ಸುದ್ದಿಲೈವ್/ಶಿವಮೊಗ್ಗ
ಜೆಎನ್ಎನ್ ಸಿಇ ಕಾಲೇಜಿನ ಸಿವಿಲ್ ಇಂಜಿನಿಯರ್ ವಿಭಾಗದ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ ತಂಡ ರಸ್ತೆ ಗುಂಡಿ ಮುಚ್ಚಲು ಕೋಲ್ಡ್ ಪಾಟ್ ಹೋಲ್ ಮಿಕ್ಸ್ ಉತ್ಪನ್ನವನ್ನ ಕಂಡು ಹಿಡಿದಿದ್ದು ಅದನ್ನ ಸಂಸದ ರಾಘವೇಂದ್ರ ಅವರ ಮೂಲಕ ಪರಿಚಿಯಸಲಾಯಿತು.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎನ್ ಇಎಸ್ ನ ಕಾರ್ಯದರ್ಶಿ ನಾಗರಾಜ್ ಮಾತನಾಡಿ, ಮಳೆಗಾಲದ ನಂತರ ರಸ್ತೆಗಳಲ್ಲಿ ಬೀಳುವ ಗುಂಡಿಗಳು ಕಂಡು ಬರುತ್ತಿದೆ. ಜೆಎನ್ ಎನ್ ಸಿಇಯ ಇಂಜಿನಿಯರ್ ವಿಭಾಗ 6-7 ವರ್ಷದಿಂದ ಶ್ರಮದಿಂದ ಹೊಸ ಉತ್ಪನ್ನ ಕಂಡುಹಿಡಿದಿದ್ದಾರೆ ಎಂದರು.
ಭದ್ರಾವತಿ ಶಿವಮೊಗ್ಗ ರಸ್ಯೆಯಲ್ಲಿ ಈ ಉತ್ಪನ್ನಗಳನ್ನ ಪ್ರಯೋಗಿಸಲಾಗಿದೆ. ಇದಕ್ಕೆ ಪೇಟೆಂಟ್ ಸಹ ಪಡೆಯಲಾಗಿದೆ. ಪೇಟೆಂಟ್ ಪಡೆದ ನಂತರ ಈ ಉತ್ಪನ್ನವನ್ನ ಅನಾವರಣಗೊಳಿಸಲಾಗುತ್ತಿದೆ. ರಸ್ತೆಯ ಗುಂಡಿಗಳನ್ನ ಮುಚ್ಚಿದ ತಕ್ಷಣ ಬಳಕೆಗೆ ಯೋಗ್ಯವಾಗಲಿದೆ ಎಂದರು.
ಉತ್ಪನ್ನವನ್ನ ಬಿಡುಗಡೆ ಮಾಡಿ ಮಾತನಾಡಿದ ಸಂಸದ ರಾಘವೇಂದ್ರ, ವಿಶೇಷವಾದ ಪ್ರಯೋಗವಾಗಿದೆ. ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿ ವಿದ್ಯಾರ್ಥಿನಿಯರು ಅನೇಕ ವರ್ಷಗಳಿಂದ ಪ್ರಯೋಗ ಮಾಡಿಕೊಂಡು ಬರುತ್ತಿದ್ದಾರೆ. ಕೋಲ್ಡ್ ಪಾಟ್ ಹೋಲ್ ಮಿಕ್ಸ್ ನ್ನ ಲೋಕಾರ್ಪಣೆ ಮಾಡಿರುವುದು ಹೆಮ್ಮೆಯ ವಿಚಾರವೆಂದರು.
3.15% ರಷ್ಟು ವರಚಷಕ್ಕೆ ಜಿಇಪಿ ನಷ್ಟ ಉಂಟಾಗುತ್ತಿದೆ. ಇದು ಆರೋಗ್ಯ ಮತ್ತು ಅಪಘಾತದಿಂದ ಸಂಭವಿಸುತ್ತದೆ. 2021 ನೇ ಸಾಲಿನಲ್ಲಿ ಪಾಟ್ ಹೋಲ್ಸ್ ನಿಂದ ವರ್ಷಕ್ಕೆ 3625 ಅಪಘಾತವಾದರೆ 1500 ರಷ್ಟು ಡೆತ್ ಆಗುತ್ತಿವೆ. 60%18 ವರ್ಷದ ಯುವಕರು ಅಪಘಾತಕ್ಕೊಳಗಾಗುತ್ತಿದ್ದಾರೆ. ಇದಕ್ಕೆ ಕೇಂದ್ರ ಸರ್ಕಾರ ಉತ್ತಮ ಕಾರ್ಯ ತೆಗೆದುಕೊಂಡಿದೆ. ಈ ವೇಳೆ ಜೆಎನ್ ಎನ್ ಸಿಇ ಕೋಲ್ಡ್ ಪಾಟ್ ಹೋಲ್ ಮಿಕ್ಸ್ ಉತ್ಪನ್ನ ತಯಾರಿಕೆ ಸಂತೋಷ ತಂದಿದೆ ಎಂದರು.
ಕೇಂದ್ರ ಸರ್ಕಾರದ ಲೋಕೋಪಯೋಗಿ ಇಲಾಖೆಯ ಗಡ್ಕರಿಯವರ ಬಳಿ ಈ ವಿಷಯ ಪ್ರಸ್ತಾಪಿಸಿ ದೆಹಲಿಗೆ ಕರೆಯಿಸಿಕೊಳ್ಳುವೆ. ಅಲ್ಲಿ ಅವರಿಗೆ ಮನವರಿಕೆ ಮಾಡಿಕೊಡುವುದಾಗಿ ಭರವಸೆ ನೀಡಿದರು.
ನಾಲ್ಕು ಇಂಡಿಗ್ರೇಂಟ್ಸ್ ಈ ಉತ್ಪನ್ನದಲ್ಲಿರುತ್ತದೆ. ಇದರಲ್ಲಿ ಜೆಲ್ಲಿ ಇರುತ್ತದೆ. ಆದರೆ ರಸ್ತೆಗೆ ಬಳಿಸುವ ಜೆಲ್ಲಿ ಅಲ್ಲ, ಬೇಬಿ ಜೆಲ್ಲಿ ಇರುತ್ತದೆ. ಕಟ್ ಬ್ಲಾಕ್ಸ್ ಸೇರಿ ನಾಲ್ಕು ಇಂಗ್ರೇಡಿಯೆಂಟ್ಸ್ ಮೂಲಕ ಉತ್ಪನ್ನಗಳನ್ನ ಬಳಸಲಾಗುತ್ತಿದೆ. ಇದರ ಬಾಳಿಕೆ ಸಹ 2-5 ವರ್ಷ ಬರಲಿದೆ. 850 ರೂ ಮತ್ರ ಗುಂಡಿ ಮುಚ್ಚಲು ಖರ್ಚಾಗುತ್ತದೆ ಎಂದು ಕಾಲೇಜಿನ ಇಂಜಿನಿಯರ್ ವಿಭಾಗದ ಉಪನ್ಯಾಸಕರು ವಿವರಿಸಿದರು.