ಅಂಡರ್ 19 ಕ್ರಿಕೆಟ್ ತಂಡಕ್ಕೆ ಶಿವಮೊಗ್ಗದ ಲೋಹಿತ್ ಎಸ್ ಆಯ್ಕೆ.



ಸುದ್ದಿಲೈವ್/ಶಿವಮೊಗ್ಗ

ಇದೇ ತಿಂಗಳು 13 ರಿಂದ 21ರ ವರೆಗೆ ನೇಪಾಳದಲ್ಲಿ ನಡೆಯಲಿರುವ 19 ವರ್ಷದೊಳಗಿನ ಪಂದ್ಯಾವಳಿಗಳಿಗೆ ಶಿವಮೊಗ್ಗದ ಹರಿಗೆ ನಿವಾಸಿ ಲೋಹಿತ್ ಆಯ್ಕೆಯಾಗಿದ್ದಾರೆ. 

ಲೋಹಿತ್ ಶಿವಕುಮಾರ್ ಹಾಗೂ ಶ್ರೀಮತಿ ನಾಗರತ್ನ ಇವರ ಪುತ್ರರಾಗಿದ್ದಾರೆ. ಲೋಹಿತ್ ಎಸ್ ಕರ್ನಾಟಕ ತಂಡದಕ್ಕೆ ಬೌಲಿಂಗ್  ಅಲ್ಲರೌಂಡರ್ ಆಗಿ ಆಯ್ಕೆ ಯಾಗಿರುವರು,ಕಳೆದ ತಿಂಗಳಲ್ಲಿ ಓದಿಶಾ ದ ಕಟಕ್ ನಲ್ಲಿ ನಡೆದ ರಾಷ್ಟ್ರೀಯ ಪಂದ್ಯಾವಳಿಯಲ್ಲಿಯೂ ಸಹ ಕರ್ನಾಟಕ ತಂಡದಿಂದ ಭಾಗವಹಿಸಿದ್ದರು. 

ಲೋಹಿತ್,ಎಸ್ ಪ್ರಸ್ತುತ ಡಿ.ವಿ.ಸ್ ಕಾಲೇಜ್ ನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದು,ಸಹ್ಯಾದ್ರಿ ಕ್ರಿಕೆಟ್ ಅಕಾಡೆಮಿ ಯಲ್ಲಿ  ಹಲವು ವರ್ಷಾ ಗಳಿಂದ ಕ್ರಿಕೆಟ್ ಕೋಚ್ ನಾಗರಾಜ್ ರವರಿಂದ  ತರಬೇತಿ  ಪಡೆಯುತಿದ್ದು, ನಗರದ ಪ್ರಖ್ಯಾತ ಕ್ಲಬ್ಬುಗಳಲ್ಲಿ  ಒಂದಾದ FCC ತಂಡದ ಪರ ಪ್ರಥಮ ದರ್ಜೆಯ ಪಂದ್ಯಾವಳಿ ಗಳಲ್ಲಿ ಪ್ರತಿನಿಧಿಸುತ್ತಿದ್ದು. 

ಜಿಲ್ಲೆಗೆ ಕೀರ್ತಿ ತಂದ ಲೋಹಿತ್ ಎಸ್ ಗೆ KSCA ಶಿವಮೊಗ್ಗ ವಲಯದ,ಅಧ್ಯಕ್ಷರು, ಸಂಚಾಲಕರು, ಸಹ್ಯಾದ್ರಿ ಕ್ರಿಕೆಟ್ ಅಕಾಡೆಮಿಯ ಆಡಳಿತ ವರ್ಗ, ಸಹ್ಯಾದ್ರಿ ಕಾಲೇಜಿನ  ಸಿಬ್ಬಂದಿ, ಎಫ್‌ಸಿಸಿ ಕ್ಲಬ್ ನ ಆಡಳಿತ ವರ್ಗ  ನಗರದ ಎಲ್ಲಾ ಹಿರಿಯ ಹಾಗೂ  ಕಿರಿಯ ಕ್ರೀಡಾಪಟುಗಳು ಅಭಿನಂದನೆಗಳೊಂದಿಗೆ ಇನ್ನು ಉತ್ತಮ ಸಾಧನೆ ಮಾಡಲೆಂದು ಹಾರೈಸಿದ್ದಾರೆ

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close