Girl in a jacket

ರಾಜ್ಯದಲ್ಲಿ ಕೆಲಸಕ್ಕೆ ಬಾರದ ಅರಣ್ಯ ಮತ್ತು ಕಂದಾಯ ಸಚಿವರು-ಪ್ರತ್ಯೇಕ ರಾಜ್ಯದ ಕೂಗು ಅನಿವಾರ್ಯ ಎಂದ ತೀನಾಶ್ರೀ



ಸುದ್ದಿಲೈವ್/ಶಿವಮೊಗ್ಗ

ಅರಣ್ಯ ಭೂಮಿಯಲ್ಲಿ ಸಾಗುವಳಿ ಮಾಡಿಕೊಂಡು ಬಂದ ರೈತರ ಹಕ್ಕುಪತ್ರ ನೀಡುವ ವಿಷಯದಲ್ಲಿ 15 ಸಾವಿರ ಅರ್ಜಿ ವಜಾಗೊಳಿಸಲಾಗುತ್ತಿದೆ ಎಂದು ಮಲೆನಾಡ ರೈತ ಸಂಘಟನೆಯ ತೀ.ನಾ.ಶ್ರೀನಿವಾಸ್ ಆರೋಪಿಸಿದರು. 

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅ.21 ರಂದು ಸಾಗರ ಉಪವಿಭಾಗಾಧಿಕಾರಿ ಕಚೇರಿ ಎದುರು ಭೂ ಹಕ್ಕು ಒತ್ತಾಯ ಮತ್ತು ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸಲಾಗುತ್ತಿದೆ ಎಂದರು. 

ನಿನ್ನೆ ಕೃಷಿ ವಿಜ್ಞಾನ ಮೇಳದಲ್ಲಿ ಭಾಗಿಯಾಗಿದ್ದ ಶಾಸಕರಾದ ಆರಗ ಮತ್ತು ಬೇಳೂರು ರೈತರ ಬೆನ್ನಲುಬಾಗಬೇಕೆಂದಿದ್ದಾರೆ. ಇದನ್ನ ಮಾತನಾಡುವ ನೈತಿಕತೆ ಎರಡೂ ಪಕ್ಷದ ಪ್ರತಿನಿಧಿಗಳಿಗೆ ಇಲ್ಲ. ಕೆಲಸಕ್ಕೆ ಬಾರದ ಅರಣ್ಯ ಮಂತ್ರಿ, ಕೃಷ್ಣಬೈರೇಗೌಡರು ಈ ನೆಲಕ್ಕೆ ಬಾರದ ಕಾನೂನು ಮಾಡುವ ಮಂತ್ರಿಯಾಗಿದ್ದಾರೆ. ಅವರನ್ನ ಕಟ್ಟಿಕೊಂಡು ಅರಣ್ಯ ಸಮಿತಿ ಸಭೆ ನಡೆಸಿದ್ದಾರೆ. 3 ಎಕರೆ ಜಮೀನು ಹೊಂದಿದವರಿಗೆ ನೋಟೀಸ್ ನೀಡಲ್ಲ ಎಂದಿದ್ದಾರೆ. ಆದರೆ ಜಿಲ್ಲೆಯಲ್ಲಿ 80 ಜನಕ್ಕೆ ನೋಟೀಸ್ ನೀಡಿದ್ದಾರೆ ಎಂದರು. 

ಸಚಿವ ಮಧು ಬಂಗಾರಪ್ಪ ಹಕ್ಕುಪತ್ರ ಹಂಚಿಕೆ ಬಗ್ಗೆ ಪಾದಯಾತ್ರೆ ನಡೆಸಿ ಮೊದಲ ಬಾರಿಗೆ ಶಾಸಕರಾದರು. ನಂತರ ಸಚಿವರಾದರು. ಬಂಗಾರಪ್ಪನವರ ಆತ್ಮಕ್ಕೆ ಶಾಂತಿ ಸಿಗಬೇಕು ಎಂದರೆ ರೈತರಿಗೆ ಕಿರುಕುಳ ನೀಡುವುದು ನಿಲ್ಲಿಸಬೇಕು. ಆಗ ಬಂಗಾರಪ್ಪನವರ ಬಂಗಾರಧಾಮಕ್ಕೂ ಬೆಲೆ ಬರಲಿದೆ ಎಂದರು. 

140 ಒಕ್ಕಲೆಬ್ಬಿಸಲು ನೋಟೀಸ್ ನೀಡಲಾಗಿದೆ ಎಣ್ಣೆಕೊಪ್ಪದಲ್ಲಿ 41 ಜನ ಕುಟುಂಬಸ್ಥರನ್ನ ದಾಖಲಾತಿ ಇದ್ದರೂ ಒಕ್ಕಲೆಬ್ಬಿಸಲಸಗಿದೆ. ಸಚಿವ ಮಧು ಬಂಗಾರಪ್ಪ ಯಾರಿಗಾಗಿ ಕೆಲಸ ಮಾಡ್ತಾ ಇದ್ದಾರೆ. ಸಂಸತ್ ನಲ್ಲಿ ಕೆಲಸ ಮಾಡಿ ಎಅಮದರೆ ಶಿಕಾರಿಪುರದಲ್ಲಿ ಕೇಸ್ ಹಾಕಿ ಓಡಾಡುವಂತೆ ಮಾಡಿದರು ಎಂದರು. 

ನ್ಯಾಯಯಾಂಗ, ಶಾಸಕಾಂಗ, ಮತ್ತು ಕಾರ್ಯಾಂಗ ಗಳು ಕಣ್ಣು ಮುಚ್ಚಿಕೊಂಡಿದೆ ರೈತರಿಗೆ ಹಾಗಾಗಿ ಅ.21 ರಂದು ಬೇಡಿಕೆ ಈಡೇರುವವರೆಗೆ ಪ್ರತಿಭಟಿಸಲಾಗುವುದು. ಬೇಡಿಕೆ ಈಡೇರಿಕೆಗೆ 12 ರೈತರ ಸಂಘಟನೆ ಪಾಲ್ಗೊಳ್ಳಿದೆ. ಬೇಡಿಕೆ ಈಡೇರದಿದ್ದರೆ ಪ್ರತ್ಯೇಕ ಅನುಚ್ಛೇಧ 6 ರ ಅಡಿ 12 ಜಿಲ್ಲೆಗಳಾದ ಮಲೆನಾಡಿನ ಜನಕ್ಕೆ ಪ್ರತ್ಯೇಕ‌ ರಾಜ್ಯ ನೀಡಬೇಕು ಎಂದು ಆಗ್ರಹಿಸಿದರು. 

ಬ್ರಿಟೀಶರ ವಿರುದ್ಧ ಹೋರಾಡುವಂತಾಗಿದೆ. 80 ಜನ ಸಣ್ಣ ಇಳುವರಿದಾರರಿಗೆ ನೋಟೀಸ್ ನೀಡುವ ರೇಂಜರ್ ಆಫೀಸರ್ ನ್ನ ವಜಾಗೊಳಿಸಬೇಕು. ಭೂಗಳ್ಳ ಸರ್ಕಾರವಿದೆ. ನಮ್ಮ ಬೇಡಿಕೆ ಈಡೇರದಿದ್ದರೆ ನವೆಂಬರ್ 1 ರಂದು  ಅಧಿಕೃತವಾಗಿ ಪ್ರತ್ಯೇಕ ರಾಜ್ಯದ ಬೇಡಿಕೆ ಇಡಲಾಗುವುದು. ಬೆಳಗಾವಿಯಿಂದ ಕೊಡಗಿನವರೆಗೆ ಪ್ರತ್ಯೇಕ ರಾಜ್ಯವಾಗಲಿದೆ ಎಂದರು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Suddi Live