ಸುದ್ದಿಲೈವ್/ಶಿವಮೊಗ್ಗ
ಉತ್ತರ ಪ್ರದೇಶದ ಘಾಜೀಯಾಬಾದ್ ನಲ್ಲಿ ಪ್ರವಾದಿ ಮೊಹಮದ್ ಫೈಗಂಬರ್ ವಿರುದ್ಧ ಅವಹೇಳನಕಾರಿ ಭಾಷಣ ಮಾಡಿದ ನರಸಿಂಗ ಆನಂದ ಸ್ವಾಮಿ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಶಿವಮೊಗ್ಗ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಮರ್ಕಜ್ಜಿ ಸುನ್ನಿ ಜಮಾಯತುಲ್ಲಾ ಉಲ್ಕಾ ಕಮಿಟಿ ಸುನ್ನಿ ಜಾಮಿಯಾ ಮಸ್ಜಿದ್ ಪ್ರತಿಭಟನೆ ನಡೆಸಿ ಡಿಸಿಗಳ ಮೂಲಕ ರಾಷ್ಟ್ರಪತಿಗಳು, ಕೇಂದ್ರ, ರಾಜ್ಯ, ಮುಖ್ಯಮಂತ್ರಿಗಳಿಗೆ, ಗೃಹಸಚಿವರಿಗೆ, ಜಿಲ್ಲಾ ರಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಕೋಮು ಸೌಹಾರ್ಧತೆಯನ್ನ ಕದಡುವ ಭಾಷಣ ಮಾಡಿರುವ ಸ್ವಾಮೀಜಿ ವಿರುದ್ಧ ಬಿಎನ್ಎಸ್ 298, 299, 300, 152 ಸೆಕ್ಷನ್ ಅಡಿ ಪ್ರಕರಣ ದಾಖಲಿಸಿಕೊಂಡು ಸ್ವಾಮೀಜಿಯನ್ನ ಬಂಧಿಸಬೇಕು ಹಾಗೂ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಲಾಯಿತು.
ಉತ್ತರ ಪ್ರದೇಶದಲ್ಲಿ ಕಾನೂನು ಬಾಹಿರ ಚಟುವಟಿಕೆ ಮಾಡುವವರ ಆಸ್ತಿ ಮುಟ್ಟುಗೋಲು ಮಾಡಿಕೊಳ್ಳಲಾಗುತ್ತದೆ. ಆದರೆ ಸ್ವಾಮಿಯು ಕಾನೂನು ಕದಡುವ ಭಾಷಣ ಮಾಡಿದರೂ ಯಾವುದೇ ಕ್ರಮ ಜರುಗಿಸದೆ ಇರುವ ಬಗ್ಗೆ ಪ್ರತಿಭಟನಾಕಾರರು ಆಕ್ಷೇಪಿಸಿದ್ದಾರೆ.
ಮನವಿ ನೀಡುವ ಸಂದರ್ಭದಲ್ಲಿ ಎಸ್ ಜೆವಿ ಅಧ್ಯಕ್ಷರಾದ ಸತ್ತಾರ್ ಬೇಗ್, ಸುನ್ನಿ ಜಾಮೀಯ ಮಸೀದಿ ಅಧ್ಯಕ್ಷ ಮುನಾವರ್ ಪಾಶ, ಎಸ್ ಜಿ ವಿ ಕಾರ್ಯದರ್ಶಿ ಎಜಾಜ್ ಪಾಶ, ಜಾಮೀಯ ಮಸೀದಿಯ ಕಾರ್ಯದರ್ಶಿ ಅಶ್ರಫ್ ಮೊಹ್ಮದ್, ವಕೀಲ ನಯಾಜ್ ಅಹ್ಮದ್ ಖಾನ್ ಮೊದಲಾದವರು ಉಪಸ್ಥಿತರಿದ್ದರು.