ಅಂಬು ಕಡಿಯುವ ಮೂಲಕ ಸಂಪನ್ನಗೊಂಡ ದಸರಾ



ಸುದ್ದಿಲೈವ್/ಶಿವಮೊಗ್ಗ

9 ದಿನಗಳ ನವರಾತ್ರಿ ಹಬ್ಬ ಅಂಬು ಕಡಿಯುವ ಮೂಲಕ ಸಂಪನ್ನಗೊಂಡಿದೆ.  ಶಿವಮೊಗ್ಗ ದಸರಾ 2024 ಮಹೋತ್ಸವಕ್ಕೆ ಅಂತ್ಯಗೊಂಡಿದೆ. ತಹಶಿಲ್ದಾರ್ ಗಿರೀಶ್ ಸಾಂಪ್ರದಾಯಿಕ ಬನ್ನಿ ಕಡಿದು ಅಂತ್ಯ ಹಾಡಿದ್ದಾರೆ. 

ಇತ್ತ ಬನ್ನಿ ಕಡಿದರೆ ಅತ್ತ ರಾವಣನ ಪ್ರತಿಕೃತಿಯನ್ನ ಸುಡಲಾಗಿದೆ.  ಪಟಾಕಿ ರಾವಣನ ಪ್ರತಿಕೃತಿ ನೆನೆದ ಪರಿಣಾಮ ಹೊತ್ತಿ ಉರಿಯಲಿಲ್ಲ.  ಶಿವಮೊಗ್ಗದ ಫ್ರೀಡಂ ಪಾರ್ಕ್ ನಲ್ಲಿ ಇದ್ದ ಬನ್ನಿ ಮಂಟಪದಲ್ಲಿ ಜನ ಸಂಭ್ರಮಿಸಿದ್ದಾರೆ. 

ವಿಶಿಷ್ಠ ಸಂಭ್ರಮದ ಬನ್ನಿಮುಡಿಯುವ ಕಾರ್ಯಕ್ರಮಕ್ಕೆ  ಸಾವಿರಾರು ಜನರು ಸಾಕ್ಷಿಯಾಗಿದ್ದಾರೆ. ಬನ್ನಿ ಮುಡಿದು ಒಳ್ಳೆಯದನ್ನು ನೆನೆಯುವಂತೆ ಜನ ಹರಿಸಿದ್ದಾರೆ. ತಹಶೀಲ್ದಾರ್ ಗಿರೀಶ್ ಅವರು ಅಂಬು ಕಡಿಯುತ್ತಿದ್ದಂತೆ ಜನರು ಘೋಷಣೆ ಮುಗಿಲು ಮುಟ್ಟಿದೆ. ಪರಸ್ಪರರು ಬನ್ನಿ ಹಂಚಿಕೊಂಡರು ಬನ್ನಿ ಮುಡಿದು ಬಾಳು ಬಂಗಾರವಾಗಲಿ ಎಂದು ಹಾರೈಸಿದ್ದಾರೆ. 

ಬನ್ನಿ ಮಂಟಪದ ಮೇಲೆ ಮಹಾನಗರ ಪಾಲಿಕೆಯ ಅಧಿಕಾರಿಗಳು, ಶಾಸಕರು, ಸಂಸದರು, ಸೂಡಾ ಅಧ್ಯಕ್ಷರು, ಎಂಎಲ್ ಸಿಗಳು ಮೊದಲಾದ ಜನಪ್ರತಿನಿಧಿಗಳು ಬನ್ನಿ ಹಂಚಿಕೊಂಡರು. ಅಂಬು ಕಡಿಯುತ್ತಿದ್ದಂತೆ ಫ್ರೀಡಂ ಪಾರ್ಕ್‌'ನಲ್ಲಿ ಸ್ಥಾಪಿಸಲಾಗಿದ್ದ ರಾವಣನ ಪ್ರತಿಕೃತಿಯನ್ನು ದಹಿಸಲಾಯಿತು. ಬಾಣ ಬಿರುಸುಗಳ ಸೊಬಗು ಮುಗಿಲೆತ್ತರದಲ್ಲಿ ಕಣ್ಮನ ರಂಜಿಸಿತು.


ದೊಡ್ಡ ಸಂಖ್ಯೆಯಲ್ಲಿ ಜನರು ಭಾಗವಹಿಸಿದ್ದರಿಂದ ಫ್ರೀಡಂ ಪಾರ್ಕ್ ಬಳಿ ಬಿಗಿ ಬಂದೋಬಸ್ತ್ ಮಾಡಲಾಗಿದೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close