ಸುದ್ದಿಲೈವ್/ಶಿವಮೊಗ್ಗ
ಶಿವಮೊಗ್ಗ ಜಿಲ್ಲಾ ಸರ್ಕಾರಿ ನೌಕರರ ಸಂಘದ ಚುನಾವಣೆಯಲ್ಲಿ ಮೊದಲ ಬಾರಿಗೆ 38 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 66 ಜನ ನಾಮಪತ್ರ ಸಲ್ಲಿಸಿದ್ದು ಇದರಲ್ಲಿ 38 ಜನ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಅವಿರೋಧ ಆಯ್ಕೆಯಾದ ಎಲ್ಲಾ ಪೆನಾಲ್ ನಿರ್ದೇಶಕರೆಲ್ಲಾ ರಾಜ್ಯಾಧ್ಯಕ್ಷ ಸಿಎಸ್ ಷಡಾಕ್ಷರಿಯವರ ಬೆಂಬಲಿಗರೆ ಆಗಿದ್ದಾರೆ. ಇದರಿಂದ ಶಿವಮೊಗ್ಗದ ಸರ್ಕಾರಿ ನೌಕರರ ಸಂಘದಲ್ಲಿ ಷಡಾಕ್ಷರಿಯವರ ಬೆಂಬಲಿಗರ ಅದಿಪತ್ಯ ಮತ್ತೊಮ್ಮೆ ಆರಂಭವಾಗಿದೆ ಎನ್ನಬಹುದಾಗಿದೆ. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಶಿವಮೊಗ್ಗ ಜಿಲ್ಲಾ ಶಾಖಾ ಸಂಘದ ನಿರ್ದೇಶಕರ ಸ್ಥಾನದ ೨೦೨೪-೨೦೨೯ನೇ ಅವಧಿಯ ಚುನಾವಣೆಯಲ್ಲಿ ಈ ಕೆಳಕಂಡ ಆಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಒಟ್ಟು ೭೬ ಸ್ಥಾನಗಳಿಗೆ ದಿನಾಂಕ: ೨೮-೧೦-೨೦೨೪ ರಿಂದ ೭-೧೧-೨೦೨೪ ರವರಗೆ ಒಟ್ಟು ೧೭೮ ಆಭ್ಯರ್ಥಿಗಳು ನಾಮಪತ್ರವನ್ನ ಸಲ್ಲಿಸಿದ್ದರು. ನಿನ್ನೆ ಅಂದರೆ ನ.11 ರಂದು ನಾಮಪತ್ರ ಹಿಂಪಡೆಯಲು ಅಂತಿಮ ದಿನಾಂಕವಾಗಿತ್ತು. ಹಲವಾರು ಇಲಾಖೆಯ ನೌಕರರು ನಾಮಪತ್ರಗಳನ್ನ ಹಿಂಪಡೆದು ಅಂತಿಮವಾಗಿ ೬೬ ಸ್ಥಾನಗಳಲ್ಲಿ ೩೮ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಉಳಿದ 28 ಸ್ಥಾನಗಳಿಗೆ ನ.11 ರಂದು ಭಾನುವಾರ ಮೀನಾಕ್ಷಿಭವನ ಹತ್ತಿರ ಇರುವ ಕೆಪಿಎಸ್ ಪಬ್ಲಿಕ್ ಶಾಲೆಯಲ್ಲಿ ಚುನಾವಣೆ ನಡೆಯಲಿದೆ.ಈ ಬಾರಿಯ ಚುನಾವಣೆಯ ವಿಶೇಷವೆಂದರೆ ಪ್ರಾಥಮಿಕ ಶಾಲಾ ಶಿಕ್ಷಕರ ಸುಮಾರು 1200 ವೃತದಾರರ ೪ ಸ್ಥಾನಗಳ ಚುನಾವಣೆಯು ಅವಿರೋಧವಾಗಿ ನಡೆದು ಕಳೆದ ೫೦ ವರ್ಷಗಳಿಂದ ಇದೇ ಮೊದಲು ಅವಿರೋಧವಾಗಿ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಅವಿರೋಧವಾಗಿ ಆಯ್ಕೆಯಾದ ಎಲ್ಲಾ ಅಭ್ಯರ್ಥಿಗಳಿಗೆ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಅಭಿನಂದಿಸಿದ್ದಾರೆ.
ಅವಿರೋಧ ಆಯ್ಕೆಯಾದವರ ಪಟ್ಟಿ ಹೀಗಿದೆ