ಸುದ್ದಿಲೈವ್/ಶಿವಮೊಗ್ಗ
ನಿರ್ಮಲ ತುಂಗಭದ್ರಾ ಅಭಿಯಾನದ ಜನ ಜಾಗೃತಿ ಹಿನ್ನಲೆಯಲ್ಲಿ ಮೂರನೇ ದಿನವಾದ ಇಂದು ಯುವ ಜಾಗೃತಿ ಕಾರ್ಯಕ್ರಮ ಜರುಗಿದೆ. ನಗರದ ಕುವೆಂಪು ರಂಗ ಮಂದಿರದ ಆವರಣದಲ್ಲಿ ಕಾರ್ಯಕ್ರಮ ನಡೆದಿದೆ.
ನದಿಗಳ ಬಗ್ಗೆ ಯುವಕರಲ್ಲಿ ಜಾಗೃತಿ ಮೂಡಿಸಲು ಹಮ್ಮಿಕೊಂಡ ಈ ಕಾರ್ಯಕ್ರಮವನ್ನ ಪರ್ಯಾವರಣ ಟ್ರಸ್ಟ್ ಹಾಗೂ ನಿರ್ಮಲ ತುಂಗಭದ್ರಾ ತಂಡದಿಂದ ಕಾರ್ಯಕ್ರಮ ನಡೆದಿದೆ.
ಕಾರ್ಯಕ್ರಮಕ್ಕೆ ಬೆಕ್ಕಿನಕಲ್ಮಠದ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಶ್ರೀಗಳು ನದಿಯ ನೈರ್ಮಲ್ಯದ ಬಗ್ಗೆ ಯುವಕರಲ್ಲಿ ಜಾಗೃತಿ ಅಗತ್ಯ. ಮನುಷ್ಯನ ನಾಗರೀಕತೆ ಹುಟ್ಟಿರುವುದೇ ನದಿ ಪಾತ್ರದಲ್ಲಿ. ಹಾಗಾಗಿ ಪ್ರಕೃತಿ ದತ್ತವಾಗಿ ಬಂದಂತಹ ಗಾಳಿ, ಬೆಳಕು ಹಾಗೂ ನೀರನ್ನ ಮುಂದಿನ ಪೀಳಿಗೆಗೆ ಜಾಗೃತಿಯಾಗಿ ಸಾಗಿಸುವ ಜವಬ್ದಾರಿ ನಮ್ಮೆಲ್ಲರದ್ದೂ ಇದೆ ಎಂದರು.
ಆ ನಿಟ್ಟಿನಲ್ಲಿ 400 ಕಿಮಿ ಉದ್ದದ ಅರಿವು ಅರ್ಥಪೂರ್ಣವಾಗಿದೆ ಎಂದ ಅವರು, ತುಂಗ ಭದ್ರೆ, ಕಾವೇರಿ ಗಂಗೆಯ ತಪ್ಪಲಿನಲ್ಲಿ ಬೆಳೆದು ಬಂದ ಸಂಸ್ಕೃತಿಗಳ ಉಳಿವೂ ಸಹ ನದಿಯ ನೈರ್ಮಲ್ಯದಲ್ಲಿ ಅಡಗಿದೆ. ಈ ನಿಟ್ಟಿನಲ್ಲಿ ಯುವಕರನ್ನ ದೊಡ್ಡ ಸಂಖ್ಯೆಯಲ್ಲಿ ಕರೆತಂದು ಅಭಿಯಾನದಲ್ಲಿ ತೊಡಗಿಸಿಕೊಂಡಿರುವುದು ಅರ್ಥಗರ್ಭಿತವೆಂದರು.
ನ. 6 ರಿಂದ ಶೃಂಗೇರಿಯಿಂದ ಆರಂಭವಾಗಿರುವ ತುಂಗಭದ್ರಾ ಅಭಿಯಾನ ಇಂದು 100 ಕಿಮಿ ಕ್ರಮಿಸಿದೆ. ಇಂದು ಶಿವಮೊಗ್ಗದಿಂದ ಮುಂದಿನ ಊರಿಗೆ ಸಾಗಿಸಲಾಗಿದೆ. ತುಂಗಭದ್ರಾ ಉಳಿವಿಗಾಗಿ 400 ಕಿಲೋ ಮೀಟರ್ ಪಾದಯಾತ್ರೆ ಹಮ್ಮಿಕೊಂಡಿರುವ ತುಂಗಾ ಅಭಿಯಾನ ತಂಡ ಮುಂದಿನ 300 ಕಿಮಿ ದೂರ ಕ್ರಮಿಸನೇಕಿದೆ.
ಕಾರ್ಯಕ್ರಮದಲ್ಲಿ ಭಾಗಿಯಾದ ಸಾವಿರಾರು ಕಾಲೇಜು ವಿದ್ಯಾರ್ಥಿಗಳು, ಶಾಸಕ ಚನ್ನಬಸಪ್ಪ, ಎಂಎಲ್ ಸಿ ಡಿ.ಎಸ್ ಅರುಣ್ ಮೊದಲಾದವರು ಭಾಗಿಯಾಗಿದ್ದರು.