ಸಾಗರದ ರೈತರ ಪ್ರತಿಭಟನೆಯಲ್ಲಿ ಹರತಾಳು ಹಾಲಪ್ಪ vs ರಾಮಪ್ಪ! ವಿಡಿಯೋ ವೈರಲ್



ಸುದ್ದಿಲೈವ್/ಸಾಗರ

ಶರಾವತಿ ಸಂತ್ರಸ್ಥರಿಗೆ ಭೂ ಹಕ್ಕು ನೀಡುವಂತೆ ಒತ್ತಾಯಿಸಿ ಸಾಗರದಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಮಾಜಿ ಸಚಿವ ಹರತಾಳ ಹಾಲಪ್ಪ ಮತ್ತು ಧರ್ಮದರ್ಶಿ ರಾಮಪ್ಪನವರ ನಡುವಿನ ಬಿಗ್ ಫೈಟ್ ಬಹಿರಂಗಗೊಂಡಿದೆ. 

ನಿನ್ನೆ ಬೆಳಿಗ್ಗೆಯಿಂದ 12 ರೈತ ಸಂಘಟನೆಗಳೊಂದಿಗೆ ಸಾಗರದ ಎಸಿ ಕಚೇರಿ ಎದುರು ಪ್ರತಿಭಟನೆ ನಡೆದಿದೆ. ಪಾದಯಾತ್ರೆಯ ಮೂಲಕ ರೈತರು ಎಸಿ ಕಚೇರಿಗೆ ಬಂದು ಸಾಗುವಳಿದಾರರಿಗೆ ಭೂಮಿ ಹಕ್ಕು ಒತ್ತಾಯಿಸಿ ಅನಿರ್ಧಿಷ್ಟಾವಧಿ ಪ್ರತಿಭಟನೆಗೆ ಚಾಲನೆ ನೀಡಲಾಗಿದೆ.

ಪಾದಯಾತ್ರೆಗೆ ಕಾಗೋಡು ತಿಮ್ಮಪ್ಪನವರು ಚಾಲನೆ ನೀಡಿದರು. ಈ ವೇಳೆ ರಾಮಪ್ಪನವರು ಮಾತನಾಡಿದರು. ನಂತರ  ಹರತಾಳು ಹಾಲಪ್ಪನವರು ಇನ್ನೇನು ಮಾತನಾಡಬೇಕು ಅಷ್ಟರಲ್ಲಿ ಸಿಗಂದೂರು ಚೌಡೇಶ್ವರಿ ದೇವಾಲಯದ ಧರ್ಮಾಧಿಕಾರಿ ರಾಮಪ್ಪನವರೇ ಅಡ್ಡಿಯಾಗಿ ಭಾಷಣ ಬೇಡ ಪಾದಯಾತ್ರೆ ನಡೆಸಿ ಎಂದು ಸೂಚನೆ ನೀಡಿದರು. 

ಆದರೂ ಸಹ ಮೈಕ್ ನ್ನ ಹಾಲಪ್ಪನವರಿಗೆ ನೀಡಲಾಯಿತು. ಮೈಕ್ ಕಸಿದುಕೊಂಡ ಧರ್ಮದರ್ಶಿಗಳು ನಿಮ್ಮ ಅವಧಿಯಲ್ಲಿ ನೀವು ರೈತರನ್ನ ಕಡೆಗಣಿಸಿ ಈಗ ಭಾಷಣ ಮಾಡಲು ಬಂದಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿ ಮೈಕ್ ನ್ನ ನೆಲಕ್ಕೆ ಬಿಸಾಕಿರುವ ದೃಶ್ಯ ನಡೆದಿದೆ. 

ರಾಮಪ್ಪನವರ ಈ ವರ್ತನೆ ಮಾಜಿ ಸಚಿವ ಹಾಲಪ್ಪನವರ ವಿರುದ್ಧ ಸೇಡು ತೀರಿಸಿಕೊಂಡ್ರಾ ಎಂಬ ಅನುಮಾನವೂ ಮೂಡಿಸಿದೆ. ನಂತರ ಹಾಲಪ್ಪನವರು ಭಾಷಣ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಸಹ ಆಗಿದೆ. ಹಲವರು ಈ ವಿಡಿಯೋವನ್ನ  ಸ್ಟೇಟಸ್ ಗೂ ಹಾಕಿಕೊಂಡಿದ್ದಾರೆ.


ನಂತರ  ರೈತರುಗಳು ನಾತನಾಡಿ, ಪ್ರತಿ ಚುನಾವಣೆಯಲ್ಲಿ ಮುನ್ನಾಲೆಗೆ ಬರುವ ಶರಾವತಿ ಸಂತ್ರಸ್ತ ಸಮಸ್ಯೆ ಮತ್ತೆ ಮರಿಚಿಕೆಯಾಗುತ್ತೆ. ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುವ ರಾಜಕೀಯ ವ್ಯಕ್ತಿಗಳು ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆಗೆ ಸಾಮಾಜಿಕ ನ್ಯಾಯಯಾಕೆ ಕೊಡಿಸೊಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close