ಎಡಿಜಿಪಿ ವಿರುದ್ಧ ಜಿಲ್ಲಾ ಜೆಡಿಎಸ್ ಪ್ರತಿಭಟನೆ



ಸುದ್ದಿಲೈವ್/ಶಿವಮೊಗ್ಗ

ಎಡಿಜಿಪಿ ಚಂದ್ರಶೇಖರ್ ಕೇಂದ್ರ ಸಚಿವ ಕುಮಾರ್ ಸ್ವಾಮಿಯನ್ನ ಹಂದಿಗೆ ಹೋಲಿಸಿ ಮಾತನಾಡಿರುವುದರ ವಿರುದ್ಧ ಜೆಡಿಎಸ್ ಪಕ್ಷ ಅಧಿಕಾರಿ ವಿರುದ್ಧ ತಿರುಗಿ ಬಿದ್ದಿದೆ. 

ಸುದ್ದಿಗೋಷ್ಠಿ ನಡೆಸಿದ ರಾಜ್ಯ ಜೆಡಿಎಸ್ ಉಪಾಧ್ಯಕ್ಷ ಕೆ.ಬಿ.ಪ್ರಸನ್ನ ಕುಮಾರ್ ಎಡಿಜಿಪಿ ಎಚ್ಚರಿಕೆಯಿಂದ ಮಾತನಾಡಬೇಕು ಎಂದು ತಾಕೀತು ಮಾಡಿದ್ದಾರೆ.  ಈಗಾಗಲೇ ಜೆಡಿಎಸ್ ಪಕ್ಷ ಎಡಿಜಿಪಿ ವಿರುದ್ಧ ಕ್ರಮ ಜರುಗಿಸಬೇಕು ಮತ್ತು ಅನಧಿಕೃತ ಸ್ವತ್ತಿನ ವಿರುದ್ಧ ತನಿಖೆ ನಡೆಸುವಂತೆ ಸರ್ಕಾರಿ ಪ್ರಧಾನ ಕಾರ್ಯದರ್ಶಿಗೆಮನವಿ ಮಾಡಿದೆ. 

ನಾಡಿದ್ದು, ಅ.3 ರಂದು  ಪ್ರತಿ ತಾಲೂಕು, ಜಿಲ್ಲಾಕೇಂದ್ರಗಳಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೆ ಜೆಡಿಎಸ್ ಮನವಿ ಮಾಡಿಕೊಳ್ಳಲಿದೆ. ಶಿವಮೊಗ್ಗ ಜಿಲ್ಲಾ ಜೆಡಿಎಸ್ ಪಕ್ಷದ ಕಚೇರಿಯಿಂದ ಡಿಸಿ ಕಚೇರಿಯವರೆಗೆ ಪ್ರತಿಭಟನೆ ನಡೆಸಿ ಮನವಿ ನೀಡಲಿದ್ದಾರೆ. ವಿಚಾರಣೆ ಮಾಡಲಿ ಆದರೆ ಪದ ಬಳಕೆ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದು ಎಚ್ಚರಿಸಿದರು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close