ಆರ್ಟಿಕಲ್ 370 ರದ್ದಾಗಲಿದೆ ಎಂದು ಊಹಿಸಲಾಗಿತ್ತಾ? ಹಾಗೆ ವಕ್ಫ್ ರದ್ದಾಗಬೇಕು-ಈಶ್ವರಪ್ಪ



ಸುದ್ದಿಲೈವ್/ಶಿವಮೊಗ್ಗ

ರೇಷನ್ ಕಾರ್ಡ್ ಗೊಂದಲವಾಗಿದ್ದು ಬಡವರು ತೊಂದರೆ ಅನುಭವಿಸುತ್ತಿದ್ದಾರೆ. 3.80 ಲಕ್ಷ ಬಿಪಿಎಲ್ ಕಾರ್ಡ್ ಇದೆ 2780 ಎಪಿಎಲ್ ಆಗಿ ಕನ್ವರ್ಟ್ ಮಾಡಿರಯವುದಾಗಿ ಅಧಿಕಾರಿಗಞಲು ತಿಳಿಸಿದರು. ಆದರೆ ನಿನ್ನೆ ದಿನ ಒಂದೇ ದಿನ ನೂರಾರು ಜನ ಬಿಪಿಎಲ್ ಕಾರ್ಡ್ ರದ್ದಾಗಿರುವುದಾಗಿ ಮನೆಗೆ ಬಂದಿದ್ದರು. 

ಆಹಾರ ಸಚಿವ ಮುನಿಯಪ್ಪ ಗೊಂದಲ ಇರುವುದು ಒಪ್ಪಿಕೊಳ್ಳಲಾಗಿದೆ. ಇದಕ್ಕೆ ತಕ್ಕಂತೆ ವೇಗವಾಗಿ ಆಗ ಬೇಕಿದೆ. ಒಂದು ವಾರದಲ್ಲಿ ಸರಿಆಗದಿದ್ದರೆ  ರಾಷ್ಟ್ರ ಭಕ್ತರ ಬಳಗದಿಂದ  ಡಿಸಿ ಕಚೇರಿಯಲ್ಲಿ ಪ್ರತಿಭಟಿಸಲಾಗುತ್ತದೆ. 

ರಾಜ್ಯ ಸರ್ಕಾರದ ಧೋರಣೆ ಬೇಕಾದ್ದಿರಲಿ, ಆದರೆ ಆಹಾರ ಸಚಿವರ ಹೇಳಿಕೆ ಗಮನಿಸಿ ಬಡವರಿಗೆ ಸೂಕ್ತ ನ್ಯಾಯ ಕೊಡಿಸಬೇಕು. ರೇಷನ್ ಕಾರ್ಡ್ ನ್ಯಾಯಯುತವಾಗಿ ರದ್ದಾಗಲಿ.‌ ಆದರೆ ಬಡವರಿಗೆ ನ್ಯಾಯ ಸಿಗಬೇಕು. ಮನೆಹತ್ತಿರ ಬಂದವರು ಕಣ್ಣೀರು ಹಾಕುತ್ತಿದ್ದಾರೆ ಎಂದರೆ. 

ಶ್ರೀಮಂತರನ್ನ ಹುಡುಕಿ ಕಾರ್ಡ್ ರದ್ದು ಮಾಡಿ, ಆಸ್ಪತ್ರೆಯ ರೋಗಿಗಳಿಂದ ಶುಲ್ಕ ಹೆಚ್ಚಿಸಿ ಹಣ ಸಂಗ್ರಹಿಸುತ್ತಿದ್ದೀರ. ಗ್ಯಾರೆಂಟಿ ಮುಂದುವರೆಸಿ ಆದರೆ ಹಣ ಹೇಗೆ ಸಂಗ್ರಹಿಸುತ್ತೀರಾ? ಬಿಪಿಎಲ್ ಕಾರ್ಡ್ ಪ್ರತಿಯೊಂದಕ್ಕೂ ಬೇಕು. ಬಿಪಿಎಲ್ ಕಾರ್ಡ್ ರದ್ದು ಮಾಡಬಾರದು. ಮುಂದಿನ ಸೋಮವಾರ ಎಲ್ಲ ಬಿಪಿಎಲ್ ಕಾರ್ಡ್ ಸಮಸ್ಯೆಗೆ ಒಳಗಾದವರಿಗೆ ಮನೆಗೆ ಬರಲು ತಿಳಿಸಿರುವ ಇಲಾಖೆ ಮತ್ತು ಡಿಸಿ ಕಚೇರಿಗೆ ಕರೆದುಕೊಂಡು ಹೋಗುವೆ ಎಂದರು. 

ಕಟ್ಟಡ ಕಾರ್ಮಿಕರ ಮಕ್ಕಳಿಗೆ ಅನುದಾನ ಬರಲಿಲ್ಲ. ಹೋರಾಟ ಮಾಡಿ ತರಿಸಿಕೊಡಲಾಯಿತು. ಹೋರಾಟ ಮಾಡಿ ಎಚ್ಚರಿಸಬೇಕಿದೆ. ಆಶ್ರಯ ಮನೆಗೆ ಧೃಢೀಕರಣ ನೀಡಲು ಲಂಚ ಪಡೆಯಲಾಗುತ್ತಿದೆ. ಇದನ್ನ ಆಯುಕ್ತರು ಗಮನ ಹರಿಸಬೇಕು. ದೃಢೀಕರಣಕ್ಕೆ 1-5 ಸಾವಿರ ರೂ. ಹಣ ಲಂಚ ಪಡೆಯಲಾಗುತ್ತದೆ.  ಸೋಮವಾರದಿಂದ ನಾನೇ ಆಶ್ರಯ ಬಡಾವಣೆಗೆ ಹೋಗುವೆ. ಇಸ್ವತ್ತು ಪಡೆಯಲು ಲಂಚ ನೀಡಬೇಕಿದೆ. 24×7 ಕುಡಿಯುವ ನೀರಿನ ಸಮಸ್ಯೆ ಕಂಡು ಬರುತ್ತಿದೆ. ಹಳೆ ಪೈಪ್ ಲೈನ್ ಗಳು ಪೂರ್ಣ ಗೊಳಿಸಿಲ್ಲ. ರಸ್ತೆ ಹಾಳಾಗಿವೆ. ಸೋಮವಾರದ ನಂತರ ಪಾಲಿಕೆ ಆಯುಕ್ತರನ್ನ ಬೇಟಿ ಮಾಡುವೆ ಎಂದರು. 

ಎಲ್ರೂ ಆರಾಮಾಗಿದ್ದಾರೆ ಹಣ ಹಂಚಿಕೊಂಡು, ಆದರೆ ಜನ ಸಾಯುತ್ತಿದ್ದಾರೆ. ಆಯುಕ್ತರನ್ನ ಭೇಟಿ ಮಾಡಿ ಸಮಸ್ಯೆ ಬಗೆಹರಿಸಿಕೊಡುವಂತೆ ಕೋರುತ್ತೇವೆ ಎಂದರು. ವಕ್ಫ್ ಆಸ್ತಿ ಬಗ್ಗೆ ಪ್ರಸ್ತಾಇಸಿದ್ದೆ. 4% ಮೀಸಲಾತಿಯನ್ನ ಮುಸ್ಲೀಂರಿಗೆ ಕೊಡಬೇಕು ಎಂಬುದನ್ನ ಆಕ್ಷೇಪಿಸಿದೆ. ಸಾಧು ಸಂತರ ನೇತೃತ್ವದಲ್ಲಿ ದಂಗೆ ಏಳುತ್ತೆ ಎಂದು ಹೇಳಿದ್ದಕ್ಕೆ ಎಫ್ಐಆರ್ ದಾಖಲಿಸಲಾಗಿದೆ. 

ನನ್ನನ್ನ ಬಂಧಿಸಬೇಕಿತ್ತು ಬಂಧಿಸಿಲ್ಲ. ನಾನ್ ಬೇಲಬಲ್ ವಾರೆಮಟ್ ಆಗಬೇಕಿತ್ತು. ಬಂಧಿಸಿಲ್ಲ. ದಂಗೆ ಮಾಡಿ ಕೊಲ್ಲುಸವ ಸ್ಥಿತಿ ನಿರ್ಮಾಣವಾಗಲಿದೆ ಎಂದು ಹೇಳಿದ್ದೆ. ದಂಗೆ ಏಳಲಿ ಎಂದು ಹೇಳಲಿಲ್ಲ. ಆದರೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಯ ವಿರುದ್ಧ ಕ್ರಮವಿಲ್ಲ ಯಾಕೆ ಎಂದು ಪ್ರಶ್ನಿಸಿದರು. 

ಕೇಂದ್ರದ ಜೆಪಿಸಿ ಅಧ್ಯಕ್ಷ ಜಗದಾಂಬಿಕ ಪಾಲ್ ಗೆ ಸಹಕಾರ ನೀಡುತ್ತಿಲ್ಲ. ಮಠ ಮಂದಿರಕ್ಕೆ, ಸರ್ಕಾರಿ ಶಾಲೆಗೆ, ವಿಶ್ವೇಶ್ವರಯ್ಯ ಹುಟ್ಟಿದ ಜಾಗವನ್ನ ವಕ್ಫ್ ಆಸ್ತಿ ಎಂದು ಮಾಡಲಾಗುತ್ತಿದೆ. ಕಾಂಗ್ರೆಸ್ ವಿರೋಧಿಸುತ್ತಿದೆ. ಸಂಸತ್ ನ ಸಭಾಪತಿಗಳಿಗೆ ಕಾಂಗ್ರೆಸ್ ಮನವೊಲಿಕೆಗೆ ಮುಂದಗಲು ಮನವಿ ಮಾಡಿಕೊಳ್ಳಲಾಗಿದೆ. ಕಾಂಗ್ರೆಸ್ ನವರ ಆಸ್ತಿಯನ್ನೇ ವಕ್ಫ್ ಎಂದು ಆದರೆ ಮಾತ್ರ ಪ್ರತಿಭಟಿಸುವುದು ಅನಿಸುತ್ತಿದೆ. ವಕ್ಫ ಆಸ್ತಿಯನ್ನ ರದ್ದು ಪಡಿಸಬೇಕು. ಹಿಂದೂ ಸಮಾಜವನ್ನ ವಕ್ಫ್ ನಿಂದ ರಕ್ಷಿಸಬೇಕು ಎಂದರು. 

ಬಿಪಿಎಲ್ ಕಾರ್ಡ್ ರದ್ದು ಮಾಡಿದರೆ ಆತ್ಮಹತ್ಯೆಗಳು ಹೆಚ್ಚಾಗುವ ಭಯವಿದೆ. ಬಿಪಿಎಲ್ ನಿಂದ ಎಷ್ಟೋ ಜನ ಬದುಕುತ್ತಿದ್ದಾರೆ. ಎಂಬಿ ಪಾಟೀಲರು ಕೇಂದ್ರ ಸರ್ಕಾರದ ವಿರುದ್ಧ ಮಾತನಾಡುತ್ತಾರೆ. ಯಾವುದಾದರೂ ಬದಲಾವಣೆಯನ್ನ ಮೋದಿಯವರು ತಂದಿದ್ದಾರಾ?  ಎಂದು ಹೇಳುದರು. 

ದೇಶದಲ್ಲಿ ವಕ್ಫ್ ಆಸ್ತಿನೇ ಇರಬಾರದು ಎಂದು ಹೇಳುತ್ತೀರಿ ಅದು ಸಾಧ್ಯವಾ ಎಂಬ ಪ್ರಶ್ನೆಗೆ ಉತ್ತರಿಸಿದರೆ, ಮುಸ್ಲೀಂರು ಆಕಾಶದಲ್ಲಿ ಹಿಂದೂಗಳು ನರಕದಲ್ಲಿ ಬದುಕಬೇಕಾ? 370 ರದ್ದಾಗುತ್ತೆ ಎಂದು ಊಹಿಸಿದ್ರಾ? ಹಾಗೇ ಎಲ್ಲರಿಗೂ ಸಮಾನವಾದ ಕಾನೂ ಜಾರಿತಾಗಬೇಕು. ವಕ್ಫ್ ರದ್ದಾಗಬೇಕು ಎಂದರು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close