನಕೊಪ್ಪದಲ್ಲಿ  ಆನೆಗಳ ನಿರೋಧಕ ಕಂದಕದಲ್ಲಿ ಕಾಡಾನೆಯ ಶವ ಪತ್ತೆಯಾಗಿರುವ ಬಗ್ಗೆ ಪ್ರತಿಕ್ರಿಯಿಸಿರುವ ವನ್ನಜೀವಿ ಇಲಾಖೆಯ ಡಿಎಫ್ ಒ ಪ್ರಸನ್ನ ಕುಮಾರ್ ಪಟಗಾರ ಸಾವನ್ನಪ್ಪಿರುವುದು ಗಂಡಾನೆ ಆಗಿದ್ದು ಸುಮಾರು 30 ರಿಂದ 35 ವರ್ಷ ಇರಬಹುದಾಗಿ ತಿಳಿಸಿದ್ದಾರೆ. ಆನೆಯ ಮರಣೋತ್ತರ ಪರೀಕ್ಷೆಯ ನಂತರವೇ ಆನೆಯ ಸಾವಿನ ನಿಖರತೆ ಬಗ್ಗೆ ತಿಳಿಯಲಿದೆ ಎಂದು ಸ್ಪಷ್ಟಪಡಿಸಿದ್ದಾರೆ. 

ನಿನ್ನೆ ಗುಡ್ಡದ ಅರಕೆರೆ ಮತ್ತು ಸುತ್ತಮುತ್ತಲಿನ ಗ್ರಾಮಗಳಿಗೆ ತೆರಳಿದಾಗ ಗದ್ದೆಗಳಿಗೆ ಮತ್ತು ತೋಟಗಳಿಗೆ ವಿದ್ಯುತ್ ತಂತಿ ಅಳವಡಿಸಿರುವ ದೃಶ್ಯ ಕಂಡುಬಂದಿದ್ದು, ಇದರ ತೆರವಿಗೆ ಡಿಎಫ್ ಒ ಸೂಚನೆ ನೀಡಿದ್ದರು. ಆ ಸೂಚನೆ ನೀಡಿದ ಬೆನ್ನಲ್ಲೇ ವೀರಭೈರನಕೊಪ್ಪದ ಗ್ರಾಮದಲ್ಲಿ ಕಂದಕದಲ್ಲಿ ಆನೆಯ ಮೃತದೇಹ ಪತ್ತೆಯಾಗಿರುವುದು ಹಲವು ಅನುಮಾನಕ್ಕೂ ಕಾರಣವಾಗಿದೆ. ಆದರೆ ಮರಣೋತ್ತರ ಪರೀಕ್ಷೆ ನಂತರವೇ ಸ್ಪಷ್ಟತೆ ತಿಳಿಯುವುದರಿಂದ ವರದಿ ಏನು ಬರಲಿದೆ ಎಂಬುದು ಕುತೂಹಲ ಮೂಡಿಸಿದೆ.  

ಕಂದಕದಲ್ಲಿ ಪತ್ತೆಯಾಗಿರುವ ಕಾಡಾನೆಯ ಕಾಲು ಟ್ವಿಸ್ಟ್ ಆಗಿದೆ. ಈ ಆನೆ ಸತ್ತು ಎರಡು ದಿನಕಳೆದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಆನೆ ಸತ್ತಿರುವ ಹಿಂಭಾಗದಲ್ಲಿ ತಂತಿ ಬೇಲಿ ಕಂಡು ಬಂದಿದೆ. ಈ ತಂತಿಗಳ ಬಗ್ಗೆಯೂ ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ. ಒಟ್ಟಿನಲ್ಲಿ ಕಾಡಾನೆಗಳ ಹಾವಳಿಯ ಮಧ್ಯೆ  ಸಾವಿನ ಸುದ್ದಿಯೊಂದು ಸಂಚಲನದ ಜೊತೆಗೆ  ಅನುಮಾನಗಳನ್ನ ಹುಟ್ಟಿಸಿದೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close