ಲಿಂಗನಮಕ್ಕಿ ಚಲೋ ಪ್ರತಿಭಟನೆಯ ರೈತರು ಪೊಲೀಸರ ವಶಕ್ಕೆ

 


ಸುದ್ದಿಲೈವ್/ಸಾಗರ

ಭೂಹಕ್ಕಿಗಾಗಿ ನಿನ್ನೆ ನಡೆದ ಲಿಂಗನಮಕ್ಕಿ ಜಲಾಶಯಕ್ಕೆ ಮುತ್ತಿಗೆ ಹಾಕಲು ಹೊರಟಿದ್ದ ರೈತರನ್ನು (Farmers) ಕಾರ್ಗಲ್‌ನಲ್ಲಿ ಪೊಲೀಸರು ಬಂಧಿಸಿದರು. ಇದಕ್ಕು ಮುನ್ನ ಸಚಿವ ಮಧು ಬಂಗಾರಪ್ಪ ರೈತರನ್ನು ಭೇಟಿಯಾಗಿ ಪಾದಯಾತ್ರೆ ಕೈ ಬಿಡುವಂತೆ ಮನವಿ ಮಾಡಿದ್ದರು.

ಇನ್ನು, ಕಾರ್ಗಲ್‌ನ ಚೈನ್‌ ಗೇಟ್‌ ಬಳಿ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ರೈತರನ್ನು ಭೇಟಿಯಾಗಿ ಪ್ರತಿಭಟನೆ ಕೈ ಬಿಡುವಂತೆ ಮನವಿ ಮಾಡಿದರು. ಮಾತುಕತೆ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳೋಣ. ಅಗತ್ಯ ಬಿದ್ದರೆ ತಾವು ಕೂಡ ಪ್ರತಿಭಟನೆಯಲ್ಲಿ ಭಾಗವಹಿಸುವುದಾಗಿ ತಿಳಿಸಿದರು.

ಆದರೆ ರೈತರ ಮನವೊಲಿಸುವಲ್ಲಿ ಸಚಿವರು ವಿಫಲರಾಗಿದ್ದಾರೆ. ಇದರಿಂದ ಲಿಂಗನಮಕ್ಕಿ ಚಲೋ ಮುಂದುವರೆದ ಪರಿಣಾಮ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬೇಡಿಕೆ ಈಡೇರಿಗೆ ಒತ್ತಾಯಿಸಿ ಸಾಗರದ ತಾಲೂಕು ಉಪ ವಿಭಾಗಾಧಿಕಾರಿ ಕಚೇರಿ ಮುಂಭಾಗ ರೈತರು ಅನಿರ್ದಿಷ್ಟಾವಧಿ ಸತ್ಯಾಗ್ರಹ ನಡೆಸುತ್ತಿದ್ದರು. ಅ.24ರಂದು ಲಿಂಗನಮಕ್ಕಿ ಚಲೋ ಹಮ್ಮಿಕೊಳ್ಳಲಾಗಿತ್ತು. ದೀಪಾವಳಿಯ ನಂತರ ರೈತರ ಹೋರಾಟ ಮತ್ತೆ ನಡೆಯುವುದಾಗಿ ಹೇಳಲಾಗಿದೆ.

ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ದಿನೇಶ್ ಶಿರವಾಳ, ಶ್ರೀಕರ, ಮಲೆನಾಡು ಭೂ ರೈತರ ಹೋರಾಟ ವೇದಿಕೆ ಅಧ್ಯಕ್ಷ ತೀ.ನಾ.ಶ್ರೀನಿವಾಸ, ಮುಖಂಡರಾದ ಜಿ.ಟಿ. ಸತ್ಯನಾರಾಯಣ, ಮಲ್ಲಿಕಾರ್ಜುನ ಹಕ್ರೆ, ಪರಮೇಶ್ವರ ದೂಗೂರು ಸೇರಿ ಹಲವರು ಇದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close