ಶರಾವತಿ ಹಿನ್ನೀರಿನಲ್ಲಿ ಮೂವರು ನೀರು ಪಾಲು



ಸುದ್ದಿಲೈವ್/ಸಾಗರ

ಹೊಳೆ ಊಟಕ್ಕೆ ಹೋದ ಮೂವರು ಕಣ್ಮರೆಯಾಗಿರುವ ಘಟನೆ
ಕಳಸವಳ್ಳಿ ಬಳಿ ನಡೆದಿದೆ. 
ತೆಪ್ಪದ ಪ್ರಯಾಣದಲ್ಲಿ ಮುಳುಗಿ ನೀರು ಪಾಲಾಗಿದ್ದಾರೆ. 

ಮಧ್ಯಾಹ್ನ ನಡುಗಡ್ಡೆಯಲ್ಲಿ ಊಟಕ್ಕೆ ಹೋಗಿದ್ದ ಚೇತನ ಜೈನ (28) ಸಿಗಂದೂರು, ಸಂದೀಪ (30) ಹುಲಿದೇವರಬನ, ರಾಜು ಗಿನಿವಾರ (28) ಶರಾವತಿಯನೀರು ಪಾಲಾಗಿದ್ದರು. 

ನಡುಗಡ್ಡೆಯಲ್ಲಿ ಊಟಕ್ಕೆ ಹೋದವರು ಐದು ಜನರು. ಮದ್ಯಾಹ್ನ ಊಟ ಮುಗಿಸಿ ಆಚೆಯ ದಡದಿಂದ ಈಚೆಗೆ ತೆಪ್ಪದಲ್ಲಿ ಬರುತ್ತಿರುವಾಗ ತೆಪ್ಪ ಸಮತೋಲನ ಕಳೆದುಕೊಂಡು ಭಾಗಶಃ ಮುಳುಗಿದೆ. 

ಚೇತನ ಜೈನ (28) ಸಿಗಂದೂರು, ಸಂದೀಪ (30) ಹುಲಿದೇವರಬನ, ರಾಜು ಗಿನಿವಾರ (28) ಮುಳುಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಈ ಐವರಲ್ಲಿ ಇಬ್ವರು ವಿನಯ ಮತ್ತು ಯಶವಂತ ಈಜಿ ದಡ ಸೇರಿದ್ದಾರೆ. ಕಳಸವಳ್ಳಿ ಬಳಿಯ ಶರಾವತಿ ಹಿನ್ನೀರಿನಲ್ಲಿ ಘಟನೆ  ಈ ದಿನ ಮಧ್ಯಾಹ್ನ ನಡೆದಿದೆ. 

ನೀರುಪಾಲಾಗಿದ್ದ ಮೂವರ ಹುಡುಕಾಟದಲ್ಲಿ ಸಾಗರದ ಅಗ್ನಿಶಾಮಕ ದಳ ಮತ್ತು ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್ಐ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ. ಕತ್ತಲು ಆವರಿಸಿದ್ದರಿಂದ ಶೋಧಕಾರ್ಯ ಬೆಳಿಗ್ಗೆ ಮುಂದುವರೆಯುವ ನಿರೀಕ್ಷೆ ಇದೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close