ಸುದ್ದಿಲೈವ್/ಆನಂದಪುರಂ
ಆನಂದಪುರಂ ಬಳಿ ನಿಲ್ಲಿಸಿದ್ದ ಕಾರಿಗೆ ಡಿಕ್ಕಿ ಹೊಡೆದು ಕಾರೊಂದು ಪಲ್ಟಿ ಹೊಡೆದಿದ್ದು ಅದೃಷ್ಟವಶಾತ್ ಪಲ್ಟಿ ಹೊಡೆದ ಕಾರಿನಲ್ಲಿದ್ದ ಇಬ್ಬರು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ವರದಿಯಾಗಿದೆ.
ಆನಂದಪುರಂ ಹಳೇ ಉಪಠಾಣೆಯ ಬಳಿ ಶಿವಮೊಗ್ಗದಿಂದ ಸಾಗರಕ್ಕೆ ತೆರಳುತ್ತಿದ್ದ ಹೋಡಾ ಅಮೇಜ್ ಕಾರನ್ನ ಮರದ ಕೆಳಗೆ ನಿಲ್ಸಿಕೊಂಡಿದ್ದರು. ಈ ವೇಳೆ ಸಾಗರದಿಂದ ಶಿವಮೊಗ್ಗಕ್ಕೆ ಹೊರಟಿದ್ದ ಐ10 ಕಾರು ಡಿಕ್ಕಿ ಹೊಡೆದು ಪಕ್ಕದಲ್ಲಿ ಪಲ್ಟಿ ಹೊಡೆದಿದೆ. ಅದೃಷ್ಟವಶಾತ್ ಐ10 ನಲ್ಲಿದ್ದ ಇಬ್ಬರು ಪ್ರಯಾಣಿಕರಿಗೆ ಯಾವುದೇ ಪ್ರಾಣಿಹಾನಿಯಾಗಲಿ ನೋವಾಗಲಿ ಸಂಭವಿಸಿಲ್ಲ.
ಐ 10 ನಲ್ಲಿದ್ದ ಇಬ್ಬರು ಪ್ರಯಾಣಿಕರು ಶಿವಮೊಗ್ಗದವರು ಎಂದು ಹೇಳಲಾಗುತ್ತಿದೆ. ಚಾಲಕನ ನಿಯಂತ್ರಣ ತಪ್ಪಿ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ. ನಿಂತಿದ್ದ ಹೋಂಡಾ ಅಮೇಜ್ ವಾಹನಕ್ಕೆ ಕೊಂಚ ಹಾನಿ ಉಂಟಾಗಿದೆ ಆದರೆ ಯಾವುದೇ ಮೇಜರ್ ಹಾನಿ ಉಂಟಾಗಿಲ್ಲ ಎಂಬ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಆನಂದಪುರಂ ಪೊಲೀಸ್ ಠಾಣೆಯ ಪೊಲೀಸರು ಭೇಟಿ ಮಾಡಿದ್ದಾರೆ.