Girl in a jacket

ಶಿವಮೊಗ್ಗ ಗ್ರಾಮಾಂತರ ಭಾಗದಲ್ಲಿ ಮಳೆ ಹಾವಳಿ-ರೈತರ ಪರದಾಟ

 


ಸುದ್ದಿಲೈವ್/ಶಿವಮೊಗ್ಗ ಅ.09

ಜಿಲ್ಲೆಯಾದ್ಯಂತ ಮಂಗಳವಾರ ರಾತ್ರಿ ವೇಳೆಗೆ ಮಳೆ ಅಕ್ಷರಶಃ ಮಳೆ ಹಾವಳಿಯಿಟ್ಟಿದೆ. ನಗರ ಮತ್ತು ಗ್ರಾಮಾಂತರ ಭಾಗದಲ್ಲಿ ಗುಡುಗು, ಮಿಂಚು(lightning) ಸಹಿತ ರಾತ್ರಿ(night) ಪೂರ್ತಿ ಮಳೆ  ಅಬ್ಬರಿಸಿದೆ. ಇನ್ನೊಂದೆಡೆ ಇವತ್ತು ಕೂಡ ಜೋರು ಮಳೆಯಾಗುವ ಸಾಧ್ಯತೆ ಇದೆ.

ಶಿವಮೊಗ್ಗದ ಕೆಲ ಗ್ರಾಮಗಳಲ್ಲಿ ನಿನ್ನೆ ಸಂಜೆ 7 ಗಂಟೆಗೆ ಮಳೆ ಆರಂಭವಾದರೆ, ಕೆಲವೆಡೆ  ಸುಮಾರು 8-30 ರಿಂದ 9 ರ ನಡುವೆ ಮಳೆ ಆರಂಭವಾಗಿದೆ. ತಡರಾತ್ರಿ 2 ಗಂಟೆವರೆಗೆ ಮಳೆ ಅಬ್ವರಿಸಿದೆ. ಹವಮಾನ ಇಲಾಖೆಯ ಎಚ್ಚರಿಕೆಯ ನಡುವೆಯು ಶಿವಮೊಗ್ಗ ನಗರ ಮತ್ತು ಗ್ರಾಮಾಂತರ ಅಕ್ಷಶಃ ನೀರಾಗಿದೆ. 

ರಾತ್ರಿ ಗುಡುಗು ಸಹಿತ ಹಿಂಗಾರು ಅಬ್ಬರ ಜೋರಾಗಿ ಮಳೆ ಹಾವಳಿ ಹೆಚ್ಚಾಗಿತ್ತು. ವಿವಿಧೆಡೆ ರಸ್ತೆ ಮೇಲೆ ಭಾರಿ ಪ್ರಮಾಣ ನೀರು ಹರಿಯುತ್ತಿವೆ. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು ಸ್ಥಳೀಯರು ಆತಂಕಕ್ಕೀಡಾಗಿದ್ದರು. ಇನ್ನು, ಜಿಲ್ಲೆಯ ವಿವಿಧೆಡೆಯ ಭಾರಿ ಮಳೆ ಅಬ್ಬರಿಸಿದೆ.

ಇಂದು ಕೂಡ ಶಿವಮೊಗ್ಗ ಜಿಲ್ಲೆಯಲ್ಲಿ ಜೋರು ಮಳೆಯಾಗುವ ಸಾಧ್ಯತೆ ಇದೆ. ಇನ್ನು ಮೂರು ಗಂಟೆಯಲ್ಲಿ ಶಿವಮೊಗ್ಗ, ಹಾವೇರಿ, ಗದಗ, ಧಾರವಾಡ, ದಾವಣಗೆರೆ, ದಕ್ಷಿಣ ಕನ್ನಡ, ಬಳ್ಳಾರಿ, ಬೆಳಗಾವಿ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆಯ ಬೆಂಗಳೂರು ವಿಭಾಗ ಬೆಳಗ್ಗೆ 7 ಗಂಟೆ ಹೊತ್ತಿಗೆ ಅಲರ್ಟ್‌ ಪ್ರಕಟಿಸಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಲಾಗಿದೆ.

ಶಿವಮೊಗ್ಗ ಗ್ರಾಮಾಂತರ ಭಾಗದಲ್ಲ ಆಯನೂರು ಹೋಬಳಿಯ ಶೆಟ್ಟಿಕೆರೆ ತುಂಬಿ ರಸ್ತೆಗೆ ಹರಿದಿರುವ ದೃಶ್ಯ ಲಭ್ಯವಾಗಿದೆ. ಪುರುದಾಳಿನಲ್ಲಿ ಕೆರೆ ಗದ್ದೆಗೆ ನುಗ್ಗಿವೆ. ಕೆಲ ರೈತರ ನೀರು ಪಂಪ್ ಮಾಡುವ ಮೋಟಾರ್ ಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಿರುವ ಬಗ್ಗೆ ವದರಿಯಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
close