ಸುದ್ದಿಲೈವ್/ಶಿವಮೊಗ್ಗ
ರಾಜ್ಯದ ಬಡ ರೈತರ ಜಮೀನು ಮತ್ತು ಹಿಂದೂ ಮಠ-ಮಾನ್ಯಗಳನ್ನ ಕಬಳಿಸುತ್ತಿರುವ ವಕ್ಫ್ ಬೋರ್ಡ್ ನೀತಿಯನ್ನ ನಿಯಂತ್ರಿಸುವಂತೆ ಆಗ್ರಹಿಸಿ ಇಂದು ರಾಷ್ಟ್ರಭಕ್ತರ ಬಳಗ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಡಿಸಿ ಮೂಲಕ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಮಾಜಿ ಡಿಸಿಎಂ ಈಶ್ವರಪ್ಪ, ಸಚಿವ ಜಮೀರ್ ಕೈಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಿಕ್ಕಿಕೊಂಡಿದ್ದಾರೆ. ಭಾರತದ ಅನ್ನ ತಿನ್ನುತ್ತಿರುವ ಜಮೀರ್ ನಂತಹ ಮುಸ್ಲೀಂರು ಭೂಮಿಯನ್ನ ಕಿತ್ತುಕೊಳ್ಳುತ್ತಿದ್ದಾರೆ. ಕರ್ನಾಟಕವನ್ನ ಇಸ್ಲಾಂ ರಾಷ್ಟ್ರವನ್ನಾಗಿ ಮಾಡಲು ಹೊರಟಿರುವ ಜಮೀರ್ ಪಾಕಿಸ್ತಾನಕ್ಕೆ ಕಳುಹಿಸಬೇಕೆಂದು ಆರೋಪಿಸಿದರು.
ಲಕ್ಷಾಂತರ ರೈತರ ಪಹಣಿಯಲ್ಲಿ ವಕ್ಫ್ ಹೆಸರು ಬಂದಿದೆ. ಯಾವ ಕಾರಣಕ್ಕೂ ಇದನ್ನ ಆಗಲು ಬಿಡಲ್ಲ. ವಿಜಯಪುರದ ಸಿದ್ದಲಿಂಗ ಮಠದ ಆಸ್ತಿಯೂ ವಕ್ಫ್ ಆಸ್ತಿಯಾಗಿದೆ. ಆಳಂದದ ಬೀರದೇವರ ದೇವಸ್ಥಾನದ ಆಸ್ತಿಯೂ ವಕ್ಫ್ ಒಳಗೆ ಬಂದಿದೆ. ನಿನ್ನೆ ಸಿಎಂ ಯಾರು ಯಾರು ಅಧಿಕಾರಿಗಳು ನೋಟೀಸ್ ನೀಡಿರುವುದನ್ನ ವಾಪಾಸ್ ಪಡೆಯುವುದಾಗಿ ಹೇಳಿದ್ದರು. ಆದರೆ ನಿನ್ನೆ ಸಂಜೆನೇ ಯರಗಲ್ ತಾಲೂಕಿನ ಸಿದ್ದ ಶಂಕರಾನಂದ ಮಠಕ್ಕೆ ಅಧಿಕಾರಿಗಳು ನೋಟೀಸ್ ನೀಡಿದ್ದಾರೆ. 1957 ರಿಂದ ಮಠ ಎಂದು ಇದ್ದ ಪಹಣಿಯಲ್ಲಿ ಈಗ ವಕ್ಫ್ ಆಸ್ತಿ ಎಂದು ಬಂದಿದೆ ದೂರಿದರು.
ಎಲ್ಲಿಯ ವರೆಗೆ ರೈತರ ಮತ್ತು ಮಠಗಳ ಹೆಸರಿಗೆ ಪಹಣಿ ಬರೊಲ್ವೋ ಅಲ್ಲಿಯವರೆಗೆ ಹೋರಾಟಮಾಡಲಾಗುವುದು. ದಲಿತರ ಆಸ್ತಿಯನ್ನೂ ವಕ್ಫ್ ಆಸ್ತಿ ಮಾಡಲು ಹೊರಟ ಜಮೀರ್ ನ ಗುರು ಸಿದ್ದರಾಮಯ್ಯ ಎಂದು ಆರೋಪಿಸಿದರು.
ವಕ್ಫ್ ಆಸ್ತಿ ಮಾಡಲು ಹೊರಟಿರುವ ಜಮೀರ್ ಮತ್ತು ಸಿದ್ದರಾಮಯ್ಯನವರು ನರಕಕ್ಕೆ ಹೋಗಲಿದ್ದಾರೆ. ಎಲ್ಲಾ ದೇವಸ್ಥಾನಗಳಿಗೆ ಹೋಗಿಬರುತ್ತಿರುವ ಸಿದ್ದರಾಮಯ್ಯ ಇಂತಹ ಕೃತ್ಯದಿಂದ ನರಕಕ್ಕೆ ಹೋಗಬೇಡಿ ಎಂದು ಸಲಹೆ ನೀಡಿದರು.
ವಕ್ಫ್ ಆಸ್ತಿಗೆ ಹೊಸ ತಿದ್ದುಪಡಿ ಜಾರಿಗೆ ತರಲು ಹೊರಟಿರುವ ಪ್ರಧಾನಿ ಮೋದಿ ಆದಷ್ಟು ಬೇಗ ಕಾಯ್ದೆ ಜಾರಿಗೊಳಿಸಬೇಕು. ಉಳಿದ ಸಚಿವರೆಲ್ಲಾ ಸತ್ತುಹೋಗಿದ್ದಾರೆ. ಮೂರು ಉಪಚುನಾವಣೆಯಲ್ಲಿ ಹಿಂದೂ ಪರವಾಗಿ ಕೆಲಸ ಮಾಡುವ ನಾಯಕರಿಗೆ ಮತಹಾಕಿ ಗೆಲ್ಲಿಸಿ ಕಾಂಗ್ರೆಸ್ ನ್ನ ತಿರಸ್ಕರಿಸಲು ಈಶ್ವರಪ್ಪ ಕರೆ ನೀಡಿದರು.
ಈ ಭೂಮಿ ಕೇವಲ ಕಲ್ಲುಮಣ್ಣನಿಂದ ಕೂಡಿಲ್ಲ. ನಮ್ಮ ಹಿಂದೂಗಳಿಗೆ ಇದು ಮಾತೃಭೂಮಿ. 15 ದಿನದ ಒಳಗೆ ಸರಿಪಡಿಸದಿದ್ದರೆ ರಾಷ್ಟ್ರಭಕ್ತರ ಬಳಗ ಪ್ರತಿಭಟನೆ ಬಗ್ಗೆ ಚಿಂತಿಸಲಿದೆ. ರೈತರ ಭೂಮಿ ಬದಲಾಗಿಲ್ಲ. ಬದಲಿಗೆ ದಾಖಲಾತಿ ಬದಲಾಗಿದೆ. ಸಿಎಂ ಅವರ ಮಾತನ್ನೂ ಕೇಳದೆ ನೋಟಿಸ್ ನೀಡಲಾಗುತ್ತಿದೆ. ಇಂತಹ ಸಿಎಂ ಇದ್ದರೆಷ್ಟು ಹೋದರೆಷ್ಟು ಎಂದು ಗುಡುಗಿದರು.