ಸುದ್ದಿಲೈವ್/ಶಿವಮೊಗ್ಗ ಅ.09
ಶಿವಮೊಗ್ಗ ಭದ್ರಾವತಿ ನಗರ ಅಭಿವೃದ್ಧಿ ಪ್ರಾಧಿಕಾರದಿಂದ ಖಾಲಿ ನಿವೇಶನ(site) ಹಂಚಿಕೆ ಪಾರದರ್ಶಕತೆಯಿಂದ ಇರಬೇಕು ಎಂದು ಎಸ್ ಡಿ ಪಿಐ ಆಗ್ರಹಿಸಿದೆ.
ಈಗಾಗಲೇ 437 ನಿವೇಶನಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಸೈಟ್ ಹಂಚಿಕೆಯಲ್ಲಿ ರಾಜಕೀಯ ಬೇರಸದೆ ಸೂರಿಲ್ಲದವರಿಗೆ ಸೈಟ್ ಹಂಚಿಕೆ ಮಾಡಬೇಕು ಹಾಗೂ ಈ ಸೈಟ್ ಹಂಚಿಕೆಯಲ್ಲಿ ಪ್ರಭಾವಿಗಳ ಮಾರ್ಗದರ್ಶನದಂತೆ ಸೈಟ್ ಹಂಚಿಕಯಾಗಲಿದೆ ಎಂಬ ಭಯ ಅರ್ಜಿದಾರರಲ್ಲಿ ಇದೆ. ಈ ಭಯ ಮುಂದಿನ ಭ್ರಷ್ಟಾಚಾರಕ್ಕೆ ಕಾರಣವಾಗಬಾರದು,
ಹಾಗಾಗಿ ಸೈಟ್ ಹಂಚಿಕೆಯಲ್ಲಿ ಪಾರದರ್ಶಕತೆ ಇರಲಿ ಮತ್ತು ಅವಶ್ಯಕತೆ ಇರುವವರಿಗೆ ಸೈಟ್ ಹಂಚಿಕೆಯಾಗಲಿ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ಶಿವಮೊಗ್ಗ ಜಿಲ್ಲಾ ಅಧ್ಯಕ್ಷ ಇಮ್ರಾನ್ ಆಗ್ರಹಿಸಿದ್ದಾರೆ.