Girl in a jacket

ಭ್ರಷ್ಠಚಾರ, ನಿರ್ಲಕ್ಷದಿಂದ ಹಳೆ ಶಿವಮೊಗ್ಗ ಮುಳುಗಡೆ ಎಸ್ ಡಿಪಿಐ ಗಂಭೀರ ಆರೋಪ



ಸುದ್ದಿಲೈವ್/ಶಿವಮೊಗ್ಗ

ಭ್ರಷ್ಟ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಎಸ್ ಡಿಪಿಐ  ಆಗ್ರಹಿಸಿದೆ. 

ಇಂದು ಶಿವಮೊಗ್ಗ ನಗರದ ಬಡಾವಣೆಗಳು ಮಳೆ ಬಂದಾಗಲೆಲ್ಲಾ ಜಲಾವೃತಗೊಳ್ಳಲು ಮುಖ್ಯ ಕಾರಣ ಶಿವಮೊಗ್ಗ ಮಹಾನಗರ ಪಾಲಿಕೆಯ ಅಧಿಕಾರಿಗಳ ಬೇಜವಬ್ದಾರಿ ಎಂದು ಆರೋಪಿಸಿದೆ.  

ಆಯುಕ್ತರಿಗೆ ಹಳೆ ಶಿವಮೊಗ್ಗನಗರದ ಬಡಾವಣೆಗಳ ರಾಜಾಕಾಲುವೆಗಳು, ಯುಜಿಡಿಗಳು, ಚರಂಡಿಗಳನ್ನ ಸರಿಪಡಿಸುವಂತೆ ಹಲವು ಬಾರಿ ದೂರು ನೀಡಿದರು ಕ್ರಮ ಕೈಗೊಳ್ಳುವ ಬದಲು ನಿರ್ಲಕ್ಷ್ಯವಹಿಸಿದ ಬೆನ್ನಲ್ಲೇ ಈ ಅವ್ಯವಸ್ಥೆ ಎದುರಾಗಿದೆ ಎಂದು ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಇಮ್ರಾನ್ ಆರೋಪಿಸಿದ್ದಾರೆ.  

ಪಾಲಿಕೆ‌ಯ ಅಧಿಕಾರಿಗಳು ಮತ್ತು ಇಂಜಿನಿಯರ್ ನಿಗಾವಹಿಸಿ ಮಾಡಿರುವ 1ಅಡಿ ಉದ್ದ ಇರುವ ಅವೈಜ್ಞಾನಿಕ UGD, ಅವೈಜ್ಞಾನಿಕ ವಾಟಾ ಇಲ್ಲದೆ ನಿರ್ಮಾಣವಾಗಿದೆ.  ಚರಂಡಿಗಳ ನಿರ್ಮಾಣಗಳಲ್ಲಿ ದೋಷಪೂರಿತವಾಗಿದೆ. ಅವ್ಯವಸ್ಥೆಗಳನ್ನ ನಿರ್ಮಿಸಿ  ಸ್ಮಾರ್ಟ್ ಸಿಟಿ ಅಧಿಕಾರಿಗಳು ಕಣ್ಣುಮುಚ್ಚಿಕುಳಿತಿದ್ದಾರೆ. 

ರಾಜಕಾಲುವೆಗಳು ಅವೈಜ್ಞಾನಿಕವಾಗಿ ನಿರ್ಮಾಣ ಮತ್ತು ಕ್ಲೀನ್ ಆಗದೆ ಅರ್ಧ ಕಾಲುವೆಗಳು ಮಣ್ಣು ಮತ್ತು ಕಸದಿಂದ ಮುಚ್ಚಿ ಹೋಗಿದೆ. ವಾರ್ಡ್ ಆರೋಗ್ಯ ಅಧಿಕಾರಿಗಳ ನಿರ್ಲಕ್ಷ್ಯ. ಭ್ರಷ್ಟಾಚಾರದಲ್ಲಿ ಮುಳುಗಿರುವ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಪದೇ ಪದೇ ಹಳೆ ಶಿವಮೊಗ್ಗದ ನಾಗರಿಕರು ಮಳೆಗಾಲದಲ್ಲಿ ಅವ್ಯವಸ್ಥೆ ಅನುಭವವಹಿಸುವಂತಾಗಿದೆ. 

ಮಹಾನಗರ ಪಾಲಿಕೆಯಿಂದ ಯಾವುದೇ ಟಾಸ್ಕ್ ಫೋರ್ಸ್ ತಂಡ ಅಧವ ಮನೆಗಳಿಂದ ನೀರು ಹೊರತೆಗೆಯಲು ವ್ಯವಸ್ಥೆ ಮಾಡುವುದಿಲ್ಲ. ಇಂತಹ ಭ್ರಷ್ಟಾ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸುತ್ತೇನೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Suddi Live