Girl in a jacket

ಬಿಜೆಪಿ ದ್ವೇಶದ ರಾಜಕಾರಣ ನಡೆಸುತ್ತಿದೆ-ಬೇಳೂರು ಆರೋಪ



ಸುದ್ದಿಲೈವ್/ಶಿವಮೊಗ್ಗ

ಮೂಡಾ ಕಚೇರಿಯ ಮೇಲೆ ಇಡಿ ದಾಳಿ ಮಾಡಿರುವ ವಿಚಾರವನ್ನ ಶಾಸಕ ಗೋಪಾಲ ಕೃಷ್ಣ ಬೇಳೂರು ರಾಜಕಾರಣ ತಂತ್ರವಾಗಿದೆ ಎಂದು ಜರಿದಿದ್ದಾರೆ.

ಕೃಷಿ ಮೇಳದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿ, ರಾಜ್ಯಪಾಲರನ್ನ ಬಳಸಿಕೊಂಡು ಸರ್ಕಾರವನ್ನ ಅಸ್ಥಿರವಾಗಿಸಲಾಯಿತು. ಬಂಧನಗೊಂಡು ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಮಾಜಿ ಸಚಿವ ನಾಗೇಂದ್ರ ಏನಂದ್ರು? ಮುಖ್ಯಮಂತ್ರಿ ಮತತು ಉಪಮುಖ್ಯಂತ್ರಿಗಳ ಹೆಸರು ಹೇಳಬೇಕು ಎಂದು ಇಡಿ ಒತ್ತಾಯಿಸಿದ್ದನ್ನ ಪ್ರಸ್ತಾಪಿಸಿದ್ದಾರೆ.

ಮೂಡಾ ವಿಚಾರದಲ್ಲಿ ನ್ಯಾಯಾಲಯ ಏನು ಹೇಳಿದೆ ತನಿಖೆ ನಡೆಸಿ. ತನಿಖೆಯಲ್ಲಿ ತಪ್ಪಿತಸ್ಥರು ಯಾರು ಇದಾರೆ ಹೊರಗೆ ಬರಲಿ. ಮೊನ್ನೆ ನಾರಾಯಣ ಸ್ವಾಮಿ ಶಿವಮೊಗ್ಗಕ್ಕೆ ಬಂದ ವೇಳೆ ಕಳ್ಳ ಎಂದು ಸಿಎಂನ್ನ ಕರೆದಿದ್ದಾರೆ. ಹಾಗಾದರೆ ಯಡಿಯೂರಪ್ಪ ಕಳ್ಳ ಎಂದು ಕರೆಯಲು ಬರುತ್ತಾ ಎಂದು ದೂರಿದರು.

ಕಳ್ಳ ಆಗೋದು ಯಾವಾಗ? ನ್ಯಾಯಾಲಯ ಶಿಕ್ಷೆ ಪ್ರಕಟಮಾಡುತ್ತದೆ. ಯಡಿಯೂರಪ್ಪ, ಮತ್ತು ಮಕ್ಕಳು ಮತ್ತು ಈಶ್ವರಪ್ಪನವರು ಏನೇನು ಲೂಟಿ ಹೊಡೆದಿದ್ದಾರೆ ಎಲ್ಲವೂ ಗೊತ್ತಿದೆ. ಈ ರೀತಿಯ ದ್ವೇಷದ ರಾಜಕಾರಣ ಮಾಡಬಾರದು. ದೇಶದಲ್ಲಿ ಅತಂತ್ರ್ಯ ರಾಜಕಾರಣವಿದೆ. ನಮ್ಮ ಮುಖ್ಯಮಂತ್ರಿಗಳು ತಪ್ಪಿತಸ್ಥರೆಂದಾದರೆ ನಾವೇ ರಾಜೀನಾಮೆ ಕೊಡಿಸುತ್ತೇವೆ. ವಿಪಕ್ಷಗಳಿಗೆ  ಕೆಲಸವಿಲ್ಲ. ಸರ್ಕಾರವನ್ನ ಅಸ್ಥಿರಗೊಳಿಸಬೇಕು. ಅದೇ ಉದ್ದೇಶವಾಗಿದೆ ಎಂದು ದೂರಿದರು.

ದೀಪಾವಳಿ ಹಬ್ಬಕ್ಕೆ ಸಿಎಂ ರಾಜೀನಾಮೆ ಕೊಡ್ತಾರೆ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ವಿಜೇಂದ್ರ ಭವಿಷ್ಯ ಹೇಳ್ತಾನಾ? ಎಂದು ಗುಡುಗಿದ ಬೇಳೂರು ಯಡಿಯೂರಪ್ಪನವರನ್ನ 20 ತಿಂಗಳು ಸಿಎಂ ಮಾಡಿದಾಗ ಭವಿಷ್ಯ ಹೇಳಬೇಕಿತ್ತು. ಹಬ್ಬದ ಬೆಳಿಗ್ಗೆ ಸಿಎಂ ಇರಲ್ಲ ಎಂದು ಹೇಳ್ತಾರೆ. ಭವಿಷ್ಯ ನುಡಿಯುವುದನ್ನ ಅವರು ನಿಲ್ಲಿಸಬೇಕು ಎಂದು ಅಗ್ರಹಿಸಿದರು.

ದ್ವೇಷದ ರಾಜಕಾರಣ ನಡೆಸಲಾಗುತ್ತಿದೆ. ಮೋದಿಗೆ ಸೆಡ್ಡುಹೊಡಿಯುವ ರಾಜಕಾರಣಿ ಎಂದರೆ ಸಿಎಂ ಸಿದ್ದರಾಮಯ್ಯ ಒಬ್ಬರೆ ಆಗಿದ್ದಾರೆ. ಮೂರು ಉಪಚುನಾವಣೆಯಲ್ಲಿ ಗೆಲುವಿನ ವಿಶ್ವಾಸವಿದೆ. ಯಾರು ಅಭ್ಯರ್ಥಿ ಆಗ್ತಾರೆ ಗೊತ್ತಿಲ್ಲ.‌ ತೇಜಸ್ವಿನೇ ಆಗಬಹುದು ಅಥವಾ ಯೋಗೀಶ್ವರ್ ಅವರೇ ಕಾಂಗ್ರೆಸ್ ಗೆ ಬರಬಹುದು ಎಂದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು