Girl in a jacket

ಮಳೆಯನ್ನೂ ಲೆಕ್ಕಿಸದೆ ಹೆಜ್ಜೆ ಹಾಕಿದ ಗಣವೇಷಧಾರಿಗಳು

 


ಸುದ್ದಿಲೈವ್/ಶಿವಮೊಗ್ಗ

ಮಳೆಯನ್ನೂ ಲೆಕ್ಕಿಸದೆ ಆರ್ ಎಸ್ ಎಸ್ ಶಿವಮೊಗ್ಗ ನಗರದಲ್ಲಿ ಪಥ ಸಂಚಲನ ನಡೆಸಿದೆ. ಭಾನುವಾರ ಬೆಳಿಗ್ಗೆ ಸುರಿದ ಭಾರಿ ಮಳೆಯ ನಡುವೆಯೂ ಗಣವೇಷಧಾರಿಯಾಗಿ ಬಂದ ಆರ್ ಎಸ್ ಎಸ್ ನ ಕಾರ್ಯಕರ್ತರು ಪಥಸಂಚಲನದಲ್ಲಿ ಭಾಗಿಯಾಗಿದರು.

ವಿಜಯದಶಮಿ ಹಬ್ಬದ ಅಂಗವಾಗಿ ರಾಷ್ಡ್ರೀಯ ಸ್ವಯಂ ಸೇವಾ ಸಂಘ ಶಿವಮೊಗ್ಗ ಘಟಕ ನಗರದಲ್ಲಿ  ಪಥ ಸಂಚಲನ ನಡೆಸಿದೆ. ಬಿ‌ಹೆಚ್ ರಸ್ತೆಯ ಕರ್ನಾಟಕ ಸಂಘದ ಪಕ್ಕವಿರುವ ತಾನಾಜಿ ಸಂಘ ಸ್ಥಾನದಿಂದ ಪಥಸಂಚಲನ ಆರಂಭಗೊಂಡಿದೆ.


ಬೆಳಿಗ್ಗೆ 7-30 ಕ್ಕೆ ಆರಂಭಗೊಂಡ ಪಥ ಸಂಚಲನದಲ್ಲಿ ಗಣವೇಷಧಾರಿಯಾಗಿ ಬಂದ ಸ್ವಯಂ ಸೇವಕರು ಕರಾರುವಕ್ಕಾದ ಹೆಜ್ಜೆಹಾಕುವ ಮೂಲಕ ಪಥಸಂಚಲನಕ್ಕೆ ಮೆರಗು ನೀಡಿದರು. ಮಳೆಯ ನಡುವೆಯೂ ಅವರ ಹೆಜ್ಜೆ ಗಮನ ಸೆಳೆದಿದೆ.

ವಿಜಯದಶಮಿಯ ಜೊತೆಗೆ ಆರ್‌ಎಸ್ ಎಸ್ ಆರಂಭಗೊಂಡು ನೂರು ವರ್ಷಗಳು ಕಳೆದಿದೆ. 1924 ರಲ್ಲಿ ಮಹಾರಾಷ್ಟ್ರದ ನಾಗ್ಪುರ್ ನಲ್ಲಿ ಹೆಡಗೇವಾರ್ ಹುಟ್ಟುಹಾಕಿದ ಈ ಸಂಘಟನೆ ಭಾರತದಲ್ಲಿ ಹಾಸುಹೊಕ್ಕಿದೆ.


ತಾನಾಜಿ ಸಂಘ ಸ್ಥಾನದಿಂದ ಹೊರಟ ಪಥಸಂಚಲನ ಗಾಂಧಿ ಬಜಾರ್, ರಾಮಣ್ಣ ಶ್ರೇಷ್ಠಿ ಪಾರ್ಕ್, ಅಶೋಕ ರಸ್ತೆ ಮೂಲಕ ಮೈಲಾರೇಶ್ವರ ದೇವಸ್ಥಾನದ ಬಳಿ ಅಂತ್ಯಗೊಂಡಿದೆ. ಈ ಪಥ ಸಂಚಲನದಲ್ಲಿ ಶಾಸಕ ಚೆನ್ನಬಸಪ್ಪ ಹಾಗೂ ಸಂಸದ ರಾಘವೇಂದ್ರ ಭಾಗಿಯಾಗಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Suddi Live