Girl in a jacket

ಆಯುಧ ಪೂಜೆ ಸಾಂಪ್ರದಾಯಿಕ ಧಿರಿಸಿನಲ್ಲಿ ಭಾಗಿಯಾದ ಪೊಲೀಸರು



ಸುದ್ದಿಲೈವ್/ಶಿವಮೊಗ್ಗ

ನವರಾತ್ರಿಯ ಆಯುಧ ಪೂಜೆಗೆ ವಾಹನಗಳೆಲ್ಲ ಶೃಂಗಾರಗೊಂಡಿವೆ. ಪೂಜಿಸಲಾಗಿದೆ. ಬಹುತೇಕ ಸರ್ಕಾರಿ ಕಚೇರಿಯ ವಾಹನಗಳೆಲ್ಲಾ ನಿನ್ನೆ ಪೂಜಿಸಲ್ಪಟ್ಟರೆ ಇಂದು ಶಿವಮೊಗ್ಗದ ಪೊಲೀಸ್ ಠಾಣೆಯ ವಾಹನಗಳು ಶಸ್ತ್ರಾಸ್ತ್ರಗಳೆಲ್ಲಾ ಪೂಜಿಸಲಾಗಿದೆ.

ಪೊಲೀಸ್ ಠಾಣೆಗಳೆಲ್ಲವೂ ನಿನ್ನೆನೇ ವಿದ್ಯುತ್ ಅಲಂಕಾರಗೊಂಡಿವೆ. ಇಂದು ವಾಹನ, ಬಂದೂಕು, ಪೊಲೀಸ್ ಲೆಡ್ಜರ್, ಕಂಪೂಟರ್, ಲಾಠಿಗಳೆಲ್ಲವೂ ಪೂಜಿಸಲಾಗಿದೆ. ನವರಾತ್ರಿಯ 9 ನೇ ದಿನವಾದ ಇಂದು ಆಯುಧ ಪೂಜೆ ನಗರದಾದ್ಯಂತ ಸಡಗರ, ಸಂಭ್ರಮದಿಂದ ಜರುಗಿದೆ.

ಪಾಂಡವರ ವನವಾಸ ಮುಗಿಸಿದಟ ನಂತರ ನಡೆದ ಕುರುಕ್ಷೇತ್ರ ಯುದ್ಧದಲ್ಲಿ ಅರ್ಜುನ ವಿಜಯಶಾಲಿಯಾದ. ಪಾಂಡವರು ವಿಜಯದಶಮಿ ದಿನದಂದು ಹಿಂದಿರುಗಿದರು ಮತ್ತು ಅಂದಿನಿಂದ ಈ ದಿನವು ಯಾವುದೇ ಹೊಸ ಉದ್ಯಮವನ್ನು ಪ್ರಾರಂಭಿಸಲು ಮಂಗಳಕರವೆಂದು ನಂಬಲಾಗಿದೆ. ಕರ್ನಾಟಕದಲ್ಲಿ, ಆಯುಧಪೂಜೆಯನ್ನು ಮೂಲ ಹಬ್ಬದ ದಿನವಾದ ವಿಜಯದಶಮಿ (ಆಯುಧಪೂಜಾ ದಿನ) ಒಂದು ದಿನದ ಮೊದಲು ಸಾರ್ವಜನಿಕರಿಂದ ಆಚರಿಸಲಾಗುತ್ತದೆ. 

ಅದರಂತೆ ಶಿವಮೊಗ್ಗ ನಗರದಲ್ಲಿರುವ 9 ಪೊಲೀಸ್ ಠಾಣೆಗಳಲ್ಲಿ ಆಯುಧ ಪೂಜೆ ನಡೆದಿದೆ. 9 ಠಾಣೆಗಳಲ್ಲಿ ದೊಡ್ಡಪೇಟೆ ಪೊಲೀಸರು ಸಂಭ್ರಮದ ಆಯುಧ ಪೂಜೆ ನಡೆಸಿದ್ದಾರೆ. ಸಂಪ್ರದಾಯಿಕ ಉಡುಪುಗಳಾದ ಬಿಳಿ ಶರ್ಟು ಮತ್ತು ಬಿಳಿ ಪಂಚೆಯಲ್ಲಿ ಪುರುಷ ಪೊಲೀಸರು ಕಾಣಿಸಿಕೊಂಡರೆ, ಬಿಳಿ ಸೀರೆಯಲ್ಲಿ ಮಹಿಳಾ ಪೊಲೀಸರು ಕಾಣಿಸಿಕೊಂಡು ತಾಯಿ ಚಾಮುಂಡೇಶ್ವರಿ ಫೊಟೊವಿಟ್ಟು ಪೂಜಿಸಲಾಗಿದೆ. ಮರಾಠ ಪೇಟದಲ್ಲಿ ಪೊಲೀಸರು ಕಾಣಿಸಿಕೊಂಡು ಹಬ್ಬಕ್ಕೆ ಕಿಚ್ಚು ಹಚ್ಚಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Suddi Live