ಮಾಜಿ ಡಿಸಿಎಂ ವಿರುದ್ಧದ ಸುಮೋಟೋ ಪ್ರಕರಣ ರದ್ದುಗೊಳಿಸಲು ಮನವಿ



ಸುದ್ದಿಲೈವ್/ಶಿವಮೊಗ್ಗ

ಹಿಂದೂ ಹುಲಿ ಕೆ.ಎಸ್ ಈಶ್ವರಪ್ಪನವರ ವಿರುದ್ಧ ಜಯನಗರ ಪೊಲೀಸ್ ಠಾಣೆಯಲ್ಲಿ ಸುಮೋಟೋ‌ ದಾಖಲಾಗಿರುವುದನ್ನ ರದ್ದುಗೊಳಿಸುವಂತೆ ಆಗ್ರಹಿಸಿ ರಾಷ್ಟ್ರಭಕ್ತರ ಬಳಗದ ವತಿಯಿಂದ ಎಸ್ಪಿ ಮಿಥುನ್ ಕುಮಾರ್ ಗೆ ಮನವಿ ಸಲ್ಲಿಸಿತು. 

ಕೆ.ಈ.ಕಾಂತೇಶ್ ನೇತೃತ್ವದಲ್ಲಿ ಐಬಿ ವೃತ್ತದಿಂದ‌ ಎಸ್ಪಿ ಕಚೇರಿಯ ವರೆಗೆ ಪಾದಯಾತ್ರೆಯಲ್ಲಿ ಬಂದ ರಾಷ್ಟ್ರಭಕ್ತರ ಬಳಗ ಮನವಿ ಸಲ್ಲಿಸಿದೆ.  ನ.13 ರಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತ ಕರ್ನಾಟಕ ರಾಜ್ಯದಲ್ಲಿ ವಕ್ಸ್ ಬೋರ್ಡ್ ಬಡ ರೈತರ ಜಮೀನು, ಹಿಂದೂ ಮಠ ಮಂದಿರಗಳ ಆಸ್ತಿ, ಸರ್ಕಾರಿ ಶಾಲಾ ಕಾಲೇಜುಗಳ ಜಾಗ, ಸಾವಿರಾರು ವರ್ಷಗಳ ಇತಿಹಾಸವಿರುವ ಹಿಂದೂ ದೇವಾಲಯಗಳು, ವಿಶ್ವೇಶ್ವರಯ್ಯನವರು ಜನಿಸಿದ ಸಂಪೂರ್ಣ ಗ್ರಾಮ ಹಾಗು ಪುರಾತತ್ವ ಇಲಾಖೆಗೆ ಸೇರಿದ ಜಾಗಗಳನ್ನೂ ಸಹಾ ತನ್ನವೆಂದು ಅಕ್ರಮವಾಗಿ ಅಧಿಕಾರಿಗಳ ಮೇಲೆ ಪ್ರಭಾವ ಬೀರಿ ದಾಖಲೆಗಳನ್ನು ತಿದ್ದುಪಡಿಮಾಡಿ ನೋಟೀಸ್ ಕೊಡುತ್ತಿರುವುದನ್ನು ಖಂಡಿಸಿರುತ್ತಾರೆ.

ಹಾಗೂ ಒಬ್ಬ ಪ್ರಭಾವಿ ಮುಸ್ಲಿಮ್ ನಾಯಕ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಮುಸ್ಲಿಮನಾಗಿ ಮತಾಂತರ ಹೊಂದಲು ಯೋಚಿಸಿದ್ದರು ಎಂದು ಸುಳ್ಳು ಹೇಳುವುದರ ಮೂಲಕ ನಮ್ಮ ಸಂವಿಧಾನ ತಿಲ್ಪಿಗೆ ಅಪಮಾನ ಮಾಡಿದ್ದಾರೆ. ಅಲ್ಲದೆ ಸರ್ಕಾರಿ ಉದ್ಯೋಗದಲ್ಲಿ ಮುಸ್ಲಿಮರಿಗೆ 44 ಮೀಸಲಾತಿ ಕೊಡುವುದಾಗಿ ಮುಖ್ಯಮಂತ್ರಿಗಳು ಹೇಳಿಕೆ ನೀಡಿರುವುದನ್ನು ಶ್ರೀಯುತ ಈಶ್ವರಪ್ಪನವರು ಖಂಡಿಸಿರುತ್ತಾರೆ.


ಇಷ್ಟೆಲ್ಲಾ ಆಚಾತುರ್ಯಗಳನ್ನು ಕಾಂಗ್ರೇಸ್ ನೇತೃತ್ವದ ರಾಜ್ಯಸರ್ಕಾರ ಮಾಡುತ್ತಿದ್ದರೂ ಕಾಂಗ್ರೇಸ್ ಪಕ್ಷದ ಯಾವೊಬ್ಬ ನಾಯಕರು ಇದನ್ನು ಖಂಡಿಸುತ್ತಿಲ್ಲ. ಇದನ್ನು ಗಮನಿಸಿದಾಗ ನಮಗನ್ನಿಸುವುದೇನೆಂದರೆ ಕಾಂಗ್ರೇಸ್ ಪಕ್ಷಕ್ಕೆ ನಮ್ಮ ರೈತರ ಬಗ್ಗೆ ಕಾಳಜಿ ಇಲ್ಲ, ಹಿಂದೂ ಮಠ ಮಂದಿರ ಹಾಗೂ ಸಾಧು ಸಂತರಲ್ಲಿ ಭಕ್ತಿ ಗೌರವಗಳಿಲ್ಲ ಎಂಬುದು ಅರಿವಾಗುತ್ತದೆ. 

ಆದ್ದರಿಂದ ಬಹುಸಂಖ್ಯಾತರಾದ ಹಿಂದೂಗಳ ರಕ್ಷಣೆ, ಬಡ ರೈತರ ಜಮೀನು ಉಳಿಸಲು, ಮಠ ಮಂದಿರಗಳ ಆಸ್ತಿ ಉಳಿಸಲು ಸಮಸ್ತ ಹಿಂದು ಸಮಾಜ ಸಾಧು ಸಂತರ, ಮಠಾಧೀಶರುಗಳ ನೇತೃತ್ವದಲ್ಲಿ ಹೋರಾಟಕ್ಕಿಳಿದರೆ ಅದು ಎಂತಹಾ ಅನಾಹುತಕ್ಕೆ ಎಡೆಮಾಡಿಕೊಡಬಹುದೆಂಬ ಎಚ್ಚರಿಕೆಯನ್ನು ಶ್ರೀ ಈಶ್ವರಪ್ಪನವರು ನೀಡಿರುತ್ತಾರೆ.

ಆದರೆ, ಹಿಂದೂ ಸಮಾಜದ ಹಿತದೃಷ್ಟಯಿಂದ ಹಾಗು ಬಡ ರೈತರ ಕಾಳಜಿಯಿಂದ ನೀಡಿದ ಹೇಳಿಕೆಯಿಂದ ವಿಚಲಿತಗೊಂಡಿರುವ ಕಾಂಗ್ರೇಸ್ ಸರ್ಕಾರ ಶ್ರೀಯುತ ಕೆ.ಎಸ್.ಈಶ್ವರಪ್ಪನವರ ವಿರುದ್ಧ ದುರುದ್ದೇಶದಿಂದ ಶಿವಮೊಗ್ಗ ನಗರದ ಜಯನಗರ ಪೋಲೀಸ್ ಠಾಣೆಯಲ್ಲಿ ಸ್ವಯಂ ಪ್ರೇರಿತ ದೂರು ದಾಖಲಿಸಿದೆ. ಇದು ಸಂಪೂರ್ಣ ರಾಜಕೀಯ ಪ್ರೇರಿತ ವೈಷಮ್ಯದ ನಡೆಯಾಗಿದ್ದು ನಾವು ಇದನ್ನು ಉಗ್ರವಾಗಿ ಖಂಡಿಸುತ್ತೇವೆ.

ಹಾಗು ದಾಖಲಿಸಿರುವ ದೂರನ್ನು ಈ ಕೂಡಲೇ ಹಿಂಪಡೆದು ಶ್ರೀ ಈಶ್ವರಪ್ಪನವರು ನಡೆಸುತ್ತಿರುವ ಹೋರಾಟಕ್ಕೆ ಯಾವುದೇ ರೀತಿಯ ತಡೆಯೊಡ್ಡಬಾರದೆಂದು ಈ ಮೂಲಕ ಆಗ್ರಹಿಸುತ್ತೇವೆ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ತೀವ್ರತರವಾದ ಹೋರಾಟವನ್ನು ಮಾಡಲಾಗುವುದೆಂದು ಈ ಮೂಲಕ ಎಚ್ಚರಿಸುತ್ತಿದ್ದೇವೆ ಎಂದು ಮನವಿಯಲ್ಲಿ ತಿಳಿಸಲಾಗಿದೆ. 

ರಾಷ್ಟ್ರಭಕ್ತ ಬಳಗದ ಶಿವಾಜಿ, ವಿಶ್ವಾಸ್, ಎಂ. ಶಂಕರ್ ರಾವ್, ಶಂಕರ್ ಗನ್ನಿ, ಸೀತಾಲಕ್ಷ್ಮೀ, ಮಹಾಲಿಂಗ ಶಾಸ್ತ್ರಿಗಳು ಜಾದವ್ ಮೊದಲಾದವರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close