‘ಹಲಾಲ್ ಮುಕ್ತ ದೀಪಾವಳಿ ಅಭಿಯಾನ’ಕ್ಕೆ ಚಾಲನೆ !



ಸುದ್ದಿಲೈವ್/ಶಿವಮೊಗ್ಗ

ರಾಜ್ಯದಾದ್ಯಂತ ಕಳೆದ ಅನೇಕ ವರ್ಷಗಳಿಂದ ಭಾರತದಲ್ಲಿ ಉದ್ದೇಶಪೂರ್ವಕವಾಗಿ ಹಲಾಲ್ ಉತ್ಪನ್ನಕ್ಕಾಗಿ ಬೇಡಿಕೆ ಕೊಡಲಾಗುತ್ತಿದ್ದು ಆದ್ದರಿಂದ ಹಿಂದೂ ವ್ಯಾಪಾರಿಗಳು ವ್ಯಾಪಾರ ಮಾಡಲು ಹಲಾಲ್ ಪ್ರಮಾಣ ಪತ್ರ ಪಡೆಯಬೇಕಾಗುತ್ತಿದೆ. 

ಮೊದಲು ಹಲಾಲ್ ಪರಿಕಲ್ಪನೆಯು ಕೇವಲ ಮಾಂಸದ ಉತ್ಪನ್ನಗಳು ಮತ್ತು ಮುಸ್ಲಿಂ ದೇಶಗಳಿಗೆ ರಫ್ತಿಗೆ ಸೀಮಿತವಾಗಿತ್ತು. ಆದರೆ ಈಗ ಭಾರತದಲ್ಲಿ ಅಕ್ಕಿಹಿಟ್ಟು, ಸಕ್ಕರೆ, ಚಾಕಲೇಟ್, ಬಿಸ್ಕೆಟ್ ಇತರೆ ದಿನನಿತ್ಯದ ಉತ್ಪನ್ನ, ಔಷಧಿಗಳು, ಸೌಂದರ್ಯವರ್ಧಕಗಳು, ಹೀಗೆ ವಿವಿಧ ಉತ್ಪನ್ನಗಳು ಹಲಾಲ್ ಪ್ರಮಾಣಿಕೃತ ಆಗತೊಡಗಿದೆ. 

ಆದ್ದರಿಂದ ಹಿಂದೂಗಳು ದೀಪಾವಳಿ ಹಬ್ಬದ ಸಂದರ್ಭದಲ್ಲಿ ವಸ್ತುಗಳನ್ನು ಖರೀದಿಸುವಾಗ ಹಲಾಲ್ ಪ್ರಾಮಾಣಿತ ವಸ್ತು ನಾವು ಖರೀದಿಸುತ್ತಿಲ್ಲವಲ್ಲ ಎಂದು ಪರಿಶೀಲಿಸಿಯೇ ಕೊಳ್ಳಲು ಹಿಂದೂ ರಾಷ್ಟ್ರ ಸಮನ್ವಯ ಸಮಿತಿ ಕರೆ ನೀಡಿದೆ.   

ಈ ದೀಪಾವಳಿಯನ್ನು ಹಲಾಲ್ ಮುಕ್ತ ದೀಪಾವಳಿಯಾಗಿ ಆಚರಿಸಲು  ಸಮಿತಿಯ ಶಿವಮೊಗ್ಗ ಸಂಯೋಜಕರಾದ  ದಿನೇಶ್ ಚೌಹಾಣ  ಕರೆನೀಡಿದ್ದಾರೆ. ಅವರು 25 ಅಕ್ಟೋಬರ್ ಶುಕ್ರವಾರದಂದು ಶಿವಮೊಗ್ಗದ ರಾಮಣ್ಣ ಶ್ರೇಷ್ಠಿ ಪಾರ್ಕ್ ಬಳಿ ಆಯೋಜಿಸಿದ್ದ ಜಾಗೃತಿ ಆಂದೋಲನದಲ್ಲಿ ಮಾತನಾಡಿದರು.


ಭಾರತ ಸರ್ಕಾರದ ಅಧಿಕೃತ ಆಹಾರದ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಇರುವಾಗ ಹಲಾಲ್ ಪ್ರಮಾಣಿಕೃತ ವ್ಯವಸ್ಥೆಯ ಅವಶ್ಯಕತೆ ಕಾಣುವುದಿಲ್ಲ, ಆದರೆ ಭಾರತದಲ್ಲಿ ಇಂದು ತುಂಬಾ ವ್ಯಾಪಕ ಪ್ರಮಾಣದಲ್ಲಿ ಹಲಾಲ್ ಅರ್ಥವ್ಯವಸ್ಥೆ ಜಾರಿಯಲ್ಲಿರುವುದು ಗಮನಕ್ಕೆ ಬರುತ್ತಿದೆ. ಉತ್ತರಪ್ರದೇಶ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಹಲಾಲ್ ಪ್ರಮಾಣಪತ್ರವನ್ನು ಅಧಿಕೃತವಾಗಿ ನಿರ್ಬಂಧಿಸಲಾಗಿದೆ. 

ಹಲಾಲ್ ಜಿಹಾದ್ ಒಂದು ಆರ್ಥಿಕ ಯುದ್ಧವಾಗಿದೆ. ಇದು ಭಾರತೀಯರಿಗೆ ಗಂಭೀರ ಸಮಸ್ಯೆಯಾಗಿದೆ. ಹಲಾಲ್ ಜಿಹಾದ್ ಮೂಲಕ ದೇಶವಿರೋಧಿ ಶಕ್ತಿಗಳು ಭಾರತವನ್ನು ಪರಿವರ್ತಿಸಲು ಪ್ರತ್ಯೇಕ ಅರ್ಥವ್ಯವಸ್ಥೆಯನ್ನು ನಿರ್ಮಿಸುತ್ತಿವೆ. ಇದೊಂದು ಸಮಾನಾಂತರ ಅರ್ಥವ್ಯವಸ್ಥೆಯಾಗಿದ್ದು ಅನೇಕ ದೇಶಗಳ ಜಿಡಿಪಿಗೆ ಸವಾಲು ಹಾಕಲು ದಿಟ್ಟ ಹೆಜ್ಜೆಯನ್ನಿಟ್ಟಿದೆ. 

ಒಂದು ವೇಳೆ ಈ ಅರ್ಥವ್ಯವಸ್ಥೆಯು ಜಗತ್ತನ್ನು ಅಸ್ಥಿರಗೊಳಿಸಲು ಬಯಸುವ ಜಿಹಾದಿಗಳ ಪಾಲಾದರೆ, ಇದರ ಪರಿಣಾಮಗಳು ಭೀಕರವಾಗಬಹುದು. ಹೀಗಾಗಬಾರದು ಎಂದು ಹಿಂದೂ ಜನಜಾಗೃತಿ ಸಮಿತಿ, ಹಿಂದೂ ರಾಷ್ಟ್ರ ಸಮನ್ವಯ ಸಮಿತಿ ಹೀಗೆ ಸಮಸ್ತ ಹಿಂದೂ ಸಂಘಟನೆಗಳು ಒಟ್ಟಾಗಿ ಈ ಬಾರಿಯ ದೀಪಾವಳಿಯನ್ನು ಹಲಾಲ್ ರಹಿತ ದೀಪಾವಳಿಯಾಗಿ ಆಚರಿಸುವಂತೆ ಜನರಲ್ಲಿ ಜಾಗೃತಿ ಮೂಡಿಸಲು ಮುಂದಾಗಿದೆ ಎಂದರು.

ಅಭಿಯಾನದ ಅಂತರ್ಗತ ಇದುವರೆಗೆ ಮಂಗಳೂರಿನಲ್ಲಿ ಜಾಗೃತಿ ಆಂದೋಲನ ನಡೆಸಲಾಗಿದೆ. ಇನ್ನು ಧಾರವಾಡ, ಉಡುಪಿ, ತುಮಕೂರು, ಬೆಂಗಳೂರು ಹೀಗೆ ರಾಜ್ಯದಾದ್ಯಂತ ಈ ಅಭಿಯಾನ ನಡೆಯಲಿದೆ ಎಂದು ಸಮಿತಿ ಸುದ್ದಿಲೈವ್ ಗೆ ತಿಳಿಸಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close