ಸೆಕ್ಷನ್ ಶಾಸಕ ಎಂದು ಕರೆಯಬೇಕಾಗುತ್ತದೆ-ಹೆಚ್ ಸಿ ಯೋಗೀಶ್ ಗುಡುಗಿದ್ದೇಕೆ?

ಸುದ್ದಿಗೋಷ್ಠಿಯಲ್ಲಿ ಹೆಚ್ ಸಿ ಯೋಗೀಶ್

ಸುದ್ದಿಲೈವ್/ಶಿವಮೊಗ್ಗ

ಬಿಜೆಪಿ ವಕ್ಫ್ ವಿಚಾರದಲ್ಲಿ ಪ್ರತಿನಿತ್ಯ ಹೋರಾಟ ನಡೆಸಿಕೊಂಡು ಬರುತ್ತಿದ್ದು ಚುನಾವಣೆ ಹಿನ್ನಲೆಯಲ್ಲಿ ಅವರ ಹೋರಾಟ ನಡೆಸುತ್ತಿರುವುದಾಗಿ ಮಾಜಿ ಕಾರ್ಪರೇಟರ್ ಹೆಚ್ ಸಿ ಯೋಗೀಶ್ ಆರೋಪಿಸಿದರು.‌  

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಬಾರಿ ಸಿದ್ದರಾಮಯ್ಯ ನವರ ತಲೆ ಕಡಿಯುವುದಾಗಿ ಹೇಳಿದ್ದ ಶಾಸಕ ಚೆನ್ನಬಸಪ್ಪ ಈಗ ಜಮೀರ್ ಬಂದರೆ ಹೊಡೆಯುವುದಾಗಿ ಹೇಳಿದ್ದಾರೆ. ಅಂದರೆ ಬಿಜೆಪಿ ಹೊಡಿ ಬಡಿ ಕಡಿ ವಿಚಾರದಲ್ಲೇ ಮುಂದುವರೆಯುತ್ತಿರುವುದು ಆತಂಕಕಾರಿ ವಿಷಯ ಎಂದು ದೂರಿದರು. 

 ಇದು ಶಾಸಕರ ಮನಸ್ಥಿತಿಯನ್ನ ಸೂಚಿಸುತ್ತದೆ. ಪ್ರಚೋದನಾಕಾರಿ ಹೇಳಿಕೆ ನೀಡುವ ಮೂಲಕ ಶಿವಮೊಗ್ಗದಲ್ಲಿ ಸೆಕ್ಷನ್ ಜಾರಿಯಿರಬೇಕು  ಎಂಬದನ್ನ ಶಾಸಕರು  ಬಯಸುತ್ತೀದ್ದಾರಾ ಎಂಬ ಅನುಮಾನ ಶುರುವಾಗಿದೆ ಎಂದರು. 

ಶಾಸಕರು ಜಮೀರ್ ಶಿವಮೊಗ್ಗಕ್ಕೆ ಬಂದರೆ ಹೊಡೆಯುವುದಾಗಿ ಹೇಳಿದ್ದಾರೆ. ಜಮೀರ್ ಅವರು ಅಲ್ಪಸಂಖ್ಯಾತರಿಗೆ ಮನೆ ಕೊಡುವುದಾಗಿ ಹೇಳಿರಲಿಲ್ಲ. ಆದರೆ  ಆಶ್ರಯ ಮನೆಗಳನ್ನ  ನೀಡುವ ವಿಚಾರದಲ್ಲಿ ಶಿವಮೊಗ್ಗಕ್ಕೆ ಬರುವುದಾಗಿ ಹೇಳಿದ್ದಾರೆ. ನೀವೇ ಹೋಗಿ ಆಮಂತ್ರಿಸಿದ್ದೀರ ಎಂದರು. 

ಬ್ಯಾರಿಸ್ ಮಾಲ್ ವಿಚಾರದಲ್ಲಿ ಶಾಸಕ ಚೆನ್ನಬಸಪ್ಪ ನವರು ನಡೆದುಕೊಂಡ ರೀತಿ ಶಿವಮೊಗ್ಗಕ್ಕೆ ಗೊತ್ತಿದೆ ಎಂದ ಅವರು ಮಾಜಿ ಸಿಎಂ ಬಸವರಾಜ್ ಬೊಮ್ನಾಯಿ ಅವರು ವಕ್ಫ್ ಆಸ್ತಿ ಉಳಿಸಿಕೊಳ್ಳಿ ಎಂದಿದ್ದರು. 16 ಕಡೆ ವಕ್ಫ್ ಬೋರ್ಡ್ ನಲ್ಲಿ ಬಿಜೆಪಿ ಪ್ರತಿನಿಧಿಗಳೆ ಈಗಲೂ ಅಧ್ಯಕ್ಷರಾಗಿದ್ದಾರೆ. ವಕ್ಫ್ ಬೋರ್ಡ್ ರೈತರ ಜಮೀನು ವಶಪಡಿಸಿಕೊಳ್ಳುವ ವಿಚಾರದಲ್ಲಿ ರಾಜೀನಾಮೆ ಯಾಕೆ ಕೊಡಲಿಲ್ಲ ಎಂದರು. 

ವಕ್ಫ್ ವಿಚಾರವಾಗಿ ಮುಖ್ಯಮಂತ್ರಿಗಳು, ಕಾನೂನು ಸಚಿವರು ಅನ್ಯಾಯದ ವಿಚಾರವಾಗಿ ಪತ್ರಿಕೆ ಹೇಳಿಕೆಕೊಟ್ಟು ಬದಲಾವಣೆ ಮಾಡುವುದಾಗಿ ತಿಳಿಸಿದ್ದಾರೆ. 

ಪ್ರಧಾನಿ ಉದ್ಯೋಗ ಕೊಡುವುದಾಗಿ ಹೇಳಿ ಮಾತಿನಿಂದ ಹಿಂದೆ ಸರಿದಿದ್ದರು. ಆಗ ಕಾಂಗ್ರೆಸ್ ಯಾವ ವೇದಿಕೆ ಮೇಲೆ ಪ್ರಶ್ನಿಸಬೇಕಿತ್ತೋ ಅದನ್ನ ಕೇಳಿಕೊಂಡು ಬಂದಿದ್ದೇವೆ. ಶಾಸಕರು ಜಮೀರ್ ವಿರುದ್ಧ  ಸುದ್ದಿಗೋಷ್ಠಿಯಲ್ಲಿ  ಹಿಂಪಡೆಯಬೇಕು ಇಲ್ಲವೆಂದರೆ ಕಾಂಗ್ರೆಸ್ 144 ಸೆಕ್ಷನ್ ಶಾಸಕ ಚೆನ್ನಬಸಪ್ಪ ಎಂದು ಕರೆಯಲಾಗುತ್ತದೆ ಎಂದು ಎಚ್ಚರಿಸಿದರು. 

ಉಪಚುನಾವಣೆ ನಂತರ ಸಚಿವ ಜಮೀರ್ ನಗರಕ್ಕೆ ಆಗಮಿಸುತ್ತಿದ್ದು ಅವರನ್ನ ಕಾಂಗ್ರೆಸ್ ಭವ್ಯವಾಗಿ ಸ್ವಾಗತಿಸಲಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಕಾರ್ಯದರ್ಶಿ ದೇವೇಂದ್ರಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವಕುಮಾರ್, ಮಧು, ಬಾಲಾಜಿ, ಪಾಲಿಕೆ ಮಾಜಿ ಕಾರ್ಪರೇಟರ್ ಯಮುನಾರಂಗೇಗೌಡ ಮೊದಲಾದವರು ಭಾಗಿಯಾಗಿದ್ದರು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close