ಸುದ್ದಿಲೈವ್/ಶಿವಮೊಗ್ಗ
ಕಾಂಗ್ರೆಸ್ ಅಸ್ಥಿತ್ವಕ್ಕೆ ಬಂದ ನಂತರ ಗೊಂದಲಗಳು ಮುಂದುವರೆದಿದೆ. ಬಗುರ್ ಹುಕುಂ, ಅರಣ್ಯ ಜಮೀನಿನಲ್ಲಿರುವ ಸಾಗುವಳಿ ಮಾಡುವ ರೈತರನ್ನ ಒಕ್ಕಲೆಬ್ಬಿಸಲು ಆರಂಭಿಸಿದ ರಾಜ್ಯ ಸರ್ಕಾರ ಈಗ ವಕ್ಫ್ ಆಸ್ತಿ ಎಂದು ಕಬಳಿಸಲು ಮುಂದಾಗಿದೆ ಎಂದು ಮಾಜಿ ಶಾಸಕ ಕೆ.ಬಿ ಅಶೋಕ್ ನಾಯ್ಕ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಯಾಂಪಿತ್ರೋಡಾ ಎಂಬುವರು ಈ ಹಿಂದೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಹಿಂದೂಗಳ ಪಿತ್ರಾರ್ಜಿತ ಆಸ್ತಿಯು ತಂದೆಯಿಂದ ಮಗನಿಗೆ ವರ್ಗಾಯಿಸಲು ತೆರಿಗೆ ಹಾಕಿದರೆ ದೇಶ ಆಸ್ತಿ ದುಪ್ಪಟ್ಟಾಗಲಿದೆ ಎಂಬ ಯೋಚನೆ ನೀಡಿದ್ದರು. ಅದರ ಮುಂದುವರೆದ ಭಾಗವೇ ವಕ್ಫ್ ಮೂಲಕ ರೈತರ ಮತ್ತು ಸರ್ಕಾರದ ಆಸ್ತಿ ಕಬಳಿಕೆಯಾಗಿದೆ. ಹಾಗಾಗಿ ಶಿವಮೊಗ್ಗ ತಾಲೂಕಿನ ರೈತರು ನಾಳೆ ಪಹಣಿಯನ್ನ ಒಮ್ಮೆ ತಪಾಸಣೆ ಮಾಡಿಸಿ ಎಂದು ಕೋರಿಕೊಂಡರು.
ಪ್ರಧಾನಿ ಮೋದಿ ವಕ್ಫ್ ಕಾಯ್ದೆ ತಿದ್ದುಪಡಿಗೆ ಜಂಟಿ ಸಮಿತಿ ರಚಿಸಲು ಹೊರಟಿದ್ದಾರೆ. ಜಂಟಿ ಸಮಿತಿ ರಚನೆಗೊಂಡ ತಕ್ಷಣವೇ ಸಚಿವ ಜಮೀರ್ ಆಕ್ಟಿವ್ ಆಗಿದ್ದಾರೆ. ಎಲ್ಲಾ ಜಾಗವನ್ನ ವಕ್ಫ್ ಆಸ್ತಿ ಮಾಡಲು ಹೊರಟಿದ್ದಾರೆ. ರೈತರ ಮತ್ತು ಸರ್ಕಾರದ ಆಸ್ತಿ ರಕ್ಷಿಸಲು ಬಿಜೆಪಿ ಮುಂದಾಗಿದ್ದು, ನ.4 ರಿಂದ ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ವಕ್ಫ್ ಮತ್ತು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಿದ್ದೇವೆ ಎಂದು ಎಚ್ಚರಿಸಿದರು.
ಮತ್ತೋಡುನಲ್ಲಿ 124 ರಲ್ಲಿ ಎರಡು ಎಕರೆ ಜಾಗ ಖಬರ್ ಸ್ಥಾನ ಮಾಡಲಾಗುತ್ತಿದೆ. ಈಗ ವಕ್ಫ್ ಆಸ್ತಿಯಾಗುತ್ತಿದೆ. ಹನಗವಾಡಿಯ ಖಬರ್ ಸ್ಥಾನ್ ವಕ್ಫ್ ಆಸ್ತಿಯಾಗಿದೆ. ಟ್ರಿಬ್ಯುನಲ್ ನಲ್ಲಿ ವಕ್ಫ್ ಮಂಡಳಿ ತನ್ನ ಆಸ್ತಿ ಎಂದು ಹೇಳಲು ದಾಖಲಾತಿ ಬೇಡ ಆದರೆ ಇದು ವಕ್ಫ್ ಆಸ್ತಿ ಅಲ್ಲ ಎನ್ನಲು ರೈತರ ಬಳಿ ದಾಖಲಾತಿ ಬೇಕಿದೆ. ಇದು ವಕ್ಫ್ ಕಾಯ್ದೆಯಾಗಿದೆ. ಇದು ದೇಶದ ದುರಂತ ಎಂದರು.
ಸುದ್ದಿಗೋಷ್ಠಿಯಲ್ಲಿ ಎಂಎಲ್ ಸಿ ಡಿಎಸ್ ಅರುಣ್, ಬಿಜೆಪಿಯ ರತ್ನಾಕರ್ ಶಣೈ, ಹರೀಕೃಷ್ಣ, ಶಿವರಾಜ್, ಮಾಜಿ ಶಾಸಕ ಕೆ.ಜಿ.ಕುಮಾರ ಸ್ವಾಮಿ, ಧೀನ್ ದಯಾಳ್ ಮೊದಲಾದವರು ಉಪಸ್ಥಿತರಿದ್ದರು.