Girl in a jacket

ಸಂಸದರ ಕಾಂಗ್ರೆಸ್ ಪಕ್ಷದ ವಿವರಣೆಗೆ ಆಯನೂರು ತಿರುಗೇಟು



ಸುದ್ದಿಲೈವ್/ಶಿವಮೊಗ್ಗ

ಕಾಂಗ್ರೆಸ್ ಪಕ್ಷವನ್ನ ಕರುಪ್ಷನ್ ಪಕ್ಷ ಎಂದು ಕರೆದಿರುವ ಬಗ್ಗೆ ಕೆಪಿಸಿಸಿ ವಕ್ತಾ‌ಆಯನೂರು ಮಂಜುನಾಥ್ ಆಕ್ಷೇಪ ವ್ಯಕ್ತಪಡಿಸಿದರು.

ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕಸಭಾ ಚುನಾವಣೆ ಬರುವ ವರೆಗೂ ಹಣ ಹರಿಸದೆ ನಡೆಯುತ್ತಿದ್ದ ಕಾಲವಿತ್ತು. ಬಿ.ವೈ ರಾಘವೇಂದ್ರ ಚುನಾವಣೆ ಎದುರಿಸಲು ಆರಂಭಿಸಿದ ನಂತರ ಹಣದ ಹೊಖೆ ಹರಿದಿದೆ. ಬಿಜೆಪಿ ಭ್ರಷ್ಠಾಚಾರದ ಪಕ್ಷವಾಗಿದೆ ಎಂದು ವಿವರಿಸಿದರು. 

ಎರಡು ಬಾರಿ ತಂದೆ ಯಡಿಯೂರಪ್ಪನವರನ್‌ನ ಸಿಎಂ ಸ್ಥಾನದಲ್ಲಿ ಉಳಿಯಲು ಬಿಡದೆ ಇರುವುದು ಇದೇ ಸಂಸದರು ಮತ್ತು ಬಿಜೆಪಿ ರಾಜ್ಯಧ್ಯಕ್ಷರ ಅವ್ಯವಹಾರ ವೆಂಬುದು ಜಗಜ್ಜಾಹೀರವಾಗಿದೆ. 

ಸೆಕ್ಸ್ ಸ್ಕ್ಯಾಂಡಲ್ ಪಕ್ಷ ವಾಗಿರುವ ಬಿಜೆಪಿ ಪೋಕ್ಸೊ ಹಗರಣ, ಅತ್ಯಾಚಾರ, ಬೊಮ್ನಾಯಿ, ಸದಾನಂದವಗೌಡರು ಸ್ಟೇ ತೆಗೆದುಕೊಂಡಿರುವುದೇಕೆ? ಭಾರತೀಯ ಹತ್ಯಾಚಾರದ ಬಗ್ಗೆ ಮಾತನಾಡುವ ಬಿಜೆಪಿಯ ಈ ಎಲ್ಲಾ ನಾಯಕರು ಸ್ಟೇ ತೆಗೆದುಕೊಂಡಿರುವುದೇಕೆ? ಈಶ್ವರಪ್ಪನವರ ಮಗ ಬಿಜೆಪಿಯಲ್ಲಿದ್ದಗಲೂ ಸ್ಟೇ ತೆಗೆದುಕೊಂಡಿದ್ದಾರೆ. ಭ್ರಷ್ಠಾಚಾರದ ಬಗ್ಗೆ ಮಾತನಾಡಿರುವ ಸಂಸದರು ಮುಂದಿನ ದಿನಗಳಲ್ಲಿ ಭ್ರಷ್ಠಾಚಾರವನ್ನಾದರೂ ನಿಲ್ಲಿಸಲಿ ಎಂದು ಸಲಹೆ ನೀಡಿದರು. 

ಮುನಿರತ್ನರ ಬಗ್ಗೆ ಮಾತನಾಡುತ್ತಿಲ್ಲವೇಕೆ. ಹುಬ್ಬಳ್ಳಿಯ ಹತ್ಯೆ ನಡೆದಾಗ ರಸ್ತೆಗಿಳಿದ ಬಿಜೆಪಿ ಮುನಿರತ್ನರ ವಿಚಾರದಲ್ಲಿ ನಿಲುವೇನು ಎಂಬುದನ್ನ ಸ್ಪಷ್ಟಪಡಿಸಲಿ ಎಂದ ಅವರು ಇಡಿಯನ್ನ ದುರುಪಯೋಗ ಮಾಡಿಕೊಂಡ ನೀವು ಮಾತನಾಡುವಾಗ ಎಚ್ಚರ ವಹಿಸಲಿ ಎಂದರು.

ಈಶ್ವರಪ್ಪನವರಿಗೆ ಅಭದ್ರತೆ ಕಾಡಿದಾಗ ಬ್ರಿಗೇಡ್ ಎನ್ನುತ್ತಾರೆ. ಹಿಂದೆ ಬ್ರಿಗೇಡ್ ಮಾಡಲು ಹೋಗಿ ಯೂಟರ್ನ್ ಹೊಡೆದರು. ಹಿಂಬಾಲಕರು ಅತಂತ್ರರಾದರು. ಈಗ ಸ್ವಾಮೀಜಿಯ ಮೂಲಕ ಹೊರಟಿದ್ದಾರೆ. ಹಿಂದೆ ರಾಯಣ್ಣ ಮಾತ್ರ ಇದ್ದ ಬ್ರಿಗೇಡ್ ಚೆನ್ನಮ್ಮರನ್ನ ಸೇರಿಸಿಕೊಳ್ಳಲು ಹೋಗಿ ಕುರುಬ ಮತ್ತು ಲಿಂಗಾಯತ ಸಮುದಾಯರನ್ನ ನಡೆಸಲು ಮುಂದಾಗಿದ್ದಾರೆ. ಅವರ ಸಮಯವೂ ಮುಗಿದಿದೆ. ಬಿಜೆಪಿಯಿಂದ ಕರೆ ಬಂದಾಗ ಕೈಬಿಟ್ಟು ಹೋಗುವ ಅಪಾಯವು ಇದೆ. ರಾಜಕಾರಣದ ಸಂಘಟನೆ ಆಗಿರುವುದರಿಂದ ಸ್ವಾಮೀಜಿಗಳು ಎಚ್ಚರಿಕೆ ವಹಿಸಲಿ ಎಂದರು. 

ವೀರಶೈವ ಮಹಾಸಭಾಗೆ ಹೋಗುವ ಬಿಎಸ್ ವೈ ಮತ್ತು ಸಂಸದ ರಾಘವೇಂದ್ರ ಜನಗಣತಿ ಬಂದರೆ ನೀವು ಹಿಂದೂ ಅಂತ ಬರೆಸುತ್ತಾರೋ ಅಥವಾ ವೀರಶೈವ ಎಂದು ಬರೆಸುತ್ತೀರೋ ಎಂದು ಪ್ರಶ್ನಿಸಿದರು. ಸಂಸದರು ವೀರಶೈವ ಸಮುದಾಯದ ನಿರ್ದೇಶಕರಾಗಿ ಆಗಿದ್ದಾರೆ. ಹಾಗಾಗಿ  ವೀರಶೈವ ನಾಯಕರೆಂದು ಬಿಂಬಿಸಿಕೊಳ್ಳುವ ಮತ್ತು ಲಾಭ ಪಡೆದವರಲ್ಲಿ ಇವರು ಮೊದಲಿಗರಾಗಿದ್ದರೆ  ಹಾಗಾಗಿ ಮೊದಲು ಸ್ಪಷ್ಟಪಡಿಸಲಿ ಎಂದರು.  ನಾನು ಜಾತಿ ನಾಯಕನೂ ಅಲ್ಲ ಧರ್ಮದ ನಾಯಕರಲ್ಲ ಆದುದರಿಂದ ನನ್ನ ನಿಲುವು ಬೇರೆಯಾಗಿದೆ ಎಂದರು. 

ಭೈರತಿ ಸರೇಶ್ ಅವರು ಸಂಸದೆ ಶೋಭಾಕರದ್ಲಾಂಜೆಯನ್ನ ಮೈತ್ರಾದೇವಿಯ ಸಾವಿನ ಪ್ರಕರಣದಲ್ಲಿ ಬಂಧಿಸಬೇಕು ಎಂಬ ಪ್ರಕರಣದಲ್ಲಿ ಮಾತನಾಡಿದ ವಕ್ತಾರ ಆಯನೂರು

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Suddi Live