ಸುದ್ದಿಲೈವ್/ಶಿವಮೊಗ್ಗ
ಗಾಂಜಾ ಪ್ರಕರಣದಲ್ಲಿ ಸಾಗರದ ಯುವಕನೋರ್ವನನ್ನ ಬಂಧಿಸಿರುವ ಸೊರಬ ಪೊಲೀಸರು ನ್ಯಾಯಾಂಗ ಬಂಧನಕ್ಕೊಳಪಡಿಸಿದ್ದಾರೆ.
ಈ ಗಾಂಜಾ ಪ್ರಕರಣ ಹಲವು ಕುತೂಹಲ ಭರಿತವಾಗಿರುವ ಅನುಮಾನಗಳಿಗೂ ಕಾರಣವಾಗಿದೆ. ಎರಡು ದಿನಗಳ ಹಿಂದೆ ಸಾಗರದ ಯುವಕನನ್ನ ಎಂಬಾತನನ್ನ ಬಂಧಿಸಿರುವ ಸಾಗರ ಪೊಲೀಸರು ಆತನ ಬಂಧನಕ್ಕೆ ಕುಟುಂಬಸ್ಥರಿಗೆ ಮಾಹಿತಿ ನೀಡಿಲ್ಲ ಎಂಬ ಆರೋಪ ಮಾಡಿದ್ದಾರೆ.
ಸೊರಬದ ಪೊಲೀಸರು ಸಾಗರದ ಯುವಕನನ್ನ ಕರೆದುಕೊಂಡು ಹೋಗಿರುವುದಾಗಿ ಹೇಳಿರುವ ಕುಟುಂಬ ಕಳೆದ ಎರಡು ದಿನಗಳಿಂದ ಆತನ ದ್ವಿಚಕ್ರ ವಾಹನ ಸೊರಬ ಠಾಣೆಯ ಮುಂದೆ ನಿಂತಿದೆ. ಕುಟುಂಬಸ್ಥರಿಗೆ ಮಾಹಿತಿ ನೀಡದಿರುವುದರಿಂದ ಅವರ ಆತಂಕ ಹೆಚ್ಚಿಸಿದೆ.
ಆದರೆ ಸೊರಬ ಪೊಲೀಸರು ಆತನನ್ನ ಎನ್ ಡಿಪಿಎಸ್ ಕಾಯ್ದೆಯ ಅಡಿಯಲ್ಲಿ ಬಂಧಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ. ಆದರೆ ಆತ ಸಾಗರದ ಯುವಕ ಅಲ್ಲ ಎಂದು ಸಹ ಸ್ಪಷ್ಟಪಡಿಸಿದ್ದಾರೆ. ಈ ಪ್ರಕರಣದ ಆರೋಪಿ ಏನೇ ಆಗಲಿ, ಗಾಂಜಾ ಪ್ರಕರಣದಲ್ಲಿ ಬಂಧಿತನಾಗಿರುವ ಯುವಕನಿಗೆ ಇಸ್ಪೀಟ್ ಆಟಕ್ಕೆ ಲಿಂಕಿದೆಯಾ ಎಂಬ ಅನುಮಾನ ವ್ಯಕ್ತವಾಗುತ್ತಿದೆ.
ಮರೂರು ಗ್ರಾಮದ ರಾಮಪ್ಪನವರ ಗದ್ದೆಯ ಮೇಲ್ಭಾಗದಲ್ಲಿರುವ ಅರಣ್ಯ ಪ್ರದೇಶದಲ್ಲಿ ಇಸ್ಪೀಟ್ ಆಡುತ್ತಿದ್ದ ವೇಳೆ ಸೊರಬ ಪಿಎಸ್ ಐ ದಾಳಿ ನಡೆಸಿ ಸಂತೋಷ್, ಮಂಜು, ಪ್ರದೀಪ್ ಹಾಗೂ ಮಧು ಎಂಬುವರನ್ನ ಬಂಧಿಸಿದ್ದರು. ಇಲ್ಲಿ ಗಾಂಜಾದ ವಾಸನೆ ಹೊಡೆದಿದೆಯೇ ಎಂಬ ಅನುಮಾನ ಸಹ ಹೊರಬಿದ್ದಿದೆ. ಈ ಪ್ರಕರಣದಲ್ಲಿ ಸಾಗರದ ಯುವಕನ ಲಿಂಕ್ ಇದೆಯಾ ಎಂಬ ಶಂಕೆ ಸಹ ವ್ಯಕ್ತವಾಗಿದೆ.