ಶಿವಮೊಗ್ಗದಲ್ಲಿ ಪಟಾಕಿಗಳ ದರ ಏನಾಗಿದೆ?


ಸುದ್ದಿಲೈವ್/ಶಿವಮೊಗ್ಗ

ದೀಪಗಳ ಹಬ್ಬ ದೀಪಾವಳಿ. ಕತ್ತಲಿನ ಮೇಲೆ ಬೆಳಕಿನ ವಿಜಯ ಎಂಬುದು ಹಬ್ಬದ ಸಂಕೇತವಾಗಿದೆ. ಹಿಂದೂಗಳು ಸಂಭ್ರಮದಿಂದ ಆಚರಿಸುವ ಹಬ್ಬ ಈ ದೀಪಾವಳಿ. ಸಾಮಾನ್ಯವಾಗಿ ಐದು ದಿನಗಳ ವರೆಗೆ ಹಬ್ಬ ನಡೆಯಲಿದೆ. ಆದರೆ ಈ ಬಾರಿ ಎರಡು ದಿನಗಳಿಗೆ ಸೀಮಿತವಾಗಿದೆ.

ಕಾರ್ತಿಕ ಮಾಸದ ಆರಂಭವೇ ದೀಪಾವಳಿಯ ಆರಂಭವಾಗಲಿದೆ. ನರಕ ಚತುರ್ದಶಿ, ಲಕ್ಷ್ಮೀ ಪೂಜೆ ಹಬ್ಬದೊಂದಿಗೆ ದೀಪಾವಳಿ ಶುರುವಾಗಲಿದೆ. ದೀಪಾವಳಿ ಎಂದರೆ ಮಕ್ಕಳಿಗೆ ಸಂಭ್ರಮದ ಹಬ್ಬವಾಗಿದೆ. ಕಾರಣ ಪಟಾಕಿಯನ್ನ ಸಿಡಿಸುವುದೇ ಮಕ್ಕಳಿಗೆ ಖುಷಿ ನೀಡುವುದರಿಂದ ಈ ಹಬ್ಬ ಮಕ್ಕಳಿಗಾಗಿಯೇ ನಡೆಯಲಿದೆ ಎಂದರೆ ತಪ್ಪಾಗಲಾರದು. 

ಈ ಬಾರಿ ಶಿವಮೊಗ್ಗದ ಫ್ರೀಡಂ ಪಾರ್ಕ್ ನಲ್ಲಿ ಪಟಾಕಿಗಳ ಮಾರಾಟ ಮಾಡಲಾಗುತ್ತಿದೆ. ಮಲ್ಲಿಗೇನ ಹಳ್ಳಿಯಲ್ಲಿ ಗೋಡಾನ್ ಮಾಡಿಕೊಂಡ ವ್ಯಾಪಾರಸ್ಥರು ಅಲ್ಲಿಂದ ಪಟಾಕಿ ತಂದು ಫ್ರೀಡಂ ಪಾರ್ಕ್ ನಲ್ಲಿ ರೀಟೇಲ್ ದರಕ್ಕೆ ಮಾರಾಟ ಮಾಡುತ್ತಿದ್ದರೆ. ಕೆಲ ಪಟಾಕಿಯ ದರವೂ ಈ ಬಾರಿ 15 ರಿಂದ 20% ಹೆಚ್ಚಿಗೆಯಾಗಿದೆ. ಕೆಲವೊಂದು ಪಟಾಕಿ, ಫ್ಲವರ್ ಪಾಟ್ ಹೂವಿನಕುಂಡ ಲಕ್ಷ್ಮೀ ಪಟಾಕಿ,  ಸ್ಪಾರ್ಕಲೆಸ್ ಸುಸುರ್ ಬತ್ತಿಗಳ ದರ ಹೆಚ್ಚಿಗೆ ಆಗಿದೆ. 

7cm ನಿಂದ 50 cm ವರೆಗಿನ ಸುರ್ ಸುರ್ ಬತ್ತಿ ಪ್ಯಾಕೆಟ್ 30 ರೂ. ನಿಂದ 250 ರೂ. ವರೆಗೆ ಲಭ್ಯವಾಗಲಿದೆ. 240 ಶಾರ್ಟ್ ಗೆ ದರ 3750 ರೂ., 120 ಶಾರ್ಟ್ಸ್ ಗೆ 1850 ರೂ.,  30ರ ಶಾರ್ಟ್ ಗೆ 750 ರೂ. 60ರ ಶಾರ್ಟ್ ಪಟಾಕಿಗೆ 1350ಗಳ ದರ ನಿಗದಿ ಪಡಿಸಲಾಗಿದೆ. 

ಗಿಫ್ಟ್ ಬಾಕ್ಸ್ ಗಳನ್ನ 350 ರೂ.ನಿಂದ 2750 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಗನ್ ರೇಟ್ 50-500 ರೂವರೆಗೆ ಮಾರಲಾಗುತ್ತಿದೆ. ಇದರಲ್ಲಿ ರನ್ನಿಂಗ್ ಐಟಂ ಎಂದರೆ  ಬುಲೆಟ್ ಗನ್ ಆಗಿದೆ. 5 ವರ್ಷ ದಿಂದ ಕ್ರೇಜ್ ಬೆಳೆದಿದೆ. ಇದಕ್ಕೆ ರಿಂಗ್ ಟೈಪ್ ಬುಲೆಟ್ ಬರುತ್ತದೆ. ಇದಕ್ಕೆ ಹೊಗೆ ಕಡಿಮೆಯಾಗಿರುವುದರಿಂದ ಮಕ್ಕಳ ಪ್ರೀತಿ ಪಾತ್ರವಾದ ಪಟಾಕಿ ಆಗಿದೆ. 

ಹೂವಿನ ಕುಂಡ ಬಾಕ್ಸ್ ಗೆ  60 ರೂ. ನಿಂದ 1500 ರೂ.ಗೆ ಮಾರಲಾಗುತ್ತಿದೆ. ವಿವಿಧ ಬಗೆಯ ಹೂವಿನಕುಂಡ ಸಿಗಲಿದೆ. ಪಿಕಾಕ್ ಹೂವಿನ ಕುಡಿಕೆ ಐದು ಬಾರಿ ಸಿಡಿಯುವುದರಿಂದ ಈ ಬಾರಿ ಬೇಡಿಕೆ ಹೆಚ್ಚಾಗುವ ಸಾಧ್ಯತೆ ಇದೆ. ಲಕ್ಷ್ಮೀ ಬಂಡಲ್  ರೂ. 250-500 ರೂ. ಮಾರಾಟ ಮಾಡಲಾಗುತ್ತಿದೆ.  ಸುತ್ತಳತೆ  ಮತ್ತು ಬ್ರಾಂಡ್ ಮೇಲೆ ದರ ಇದರ ವ್ಯತ್ಯಾಸವಾಗಲಿದೆ. 

ರಾಕೆಟ್ ನ್ನೂ ರೂ. 75 ನಿಂದ 350 ರೂ. ಗೆ ಮಾರಾಟವಾಗುತ್ತಿದೆ. ಫೊಟೊ ಫ್ಲಾಶ್ ಎಂಬ ಪಟಾಕಿ ಫ್ಯಾನ್ಸಿಯಾಗಿದೆ. ಈ ಪಟಾಕಿ ಡಂ ಎಂದು ಸದ್ದು ಮಾಡೊಲ್ಲ. ಬದಲಿಗೆ ಕ್ಯಾಮೆರಾಗಳು ಫ್ಲಾಶ್ ಆಗುವ ರೀತಿಯಲ್ಲಿ ಫ್ಲಾಶ್ ಆಗಲಿದೆ. ಇದು 150 ರೂ ಗೆ ಲಭ್ಯವಾಗಲಿದೆ.

ಪಟಾಕಿಗಳಲ್ಲಿ ಸ್ಟ್ಯಾಂಡರ್ಡ್, ಶ್ರೀ ವಿಜಯ್ ವನಿತಾ ಬಹಳ ಫೇಮಸ್ ಪಟಾಕಿಗಳು ಆದರೆ ಶಿವಮೊಗ್ಗದಲ್ಲಿ ಆರ್ ಎಸ್ ಆರ್ ಅಜಾಂತಾ, ಕಾಕ್ ಬ್ಯಾಂಡ್ ಗಳಿಗೆ ಹೆಚ್ಚಿನ ಡಿಮ್ಯಾಂಡ್ ಇದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close