ಸುದ್ದಿಲೈವ್/ಶಿವಮೊಗ್ಗ
ಪ್ರಭಾವಿ ಜನಪ್ರತಿನಿಧಿ ಮತ್ತು ಅವರ ಪತ್ನಿಯ ಹೆಸರು ಸೇರಿದಂತೆ 8 ಜನರ ಹೆಸರನ್ನ ಡೆತ್ ನೋಟ್ ನಲ್ಲಿ ಬರೆದು ಮಹಿಳೆ ಮತ್ತು ಆಕೆಯ ಮಕ್ಕಳಿಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ವರದಿಯಾಗಿದೆ.
ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯನ್ನ ಒಂದು ವರೆ ತಿಂಗಳು ಹಿಂದೆ ಮಹಿಳೆಗೆ ಕೆಲಸ ಕೊಡಿಸುವುದಾಗಿ ಹೇಳಿ ಹಣ ಪಡೆದು ನಂತಂತರ ಲೈಂಗಿಕವಾಗಿ ಬಳಿಸಿಕೊಂಡ ಆರೋಪವನ್ನ ಹೊತ್ತುಕೊಂಡು ತಲೆಮರೆಸಿಕೊಂಡಿದ್ದ ಚನ್ನಮುಂಬಾಪುರ ಮಂಜುನಾಥ್ ಅವರ ಪತ್ನಿ ಎಂದು ಗುರುತಿಸಲಾಗಿದೆ.
ಮೂವರನ್ನೂ ಮೆಗ್ಗಾನ್‌ಗೆ ದಾಖಲಿಸಲಾಗಿದೆ. ಡೆತ್ ನೋಟ್ ನಲ್ಲಿ ಮಾಜಿ ಶಾಸಕರು, ಮತ್ತು ಪತ್ನಿ, ಅತ್ಯಾಚಾರದ ಆರೋಪ ಮಾಡಿರುವ ನಾಗವೇಣಿ, ಆಶಾ ಸೇರಿದಂತೆ 8 ಜನರ ಹೆಸರು ಬರೆದು ಮಹಾಲಕ್ಷ್ಮಿ ಮತ್ತು ಮಕ್ಕಳು ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಒಂದು ಒಂದೂವರೆ ತಿಂಗಳ ಹಿಂದೆ ಸುಳ್ಳುಕೇಸು ಹಾಕಿದ್ದ ನಾಗವೇಣಿ ಮತ್ತು ಆಶಾ ಎಂಬುವರು ಮಾಜಿ ಶಾಸಕರ ಕುಮ್ಮಕ್ಕಿನಿಂದ ಎಂದು ಡೆತ್ ನೋಟ್ ನಲ್ಲಿ ಬರೆಯಲಾಗಿದೆ. ದೇವಸ್ಥಾನದ ವಿಚಾರದಲ್ಲಿ ಸೇಡಿನ ಪ್ರತಿಫಲವಾಗಿ ನಡೆದಿರುವ ಈ ಸುಳ್ಳು ಪ್ರಕರಣದಲ್ಲಿ ಗಂಡ ಮಂಜುನಾಥ್ ಮೇಲೆ ಅತ್ಯಾಚಾರದ ಪ್ರಕರಣ ಆರೋಪಿಸಲಾಗಿದೆ ಎಂದು ದೂರಲಾಗಿದೆ.
ಇತ್ತೀಚೆಗೆ ಆರೋಪ ಮಾಡಿದವರು ಶರಾವತಿ ನಗರದ ಮನೆಗೆ ನುಗ್ಗಿ ದಾಂಧಲೆ ಮಾಡಿ, ಜಾತಿ ನಿಂದನೆ ಮಾಡಲಾಗಿದೆ. ಫರ್ನಿಚರ್ ಗೆ ಎತ್ತಿಟ್ಟಿದ್ದ 60 ಸಾವಿರ ರೂ. ಹಣವನ್ನ ಇವರುಗಳು ಮನೆಯ ಒಳಗೆ ಅತಿಕ್ರಮಣ ಪ್ರವೇಶ ಮಾಡಿ ದೋಚಿಕೊಂಡು ಹೋಗಿರುವುದಾಗಿ ಡೆತ್ ನೋಟ್ ನಲ್ಲಿ ಉಲ್ಲೇಖಿಸಲಾಗಿದೆ.
ಪ್ರಕರಣ ಸಧ್ಯಕ್ಕೆ ಮಹಿಳಾ ಠಾಣೆಯಲ್ಲಿ ದೂರು ದಾಖಲಾಗಿದ್ದು ದೂರಿನಲ್ಲಿ ಯಾರ ಯಾರ ಹೆಸರು ಉಲ್ಲೇಖಿಸಲಾಗಿದೆ ಎಂಬುದನ್ನ ಕಾದು ನೋಡಬೇಕಿದೆ.