ಸುದ್ದಿಲೈವ್/ಶಿವಮೊಗ್ಗ
ಅನವರತ ವತಿಯಿಂದ ಸಿಹಿಮೊಗ್ಗೆ ಸಂಭ್ರಮ-01ಎಂಬ ಕಾರ್ಯಕ್ರಮದ ಅಡಿ ನ.27 ರಂದು ಸೈನ್ಸ್ಮೈದಾನದಲ್ಲಿ ಅಯೋಧ್ಯಾ ದೀಪ ಎಂಬ ಯಕ್ಷಗಾನ ನಡೆಯಲಿದೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಾಸಕ ಚೆನ್ನಬಸಪ್ಪ, ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಕೃಪಾಪೋಷಿತ ಯಕ್ಷಗಾನ ಮತಿಯಿಂದ ಯಕ್ಷ ಸಂಭ್ರಮ ನಡೆಯಲಿದೆ. ಅಂದು ಸಂಜೆ 6 ರಿಂದ 12 ರವರೆಗೆ ನಡೆಯಲಿದೆ. ಸತೀಶ್ ಪಟ್ಲಾ ಅವರಿಂದ ಯಕ್ಷಗಾನ ನಡೆಯಲಿದೆ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಮೇಶ್ ಹಾಲಾಡಿ ಮತ್ತು ಕೊಳಗಿ ಕೇಶವ ಮೂರ್ತಿ ಉದ್ಘಾಟಿಸಲಿದ್ದಾರೆ. ಬೆಳಿಗ್ಗೆ ಸುವರ್ಣ ಸಾಂಸ್ಕೃತಿಕ ಭವನದಲ್ಲಿ ಜಾನಪದ ನೃತ್ಯ ಸ್ಪರ್ಧೆ, ಜಾನಪದ ಹಾಡುಗಳ ಸ್ಪರ್ಧೆ ಜಾನಪದ ಹಾಡುಗಳ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ, ಛಾಯಾಗ್ರಹಣ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ ಎಂದರು.
ಈ ಸ್ಪರ್ಧೆಗಳಲ್ಲಿ ನಗದು ಬಹುಮಾನ ಇಡಲಾಗಿದೆ. ಆನದ ಲೈನ್ ಮೂಲಕ ರಿಜಿಸ್ಟ್ರೇಷನ್ ಮಾಡಿಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ 9019901177, 7022244434 ಸಂಪರ್ಕಿಸಬಹುದಾಗಿದೆ.