ಜಿಲ್ಲಾ ಬಂಜಾರ ಸಂಘದ ಆಡಳಿತಾಧಿಕಾರಿಗಳ ನೇಮಕಕ್ಕೆ ತಡೆಯಾಜ್ಞೆ

 


ಸುದ್ದಿಲೈವ್/ಶಿವಮೊಗ್ಗ

ನಗರದ ಬಾಲರಾಜ್ ಅರಸ್ ರಸ್ತೆಯಲ್ಲಿರುವ ಜಿಲ್ಲಾ ಬಂಜಾರ ಸಂಘಕ್ಕೆ ರಾಜ್ಯ ಸಹಕಾರ ಸಂಘಗಳ ಅಧೀನ ಕಾರ್ಯದರ್ಶಿಗಳು ನೇಮಿಸಿದ್ದ ಆಡಳಿತ ಅಧಿಕಾರಿಗಳ ನೇಮಕಕ್ಕೆ ರಾಜ್ಯ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. 

ಅಧೀನ ಕಾರ್ಯದರ್ಶಿಗಳು ಅ.24 ರಂದು ಸಂಘದಲ್ಲಿ ಭ್ರಷ್ಟಾಚಾರದ ಅಡಿಯಲ್ಲಿ ಸಂಘದ ಪದಾಧಿಕಾರಿಗಳನ್ನ ವಜಾಗೊಳಿಸಿ ತಹಶೀಲ್ದಾರ್ ಅವರನ್ನ ಸಂಘದ ಆಡಳಿತಾಧಿಕಾರಿಯನ್ನಾಗಿ ನೇಮಿಸಿ ಆದೇಶಿದ್ದರು. 

ಈ ಆದೇಶದ ವಿರುದ್ಧ ಸಂಘದ ಜಿಲ್ಲಾ ಅಧ್ಯಕ್ಷ ಹಾಗೂ ಮಾಜಿ ಶಾಸಕ ಕೆ.ಬಿ.ಅಶೋಕ್ ನಾಯ್ಕ್ ಮತ್ತು ತಂಡ ರಾಜ್ಯದ ಹೈಕೋರ್ಟ್ ಗೆ ತಡೆಯಾಜ್ಞೆ  ನೀಡುವಂತೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯನ್ನ ಪುರಸ್ಕರಿಸಿದ ನ್ಯಾಯಾಲಯ ತಡೆಯಾಜ್ಞೆ ನೀಡಿದೆ. 

ಅಧೀನ ಕಾರ್ಯದರ್ಶಿಗಳ ಆದೇಶವನ್ನೇ ರದ್ದು ಮಾಡುವಂತೆ ಸಲ್ಲಿಸಿರುವ ರಿಟ್ ಪಿಟೀಷನ್ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದೆ.  ಸಧ್ಯಕ್ಕೆ ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ಇದರಿಂದ ಹಳೇ ಪದಾಧಿಕಾರಿಗಳು ಮರುಸ್ಥಾಪನೆಗೊಂಡಂತಾಗಿದೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close