ಸುದ್ದಿಲೈವ್/ಶಿವಮೊಗ್ಗ
ನಗರ ಪಾಲಿಕೆಯಲ್ಲಿ ಇಂದು ಪೌರಾಡಳಿತ ಸಚಿವ ರಹೀಮ್ ಖಾನ್ ಅವರ ಉಪಸ್ಥಿತಿಯಲ್ಲಿ ಪ್ರಗತಿ ಪರಿಶೀಲನೆ ನಡೆದಿದೆ. ಪ್ರಗತಿ ಪರಿಶೀಲನೆಯಲ್ಲಿ ತೆರಿಗೆ ಸಂಗ್ರಹದ ಬಗ್ಗೆ, ಪೌರ ಕಾರ್ಮಿಕರ ನೇಮಕಾತಿ ಬಗ್ಗೆ, ಡ್ರೋಣ್ ಸರ್ವೆ ಕುರಿತು ಸಭೆಗೆ ತಿಳಿಸಲಾಯಿತು.
ನೇಮಕಾತಿ ಡಿ.10 ರಂದು ನೋಟಿಫಿಕೇಷನ್ ಹೊರಡಿಸಿ ಜನವರಿ 15 ದ ಒಳಗೆ ಜಿಲ್ಲೆಯ 11 ಸ್ಥಳೀಯ ಸಂಸ್ಥೆಗಳಲ್ಲಿ ಖಾಲಿ ಇರುವ ಪೌರಕಾರ್ಮಿಕರ ಹುದ್ದೆ ಭರ್ತಿ ಮಾಡಲಾಗುವುದಾಗಿ ಸಭೆಯ ಆರಂಭದಲ್ಲಿ ಅಧಿಕಾರಿಗಳು ತಿಳಿಸಿದರು.
ಈ ವೇಳೆ ನದಿಯ ನೀರು ಕಲುಷಿತ ವಾಗುತ್ತಿರುವುದನ್ನ ಶಾಸಕಿ ಬಲ್ಕಿಸ್ ಬಾನು ತಿಳಿಸಿದರು. ಭದ್ರಾವತಿಯಲ್ಲಿ ನದಿಗೆ ತ್ಯಜ್ಯ ಬಿಡಲಾಗುತ್ತಿದೆ ಎಂದು ಸಭೆಯ ಗಮನ ಸೆಳೆದರು. ವಾಟರ್ ಬೋರ್ಡ್ನ ಮಿಥುನ್ ಕುಮಾರ್ ಮಾತನಾಡಿ, ಹೊಸನಗರದಲ್ಲಿ ಕುಡಿಯುವ ನೀರಿಗೆ 8 ಕೋಟಿ ನಿಗದಿ ಪಡಿಸಲಾಗಿದೆ. 4 ಬಾರಿ ಟೆಂಡರಿಂಗ್ ಆಗ್ತಾ ಇದೆ. ತೀರ್ಥಹಳ್ಳೊಯಲ್ಲಿ ಕುಡಿಯುವ ನೀರಿಗೆ 2.69 ಕೋಟಿ ಹಣಕ್ಕೆ ಟೆಂಡರ್ ಕರಡಯಲಾಗಿದೆ.
ಆನವಟ್ಟಿಯಲ್ಲಿ 45 ಕೋಟಿ ಕುಡಿಯುವ ನೀರಿಗೆ 4 ಬಾರಿ ಟೆಂಡರ್ ಕರೆಯಲಾಗಿದೆ ಎಂದು ತಿಳಿಸಿದರು. 7 ಇಂದಿರಾ ಕ್ಯಾಂಟೀನ್ ಸ್ಯಾಕ್ಷನ್ ಆಗಿದೆ. ಸೊರಬ ನತ್ತು ಆನವಟ್ಟಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ನಿರ್ದೇಶನದ ಮೇರೆ ಸ್ಥಳ ಬದಲಾಯಿಸಲಾಗಿದೆ. ಉಳಿದ ಐದು ತಾಲೂಕು ಮತ್ತು ಹೋಬಳಿಯಲ್ಲಿ ಆರಂಭಿಸುವುದಾಗಿ ಅಧಿಕಾರಿ ತಿಳಿಸಿದರು.
ಶಿವಮೊಗ್ಗದಲ್ಲಿ ಇಂದಿರಾ ಕ್ಯಾಂಟೀನ್ ನ ಉಸ್ತುವಾರಿ ಬಗ್ಗೆ ಸಚಿವರು ಅಧಿಕಾರಿಗಳಿಗೆ ಮಾಹಿತಿ ನೀಡಲು ತಿಳಿಸಿದರು. ಇಂದು ಊಟಕ್ಕೆ ಚಪಾತಿ ಮತ್ತು ರೊಟ್ಟಿ ಇತ್ತು. ಬೇರೆ ಸಮಯದಲ್ಲಿ ಏನು ಇಲ್ಲದಿರುವ ಬಗ್ಗೆ ಸಚಿವರು ಆಕ್ಷೇಪಿಸಿದರು. ಊಟ ಮತ್ತು ತಿಂಡಿಯ ಲೆಕ್ಕಾಚಾರ ಹೇಗೆ ಮಾಡುತ್ತೀರಿ ಎಂದು ಸಚಿವರು ಕೇಳಿದರು. ಅದಕ್ಕೆ ಉತ್ತರಿಸಿದ ಅಧಿಕಾರಿಗಳು ಇನ್ನು ಮುಂದೆ ಆಪ್ ಮೂಲಕ ಟೋಕನ್ ನೀಡುವ ಬಗ್ಗೆ ಚಿಂತಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದರು.
ಇಂದಿರಾ ಗಾಂಧಿ ಮಾನಿಟರಿಂಗ್ ಮಾಡುವ ಬಗ್ಗೆ ಎಚ್ಚರಿಕೆವಾಗಿರುವಂತೆ ಡಿಸಿಗೂ ಸಚಿವರು ತಿಳಿಸಿದರು. ರಸ್ತೆ, ಚರಂಡಿ, ಕುಡಿಯುವ ನೀರನ ಬಗ್ಗೆ ಹೆಚ್ಚಿನ ಗಮನ ಹರಿಸಿ ಎಂದು ಸಚಿವರು ತಿಳಿಸಿದರು.
ಡಿಸಿ ಗುರುದತ್ತನ್ನ ಹಾಡಿ ಹೊಗಳಿದ ಸಚಿವರ ರಹೀಮ್ ಖಾನ್, ಗುರುದತ್ತ ಗೆಗಡೆಯವರು ಮೊದಲ ಪೋಸ್ಟ್ ಬೀದರ್, ಆಗ ನಾನು ಎಙೆಲ್ ಎ ಆಗಿದ್ದೆ. ಅಲ್ಲಿ ಗುರುದತ್ ಅವರು ಒಳ್ಳೆಯ ಕೆಲಸ ಮಾಡಿರುವುದಾಗಿ ಹಾಡಿ ಹೊಗಳಿದರು. 181ಲಕ್ಷ ಭದ್ರಾವತಿ ಆಸ್ತಿ ತೆರಿಗೆಯಲ್ಲಿ ಬಹುತೇಕ ಸಂಗ್ರಹವಾಗಿದೆ. ಶೇ.53.99% ಸಂಗ್ರಹವಾಗಿದೆ.ಸಾಗರದಲ್ಲಿ 23,058 ಸಾವಿರ ಆಸ್ತಿಯಿದೆ. 67.91% ಸಂಗ್ರಹವಾಗಿದೆ ಎಙದು ಅಧಿಕಾರಿಗಳು ಸಭೆ ತಿಳಿಸಿದರು.
ನಂತರ ಮಾತನಾಡಿದಿದ ಸಚವರು, ಅರ್ಧ ಪರಮಿಷನ್ ಪಡೆದು ಎಲ್ಲೆಡೆ ಲೇಔಟ್, ಬಿಲ್ಡಿಂಗ್ ಗೆ ಪರವಾನಿಗೆ ಪಡೆಯಲಾಗಿದೆ. ಎಲ್ಲರಿಗೂ ತೆರಿಗೆ ವಿಧಿಸಬೇಕಿದೆ. ಎ ಖಾತಾ ಮತ್ತು ಬಿ ಖಾತವನ್ನ ಇಡೀ ರಾಜ್ಯಕ್ಕೆ ಅನ್ವಯವಾಗುವಂತೆ ಒಂದು ತಿಂಗಳಲ್ಲಿ ಜಾರಿಗೆ ಆಗಲಿದೆ ಎಂದರು. ಅಕ್ರಮ ಸಕ್ರಮ ರೀತಿಯಲ್ಲಿ ಎ ಖಾತಾ ಮತ್ತು ಬಿ ಖಾತ ಮಾಡಲಾಗುವುದು. ಎರಡು ತಿಂಗಳಲ್ಲಿ ಸಿಬ್ವಂದಿಗಳ ಕೊರತೆ ನೀಗಿಸಲಾಗುವುದು ಎಂದರು.
ಶಿವಮೊಗ್ಗದಲ್ಲಿ ಸ್ವಚ್ಛತೆ ಕಂಡು ಬಂದಿದೆ. ಶಿವಮೊಗ್ಗದಲ್ಲಿ ಪಾಲಿಕೆ ಹೆಚ್ಚಿನ ಸ್ವಚ್ಛತೆ ಕಾಪಾಡಿಕೊಂಡು ಬರಲಾಗುತ್ತಿದೆ ಎಂದು ಸರ್ಡಿಫಿಕೇಟ್ ನೀಡಿದರು. ತೆರಿಗೆ ಸಂಗ್ರಹಕ್ಕೆ ಡ್ರೋಣ್ ಸರ್ವೆ ಅಗತ್ಯವಿದೆ, ಒಂದು ಕಟ್ಟಡಕ್ಕೆ ಅನುಮತಿ ಪಡೆದು ಮೂರು ಅಂತಸ್ತು ಪಡೆದಿದ್ದಾರೆ ಅದರ ಬಗ್ಗೆ ತೆರಿಗೆ ಸಂಗ್ರಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.