Girl in a jacket

ಆರೋಪಿಗಳ ಬಂಧನ



ಸುದ್ದಿಲೈವ್/ಶಿವಮೊಗ್ಗ

ವಿಐಎಸ್‌ಎಲ್ ಕಾರ್ಖಾನೆಯ ಒಳಗಡೆ ಸೆಂಟ್ರಲ್ ಎಲೆಕ್ಟ್ರಿಕಲ್ ವರ್ಕ್ ಶಾಪ್‌ಗೆ ರಿಪೇರಿಗೆ ತಂದಿದ್ದ ವೆಲ್ಡಿಂಗ್ ಮಷಿನ್‌ನ 50 ಕೆಜಿ ತಾಂಮ್ರದ ವೈಂಡಿಂಗ್‌ನ್ನ ಕದ್ದುಕೊಂಡು ಹೋಗಿದ್ದ ಇಬ್ವರು ಆರೋಪಿಯನ್ನ ಮಾಲು ಸಮೇತ ಭದ್ರಾವತಿ ನ್ಯೂ ಟೌನ್ ಪೊಲೀಸರು ಬಂಧಿಸಿದ್ದಾರೆ. 

ಸೆ.08 ರಂದು ರಾತ್ರಿ ವಿ.ಐ.ಎಸ್.ಎಲ್ ಫ್ಯಾಕ್ಟರಿ ಒಳಗಡೆ ಸೆಂಟ್ರಲ್ ಎಲೆಕ್ಟಿಕಲ್ ವರ್ಕ ಶಾಪ್ ರಿಪೇರಿ ಮಾಡಲು ತಂದಿದ್ದ ವೇಲ್ಡಿಂಗ್ ಮಷಿನ್ ನಲ್ಲಿ ಇದ್ದ 35,000/-ರೂ ಬೆಲೆ ಬಾಳುವ  50 ಕೆ ಜಿ ತೂಕದ ತಾಮ್ರದ ವೈಂಡಿಂಗ್ ಗಳನ್ನು ಕಳ್ಳತನ ಮಾಡಿದ ಪ್ರಕರಣ   ಎಲ್ ಪ್ರವೀಣ್ ಕುಮಾರ್ ರವರು ವಿ ಐ ಎಸ್ ಎಲ್ ಸೆಕ್ಯೂರಿಟಿ ಗಾರ್ಡ್ ರವರು ನೀಡಿದ ದೂರಿನ ಮೇರೆಗೆ ಭದ್ರಾವತಿ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.‌

ಈ ಪ್ರಕರಣದಲ್ಲಿ ಆರೋಪಿ ಮತ್ತು ಕಳುವಾದ ಮಾಲು ಪತ್ತೆಗಾಗಿ ಮಿಥುನ್ ಕುಮಾರ್ ಜಿ. ಕೆ. ಐಪಿಎಸ್, ಮಾನ್ಯ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ,  ಅನಿಲ್ ಕುಮಾರ್ ಭೂಮರಡ್ಡಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ ಎ.  ಜಿ. ಕಾರಿಯಪ್ಪ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು -2 ಶಿವಮೊಗ್ಗ ಜಿಲ್ಲೆ ರವರ ಮಾರ್ಗದರ್ಶನದಲ್ಲಿ, ನಾಗರಾಜ್, ಪೊಲೀಸ್ ಉಪಾದೀಕ್ಷಕರವರು ಭದ್ರಾವತಿ ಉಪ ವಿಭಾಗ ಶ್ರೀಶೈಲ ಕುಮಾರ್, ಸಿಪಿಐ ನಗರ ವೃತ್ತ ಭದ್ರಾವತಿ ರವರ ಮೇಲ್ವಿಚಾರಣೆಯಲ್ಲಿ  ರಮೇಶ್. ಟಿ ಪಿ.ಎಸ್.ಐ ನ್ಯೂಟೌನ್ ಪೊಲೀಸ್ ಠಾಣೆ ಮತ್ತು ಮಂಜಪ್ಪ ಎಎಸ್‌ಐ ಹಾಗೂ ಸಿಬ್ಬಂದಿಗಳಾದ ಸಿ ಹೆಚ್ ಸಿ - ನವೀನ್ ಮತ್ತು ಸಿಪಿಸಿ ಪ್ರಸನ್ನ ರವರನ್ನು ಒಳಗೊಂಡ ತಂಡವನ್ನು ರಚಿಸಲಾಗಿರುತ್ತದೆ. 

ಸದರಿ ತನಿಖಾ ತಂಡವು ಪ್ರಕರಣದ ಆರೋಪಿಗಳಾದ 1) ವೆಂಕಟೇಶ @ ಬುಡ್ಡಾ, 29 ವರ್ಷ, ಹೊಸ ಕೋಡಿಹಳ್ಳಿ ಗ್ರಾಮ ದೇವನರಸೀಪುರ,  ಭದ್ರಾವತಿ, 2) ಮುನೀರ್ ಜಾನ್ @ ತಿಕಲ, ಎಕಿನ್ಸಾ ಕಾಲೋನಿ ಭದ್ರಾವತಿ ರವರನ್ನು ದಸ್ತಗಿರಿ ಮಾಡಿ ಸದರಿಯವರಿಂದ  ಪ್ರಕರಣಕ್ಕೆ ಸಂಬಂಧಿಸಿದ,  ಅಂದಾಜು ಮೌಲ್ಯ  36,500/- ರೂಗಳ ಬೆಲೆಯ 37 ಕೆಜಿ ತೂಕದ ತಾಮ್ರದ ತಂತಿ  ಮತ್ತು ಕೃತ್ಯಕ್ಕೆ ಬಳಸಿದ ಅಂದಾಜು ಮೌಲ್ಯ  50,000/- ರೂಗಳ ದ್ವಿಚಕ್ರವಾಹನ ಮತ್ತು ಅಂದಾಜು ಮೌಲ್ಯ   50,000/- ರೂಗಳ ಪ್ಯಾಸೆಂಜರ್ ಆಟೋ ಸೇರಿ ಒಟ್ಟು 1,36,500/- ರೂಗಳ ಮಾಲನ್ನು ಅಮಾನತ್ತು ಪಡಿಸಿಕೊಂಡಿರುತ್ತಾರೆ.


 ಸದರಿ ತನಿಖಾ ತಂಡದ ಉತ್ತಮವಾದ ಕಾರ್ಯವನ್ನು ಮಾನ್ಯ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ರವರು ಪ್ರಶಂಸಿಸಿ ಅಭಿನಂದಿಸಿರುತ್ತಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
close