ಜಿಲ್ಲಾ ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷರ ವಿರುದ್ಧ ವಂಚನೆಯ ದೂರು

ಸುದ್ದಿಲೈವ್/ಶಿವಮೊಗ್ಗ

ಜಿಲ್ಲಾ ಸರ್ಕಾರಿ ನೌಕರರ ಸಂಘದ ಚುನಾವಣೆಯಲ್ಲಿ ವಂಚನೆ ಪ್ರಕರಣದ ಆರೋಪದ ಅಡಿ ಜಿಲ್ಲಾ ಪೊಲೀಸ್ ಇಲಾಖೆಯ ಎಫ ಡಿಎ ಹಾಗೂ ಜಿಲ್ಲಾ ನೌಕರರ ಸಂಗದ ಉಪಾಧ್ಯಕ್ಷರ ವಿರುದ್ಧ ದೂರು ದಾಖಲಾಗಿದೆ.  

ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ಸತೀಶ್ ಡಿ.ವಿ. ಎಂಬುವರು ಜಿಲ್ಲಾ ಸರ್ಕಾರಿ ನೌಕರರ ಸಂಘಕ್ಕೆ 2018 ನೇ ಸಾಲಿನಲ್ಲಿ ನಡೆದ ಸರ್ಕಾರಿ ನೌಕರರ ಸಂಘಕ್ಕೆ ಅವಿರೋಧವಾಗಿ ಆಯ್ಕೆಯಾಗಿ ನೇಮಕವಾಗಿದ್ದರು. ಈ ಹಿಂದಿನ ಸಾಲಿನಲ್ಲಿಯೂ ಸಹ ಇವರೇ ಸಂಘಕ್ಕೆ ಅವಿರೋಧವಾಗಿ ಆಯ್ಕೆಯಾಗಿದ್ದರು. 2019 ರ ವರ್ಷದಲ್ಲಿ ಜಿಲ್ಲಾ ಸರ್ಕಾರಿ ನೌಕರರ ಸಂಘಕ್ಕೆ ಸದಸ್ಯತ್ವ ಶುಲ್ಕವು ಜನವರಿ -2019 ರ ಮಾಹೆಯ ಸಂಬಳದಲ್ಲಿ ಕೆಲವು ಸದಸ್ಯರ ಕಟಾವಣೆಯಾಗಿತ್ತು.

ನಂತರದಲ್ಲಿ ಸಂಘದ ನಿರ್ದೇಶಕರಾಗಿ ಆಯ್ಕೆಯಾಗಿರುವ ಸತೀಶ್ ಡಿ.ವಿ. ಇವರು ಹೆಚ್ ಆರ್ ಎಂ ಎಸ್ ನಲ್ಲಿ ಸದಸ್ಯತ್ವದ ಶುಲ್ಕವು ಕಟಾವಣೆಯಾಗುತ್ತಿಲ್ಲವೆಂದು 2020 ರ ವರ್ಷದಲ್ಲಿನ ಸದಸ್ಯತ್ವ ಶುಲ್ಕವನ್ನು ನಗದು ರೂಪದಲ್ಲಿ ನಿರಂತರವಾಗಿ 2023 ನೇ ವರ್ಷದವರೆಗೆ ವಾರ್ಷಿಕ ಸದಸ್ಯತ್ವದ ಶುಲ್ಕವನ್ನು ನಗದು ರೂಪದಲ್ಲಿ ಕಛೇರಿಯಲ್ಲಿನ ಎಲ್ಲಾ ಲಿಪಿಕ ಸಿಬ್ಬಂದಿಗಳಿಂದ ಪಡೆದಿದ್ದರು. 

ಅದರಲ್ಲಿ 2021 ರ ವರ್ಷದ ಸದಸ್ಯತ್ವ ಶುಲ್ಕವನ್ನು ಸಂಘಕ್ಕೆ ಪಾವತಿಸಿರುವುದಿಲ್ಲ. ತದನಂತರ 2024 ರ ವರ್ಷದ ಸದಸ್ಯತ್ವದ ಶುಲ್ಕವನ್ನು ಕಛೇರಿಯ ಲಿಪಿಕ ಸಿಬ್ಬಂದಿಗಳಿಂದ ಹಣವನ್ನು ಕೆಲವರಿಂದ ಪೋನ್ ಪೇ ಮೂಲಕ ಹಾಗೂ ಕೆಲವರಿಂದ ನಗದು ರೂಪದಲ್ಲಿ ಪಡೆದಿದ್ದರು. ಆದರೆ 2024 ರ ಸದಸ್ಯತ್ವದ ಶುಲ್ಕವನ್ನು ಸಂಘಕ್ಕೆ ಪಾವತಿಸದೇ ನಮಗೆ ಗೊತ್ತಾಗದ ರೀತಿಯಲ್ಲಿ ಚುನಾವಣೆಗೆ ನಾವುಗಳು ಯಾರೂ ಸಹ ಸಂಘದ ಬೈಲಾ ಪ್ರಕಾರ ಅಭ್ಯರ್ಥಿಯಾಗಿ ಸ್ಪರ್ಧಿಸಬಾರದೆಂಬ ದುರುದ್ದೇಶದಿಂದ ಈ ಮೋಸವನ್ನು  ಮಾಡಿರುತ್ತಾರೆ ಎಂದು ಶಾಶ್ವತ್ ಎಂಬುವರು ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿದ್ದರು. 

ಸರ್ಕಾರಿ ನೌಕರನಾಗಿರುವ ಸತೀಶ್, ಜಿಲ್ಲಾ ಸರ್ಕಾರಿ ನೌಕರರ ಸಂಘದಲ್ಲಿ ಉಪಾಧ್ಯಕ್ಷನಾಗಿ ನೇಮಕಗೊಂಡಿದ್ದಾರೆ. ನಮ್ಮ ಸದಸ್ಯತ್ವ ಶುಲ್ಕದ ಹಣವನ್ನು ವೈಯುಕ್ತಿಕ ದುರ್ಬಳಕೆ ಮಾಡಿರುತ್ತಾರೆ. ಆದ್ದರಿಂದ ಇವರ ಮೇಲೆ ಕಾನೂನು ಕ್ರಮಕೈಗೊಳ್ಳಬೇಕೆಂದು ಕೋರಿಕೊಳ್ಳುತ್ತೇನೆ ಎಂದು ದೂರು ದಾಖಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close