Girl in a jacket

ಇದು ಅತ್ಯಂತ ಷಂಡ ಸರ್ಕಾರ-ಚೆನ್ನಬಸಪ್ಪ



ಸುದ್ದಿಲೈವ್/ಶಿವಮೊಗ್ಗ

ರಾಜ್ಯ ಸರ್ಕಾರ ಮುಸ್ಲೀಂರ ತುಷ್ಠೀಕರಣಕ್ಕೆ ಮುಂದಾಗಿದೆ.‌ ಇದು ಅತ್ಯಂತ ಭಂಡ ಮತ್ತು ಷಂಡ ಸರ್ಕಾರ ಎಂದು ಶಾಸಕ ಚೆನ್ನಬಸಪ್ಪ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಹುಬ್ಬಳ್ಳಿ ಗಲಭೆಯಲ್ಲಿರುವ ಆರೋಪಿಗಳನ್ನ ಅಮಾಯಕರು ಎಂದು ಕೇಸ್ ಹಿಂಪಡೆದಿರುವ ಕ್ರಮ ಸರಿಯಲ್ಲ. 2022 ರಲ್ಲಿ ಠಾಣೆಗೆ ಕಲ್ಲು ತೂರಿ, ವಾಹನಗಳಿಗೆ ಮತ್ತೆ ಠಾಣೆಗೆ ಬೆಂಕಿ ಹಚ್ಚಿ ಗಲಬೆ ಸೃಷ್ಠಿಸಿದ ಗಲಭೆ ಕೋರರಿಗೆ ಸುಪ್ರೀಂನಲ್ಲೂ ಜಾಮೀನು ಸಿಗದಿರುವಂತೆ ಪ್ರಕರಣದಾಖಲಾಗಿತ್ತು. 

ರಾಜ್ಯದಲ್ಲಿ ಕಾಂಗ್ರೆಸ್ ‌ಗೆ ಒಂದು ಕಾನೂನು, ಉಳಿದವರಿಗೆ ಒಂದು ಕಾನೂನು ಆಗಿದೆ. ವಿಧ್ವಂಸಕಾರಿ ಕೃತ್ಯಗಳನ್ನ ನಡೆಸಿದ ಎರಡು ವರ್ಷಗಳ ಅಂತರದಲ್ಲಿ ವ್ಯವಸ್ಥೆಯನ್ನೇ ಬುಡಮೇಲು ಮಾಡುವ ಕಾನೂನು ವಿರೋಧಿ ಕಾರ್ಯ ಅಕ್ಷಮ್ಯ ಎಂದು ಆರೋಪಿಸಿದ ಅವರು ಪ್ರತಿಯೊಬ್ಬರ ಮೇಲೂ 12 ಪ್ರಕರಣ ದಾಖಲಾಗಿದೆ. 158 ಜನರ ಮೇಲೆ ಪ್ರಕರಣ ದಾಖಲಾಗಿತ್ತು. 

ಕಾನೂನಿನ ಮೇಲೆ ಕಾಂಗ್ರೆಸ್ ಗೆ ರಕ್ಷಣೆ ಇಲ್ವಾ? ಎಲ್ಲಾ ಘಟನೆಗಳನ್ನ ಕ್ಯಾಬಿನಲ್ಲೇ ಕ್ರಮ ಜರುಗಿಸುವಂತಾಗಲಿ. ಕಠಿಣ ಕ್ರಮ ತೆಗೆದುಕೊಂಡ ಮೇಲೆ ಕ್ಯಾಬಿನೆಟ್ ಅದನ್ನ ರದ್ದುಗೊಳಿಸುತ್ತೇವೆ ಎಂದರೆ ರಕ್ಷಣ ಇಲಾಖೆಯಾಕೆ ಬೇಕು. ಎಲ್ಲವೂ ಸಚಿವ ಸಂಪುಟದಲ್ಲೇ ನಿರ್ಧಾರ ಆಗಲಿ ಎಂದು ಆಗ್ರಹಿಸಿದರು. 

ಪ್ರಜಾಪ್ರಭುತ್ವದ ವಿರೋಧಿ ಕ್ರಮವನ್ನ ಕ್ಯಾಬಿನೆಟ್ ನಲ್ಲಿ ಮತ್ತೊಮ್ಮೆ ಪರಿಶೀಲಿಸಬೇಕು. ಇಲ್ಲವಾದಲ್ಲಿ ಚಳಿಗಾಲದ ಅಧಿವೇಶನದಲ್ಲಿ ಬಿಜೆಪಿ ಚಳಿ ಬಿಡಿಸಲಿದೆ. ಠಾಣೆಗೆ ಬೆಂಕಿ ಹಚ್ಚಿ, ಪೊಲೀಸರನ್ನ ಥಳಿಸುವವರನ್ನ ಅಮಾಯಕರು ಎಂದು ತೀರ್ಮಾನಿಸಿ ರಕ್ಷಣ ಇಲಾಖೆಗೆ ಬೀಗ ಹಾಕಿ ಎಂದು ಗುಡುಗಿದರು. 

ಕ್ಯಾಬಿನೆಟ್ ನ ನಿರ್ಣಯದಲ್ಲಿ ನ್ಯಾಯಾಲಯದ ಆದೇಶದ ಮೇಲೆ ನಿರ್ಣಯ ತೆಗೆದುಕೊಳ್ಳುವುದಾಗಿ ಹೇಳುತ್ತಿರುವ ಸಿಎಂ ಡಿಸಿಎಂ ಹಾಗಾದರೆ ಕ್ಯಾಬಿನೆಟ್ ನಿರ್ಧಾರ ಕೈಗೊಳ್ಳುವ ಅಗತ್ಯವೇನಿತ್ತು? ಸಂಸದ ಪ್ರಹ್ಲಾದ್ ಜೋಶಿಯವರನ್ನ ಭಯೋತ್ಪಾದಕರು ಎಂದು ಸಿಎಂ ಹೇಳಿದ್ದಾರೆ. 158 ಜನ ಮಾಡಬಾರದನ್ನ ಮಾಡಿದ್ದಾರೆ. ಅವರನ್ನ ಬಿಡುಗಡೆ ಮಾಡಿ ಸಂಸದರನ್ನ ಭಯೋತ್ಪಾದಕರ ಎಂದು ಹೇಳ್ತೀರಾ ಎಂದು ಪ್ರಶ್ನಿಸಿದರು. 

ರಕ್ಷಣೆ ಇಲಾಖೆಯನ್ನೇ ಅನುಮಾನಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಇದನ್ನ ಬಿಜೆಪಿ ಗಂಭೀರವಾಗಿ ಮೌಲಾನಾ ವಾಸೀಂ ಪ್ರಚೋದನಕಾರಿ ಭಾಷಣ ಮಾಡಿದ್ದಾರೆ ಎಂದು ರಕ್ಷಣ ಇಲಾಖೆ ಹೇಳಿದೆ.‌‌ ಆದರೆ ಅವರನ್ನ ಬಿಟ್ಟು ಪ್ರಹ್ಲಾದ್ ಜೋಷಿಯನ್ನ ಭಯೋತ್ಪಾದಕರೆಂದು ಕರೆಯಲಾಗಿದೆ. ಅಮಾಯಕ ಹಿಂದೂಗಳ ಮೇಲೆ ಸುಖಾಸುಮ್ನೆ ಪ್ರಕರಣ ದಾಖಲಿಸಿ ಕೋರ್ಟ್ಗೆ ಅಲೆದಾಡಿಸಲಾಗುತ್ತಿದೆ. 

ರಾಗಿಗುಡ್ಡದ ಪ್ರಕರಣದಲ್ಲಿ  ಮೊದಲು 8 ಜನರ ಮೇಲೆ ಹಾಕಿ ನಂತರ 10 ಜನರನ್ನ ಸೇರಿಸಿ  ಒಟ್ಟು 18 ಜನರ ಮೇಲೆ ಪ್ರಕರಣದಾಖಲಿಸಲಾಗುತ್ತದೆ. 

ಕಾನೂನನ್ನ ಕೈಗೆ ತೆಗೆದುಕೊಂಡವರನ್ನ ಕ್ಯಾಬಿನೆಟ್ ಮೂಲಕ ಅಮಾಯಕರೆಂದು ಕರೆಯಲಾಗುತ್ತಿದೆ. ಎನ್ಐಎ ಒಂದು ತೀರ್ಮಾನ, ರಕ್ಷಣ ಇಲಾಖೆ ಒಂದು ರೀತಿ ಕ್ರಮ ತೆಗೆದುಕೊಂಡರೆ ಕ್ಯಾಬಿನೆಟ್ ಮತ್ತೊಂದು ನಿರ್ಧಾರ ಕೈಗೊಳ್ಳುವುದಾದರೆ ರಕ್ಷಣ ಇಲಾಖೆಯನ್ನ ಬಂದ್ ಮಾಡಿ ಇಲ್ಲ ಬಿಜೆಪಿನೇ ಠಾಣೆಗೆ ಬೀಗಹಾಕುವ ಚಳುವಳಿ ನಡೆಸಲಿದೆ ಎಂದು ಎಚ್ಚರಿಸಿದರು. 

ಅತ್ಯಂತ ಷಂಢ ಸರ್ಕಾರ ಭಂಡ ಸರ್ಕಾರವಾಗಿದೆ. ಬಹಳ ನೋವಿನಿಂದ ಹೇಳಬೇಕಿದೆ. ಅತ್ಯಂತ ವಿಜೃಂಭಣೆ ದಸರಾ ನಡೆಸಲು ಶಿವಮೊಗ್ಗ ನಗರದ ಜನರಿಗೆ, ಅಧಿಕಾರಿಗಳಿಗೆ, ಅಭಿನಂದನೆಗಳನ್ನ ಸಲ್ಲಿಸಿದರು. ಖರ್ಗೆಯನ್ನ ಬಿಜೆಪಿ ಅರ್ಬನ್ ನಕ್ಸಲ್ ಎಂದರೆ ಸಿಎಂ ಜೋಷಿಯನ್ನ ಭಯೋತ್ಪಾದಕರು ಎಂದು ಕರೆಯುತ್ತಾರೆ ರಾಜ್ಯ ರಾಜಕಾರಣ ಎಲ್ಲಿಗೆ ಸಾಗುತ್ತಿದೆ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಾಸಕರು ಯಾರೂ ಇದನ್ನ ಬೆಂಬಲಿಸೊಲ್ಲ. ಆದರೆ ಕಾನೂನು ಕೈಗೆ ತೆಗೆದುಕೊಳ್ಳುವರನ್ನ ಅಮಾಯಕರು ಎಂದರೆ ಸುಮ್ಮನಿರಲು ಸಾಧ್ಯವಿಲ್ಲ ಎಂದರು. 

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿಯ ಜ್ಞಾನೇಶ್ವರ್, ನಾಗರಾಜ್, ಶ್ರೀನಾಗ್ ಬೊಮ್ಮನ್ ಕಟ್ಟೆ ಉಪಸ್ಥಿತರಿದ್ದರು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Suddi Live