ಸುದ್ದಿಲೈವ್/ಶಿವಮೊಗ್ಗ
ಚಕ್ರ, ಸಾವೇಹಕ್ಲು, ಶರಾವತಿ, ಲಿಂಗನಮಕ್ಕಿ ತುಂಗಭದ್ರ ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡುವಲ್ಲಿ ವಿಫಲವಾಗಿರುವ ಸರ್ಕಾರದ ಬಳಿ ವಿವಿಧ ಸಂಘಟನೆಗಳು ಸುದ್ದಿಗೋಷ್ಠಿ ನಡೆಸಿ ಪ್ರತ್ಯೇಕ ರಾಜ್ಯದ ಬೇಡಿಕೆ ಇಟ್ಟಿದೆ.
ಡಾ.ಹೆಚ್.ಗಣಪತಿಯಪ್ಪ ಸ್ಥಾಪಿತ ಶಿವಮೊಗ್ಗ ಜಿಲ್ಲಾ ರೈತ ಸಂಘ, ಮಲೆನಾಡು ರೈತರ ಹೋರಾಟ ಸಮಿತಿ, ಮುಳುಗಡೆ ಸಂತ್ರಸ್ತ ಹಾಗೂ ಭೂ ಹಕ್ಕು ವಂಚಿತರ ಸಂಯುಕ್ತ ವೇದಿಕೆ, ಜಿಲ್ಲಾ ವಂಚಿತರ ಭೂಹಕ್ಕು ವಂಚಿತರು, ಮುಳುಗಡೆ ಸಙತ್ರಸ್ತರ ಪರ ಹೋರಾಡುತ್ತಿರುವ ಎಲ್ಲಾ ಸಂಘಗಳು ಸಂಘಟನೆಗಳು ಸಂಯುಕ್ತವಾಗಿ ರಚಿತವಾಗಿರುವ ವೇದಿಕೆ ಹಲವು ಬೇಡಿಕೆ ಇಟ್ಟುಕೊಂಡು ಅ.21ರಂದು ಸಾಗರ ಎ.ಸಿ ಕಚೇರಿ ಎದುರು ಬೃಹತ್ ಅನಿರ್ದಿಷ್ಟ ಅಹೋರಾತ್ರಿ ಧರಣಿ ನಡೆಸಲು ತೀರ್ಮಾನಿಸಿದೆ.
ಹಕ್ಕುಪತ್ರಗಳನ್ನ ವಜಾ ಮಾಡಲು ಸರ್ಕಾರ ಕ್ರಮ ಕೈಗೊಂಡಿರುವ ಆದೇಶ ಹಿಂಪಡೆಯಬೇಕು. ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಮಲ್ಲಂದೂರು ಗ್ರಾಮದ ಹಕ್ಕುಪತ್ರ ನೀಡದಂತೆ ಸೂಚನೆ ಮಾಡಲಾಗಿದೆ. ಇದನ್ನ ವಜಾಗೊಳಿಸಿ 80 ಸಾವಿರ ಅರ್ಜಿಯನ್ನ ಪುನರ್ ಪರಿಶೀಲಿಸಬೇಕು.
ಅರಣ್ಯ ಭೂಮಿ ಸಾಗುವಳಿದಾರರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ 10 ಆದೇಶವಿದ್ದು ಅದನ್ನ ಸಮರ್ಪಕವಾಗಿ ಜಾರಿಗೊಳಿಸಿ ರೈತರಿಗೆ ಹಕ್ಕುಪತ್ರ ನೀಡಬೇಕು. ಕುಂಚೇನಹಳ್ಳಿ, ಹಾಲಲಕ್ಕವಳ್ಳಿ, ಲಕ್ಕಿನಕೊಪ್ಪ ಮತ್ತು ಭದ್ರಾವತಿ ತಾಲೂಕಿನ ದುಲ್ಲಿಶೇನಹಳ್ಳಿಯಲ್ಲಿ 30 ರಿಂದ 50 ವರ್ಷಗಳ ಹಿಂದೆಯೇ ನೀಡಿದ ಸಾವಿರಾರು ಹಕ್ಕುಪತ್ರಗಳ ವಜಾ ಮಾಡು ನೋಟೀಸ್ ನೀಡಿದೆ ಹಿಂಪಡೆಯಬೇಕು.
ಸಾಗರ ತಾಲೂಕು, ಹೊಸನಗರ ತಾಲೂಕಿನ ಮಾಸ್ತಿಕಟ್ಟೆ ಹಾಗೂ ನಗರ ಹೋಬಳಿಯಲ್ಲಿ 15 ಸಾವಿರಕ್ಕೂ ಹೆಚ್ಚು ಕುಟುಂಬಗಳು ಕೆಪಿಸಿ ಭೂಮಿಯಲ್ಲಿ ಮನೆಕಟ್ಟಲು ವಾಸಿಸುತ್ತಿದ್ದಾರೆ. ಕಾಗೋಡು ತಿಮ್ಮಪ್ಪ ಈ ಎಲ್ಲಾ ಜಮೀನನ್ನ ರೈತರಿಗೆ ವಾಪಾದ್ ನೀಡಲು ಆದೇಶಿಸಿದ್ದರು. ಇದನ್ನ ತಕ್ಷಣ ರೈತರಿಗೆ ವಾಪಾಸ್ ನೀಡಬೇಕು ಹಾಗೂ 14 ಬೇಡಿಕೆಗಳನ್ನ ಈಡೇರಿಸುವಂತೆ ಪ್ರತಿಭಟನೆ ನಡೆಸಲಾಗುತ್ತಿದೆ.
ಪ್ರತಿಭಟನೆಯ ವೇಳೆ ಬೇಡಿಕೆ ಈಡೇರದಿದ್ದರೆ ಪ್ರತ್ಯೇಕ ರಾಜ್ಯದ ಬೇಡಿಕೆ ಮುಂದಿಟ್ಟುಕೊಂಡು 9 ರೈತರ ಸಂಘಟನೆಗಳು ಮುಂದಿನ ದಿನಗಳಲ್ಲಿ ನಡೆಸಲು ತೀರ್ಮಾನಿಸಿದೆ.
ಸಾಗರದ ಪಟ್ಟಣ ಗಣಪತಿ ದೇವಸ್ಥಾನದಿಂದ ಕಾಲ್ನಡಿಗೆ ಮೆರವಣಿಗೆ ಮೂಲ ಧರಣಿ ಸ್ಥಳಕ್ಕೆ ತೆರಳಲಿದೆ. ಈ ಸಭೆಗೆ ಗಣ್ಯಾತಿಗಣ್ಯರೂ, ರಾಜ್ಯ ಮಟ್ಟದ ಹೋರಾಟಗಾರರು, ವಿವಿಧ ಮಠಪತಿಗಳು ಹಾಗೂ ಜನಪ್ರತಿನಿಧಿಗಳು ಭಾಗಿಯಾಗಲಿದ್ದಾರೆ
ತೀನಾ ಶ್ರೀನಿವಾಸ್ ವಿಜಿ ಶ್ರೀಕರ್, ದಿನೇಶ್ ಶಿರವಾಳ್, ಶಿವಾನಂದ ಕುಗ್ವೆ, ಗಂಗಾಧರ ಮಂಡೇನಕೊಪ್ಪ, ಹೆಚ್ ಕೆ ಸ್ವಾಮಿ ಆರ್ಮುಗಂ ದಂಡಪಾಣಿ ಮೊದಲಾದವರು ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿದ್ದರು.