Girl in a jacket

ವಿಜೇಂದ್ರರ ಬಗ್ಗೆ ಅಸಮಾಧಾನವಿದ್ದರೆ ಹೈಕಮ್ಯಾಂಡ್ ಬಳಿ ಬಗೆಹರಿಸಿಕೊಳ್ಳಿ-ಡಿ.ಎಸ್ ಅರುಣ್ ಮನವಿ



ಸುದ್ದಿಲೈವ್/ಶಿವಮೊಗ್ಗ

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜೇಂದ್ರರ ಪರ ಎಂಎಲ್ ಸಿ ಡಿ‌ಎಸ್ ಅರುಣ್ ಬ್ಯಾಟ್ ಬೀಸಿದ್ದಾರೆ. ಯುವ ನಾಯಕನ ಶ್ರಮದಿಂದ ಇಂದು ಬಿಜೆಪಿ ಗಟ್ಟಿಯಾಗಿ ತಳವೂರುವಂತಾಗಿದೆ ಎಂದು ಪಕ್ಷದವರಿಗೆ ಕಿವಿ ಮಾತು ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿ.ವೈ.ವಿಜೇಂದ್ರರನ್ನ ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡದ್ದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಅಮಿತ್ ಶಾ ಹಾಗೂ ಪ್ರಧಾನಿ ಮೋದಿ ಅವರು, ಅವರ ವಿರುದ್ಧ ಅಸಮಾಧಾನವಿದ್ದರೆ ನಾಲ್ಲು ಗೋಡೆಗಳ ಮದ್ಯೆ ಬಗೆಹರಿಸಿಕೊಳ್ಳುವಂತೆ ಮನವಿ ಮಾಡಿದರು.‌

ಬಿ.ವೈ.ವಿಜೇಂದ್ರರ ವಿರುದ್ಧ ಬೆಂಗಳೂರಿನಲ್ಲಿ ಸ್ವಪಕ್ಷೀಯದವರಿಂದಲೆ ಸಭೆ ನಡೆದಿತ್ತು. ಈ ಸಭೆಯ ಹಿಂದಯೇ ಪಕ್ಷದ ಹಿರಿಯರನ್ನ ಸಮರ್ಪಕವಾಗಿ ರಾಜ್ಯಾಧ್ಯಕ್ಷರು ನಡೆಸಿಕೊಳ್ಳುತ್ತಿಲ್ಲವೆಂಬ ಆರೋಪ ಕೇಳಿಬಂದಿತ್ತು. ಈಗ ದಿಡೀರ್ ಎಂದು ಎಂಎಲ್‌ಸಿ ಮೂಲಕ ವಿಜೇಂದ್ರರ ಹಿತ ಶತೃಗಳಿಗೆ ತಾಕೀತು ಮಾಡಿಸಲಾಗಿದೆ. 

ನಾಲ್ಕು ಗೋಡೆಗಳ ಮಧ್ಯೆ ಸರಿಪಡಿಸಲು ಅವಕಾಶವಿದೆ. ಬಗೆಹರಿಸಿಕೊಳ್ಳಬೇಕು. ಯತ್ನಾಳ್ ಬಹಿರಂಗ ಮಾತನಾಡಬಾರದು ಹೈಕಮಾಂಡ್ ಜೊತೆ ಬಗೆಹರಿಸಿಕೊಳ್ಳುವಂತೆ ಮನವಿ ಮಾಡಿದರು


ಮೂಡಾ ವಿಚಾರದಲ್ಲಿ ಸಿಎಂ ರಾಜೀನಾಮೆ ನೀಡಲಿ


ಸಿದ್ದರಾಮಯ್ಯನವರ ಸರ್ಕಾರ ಬಂದ ನಂತರ ಅವಲೋಕನ ಮಾಡುವಂತಹದ್ದಾಗಿದೆ. ಬಂಡತನದಿಂದ ಸರ್ಕಾರ ಸಾಗುತ್ತಿದೆ. ಸಿದ್ದರಾಮಯ್ಯನವರಿಗೆ ಬುದ್ದಿ ಕಡಿಮೆಯಾದಂತೆ ಕಾಣಿಸುತ್ತಿದೆ. 45 ವರ್ಷದ ರಾಜಕೀಯ ಜೀವನದಲ್ಲಿ ಕಪ್ಪುಚುಕ್ಕೆ ಇಲ್ಲದ ವ್ಯಕ್ತಿ ಎಂದು ಹೇಳುಕೊಳ್ಳುತ್ತಿದ್ದ ಅವರಿಗೆ ಈಗ ಮೈ ತುಂಬ ಕಪ್ಪು ಚುಕ್ಕಿಯಾಗಿದೆ ಎಂದು ಎಂಎಲ್‌ಸಿ ಅರುಣ್ ಆಗ್ರಹಿಸಿದರು. 


ರೀಡೂ ವಾಚ್ ಹಗರಣ, ವಾಲ್ಮೀಕಿ ಹಗರಣದಲ್ಲಿ ನೇರವಾಗಿ ತಪ್ಪು ಒಪ್ಪಿಗೆ ಮಾಡಿಕೊಂಡಿದ್ದಾರೆ. ಮೂಡಾ ಹಗರಣದಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ ಎಂದು ಹೇಳಿ ತನಿಖೆ ಆಯೋಗ ರಚಿಸಿದರು.  ನಾನೇಕೆ 14 ಸೈಟುಗಳನ್ನ ಕೊಡಬೇಕು ಎಂದು ಪ್ರಶ್ನಿಸುತ್ತಿದ್ದ ಸಿದ್ದರಾಮಯ್ಯ ನಿನ್ನೆ 14 ಸೈಟುಗಳನ್ನ ಹಸ್ತಾಂತರಿಸಿದರು ಎಂದು ಆರೋಪಿಸಿದರು. 


ರಾಜ್ಯಪಾಲರ ಮೇಲಿನ ಆರೋಪಗಳು. ಹೈಕೋರ್ಟ್ ಪ್ರಾಸಿಕ್ಯೂಷನ್ ಕೊಟ್ಟಿದ್ದು ಸರಿಯಿದೆ ಎಂದು ಎತ್ತಿಹಿಡಿದಿದೆ. ನ್ಯಾಯಾಲಯದ ಆದೇಶವನ್ಬೂ ಪೊಲಿಟಿಕಲ್ ಜಡ್ಜ್ ಮೆಂಟ್ ಎಂದು ಬಣ್ಣಿಸಲಾಯಿತು. 14 ಸೈಟುಗಳನ್ನ ವಾಪಾಸ್ ಕೊಟ್ಟರೆ ಕ್ಲೀನ್ ಚೀಟ್ ಸಿಕ್ಕಲಿದೆ. ಎಂಬ ಭ್ರಮೆಗೆ ಸಿದ್ದರಾಮಯ್ಯ ಬಂದಂತೆ ಕಾಣುತ್ತಿದೆ ಎಂದರು. 


2011 ರಲ್ಲಿ ಯಡಿಯೂರಪ್ಪನವರ ಡಿನೋಟಿಫೈ ಪ್ರಕರಣದಲ್ಲಿ ಸಿದ್ದರಾಮಯ್ಯ ಅವರ ಮಾತನ್ನ ಕೇಳಬಕು. ನಂತರ ರೀಡೂ ಹಗರಣ ಬೆಳಕಿಗೆ ಬಂದ ತಕ್ಷಣ ಲೋಕಾಯುಕ್ತ ಇಲಾಖೆಯನ್ನ ದುರ್ಬಲಗೊಳಿಸಲಾಯಿತು. ಈಗ ತಮ್ಮ ವಿರುದ್ಧದ ಆರೋಪ ಬಂದಿದೆ. ನಿಷ್ಪಕ್ಷ ಪಾತ ತನಿಖೆಗೆ ಸಿಎಂ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲ್ಲ ಎನ್ನುತ್ತಾರೆ. ರಾಜೀನಾಮೆ ಕೊಟ್ಟು ತನಿಖೆಗೆ ಸಹಕರಿಸಬೇಕು ಎಂದು ತಾಕೀತು ಮಾಡಿದರು.

ಅಧಿಕಾರಿಗಳು, ಸಚಿವರು ಮತ್ತು ಮೂಡಾ ಹಗರಣದಲ್ಲಿ ಸೈಟ್ ವಂಚಿತರಿಗೆ ನ್ಯಾಯ ದೊರಕಬೇಕು. ಪಾದಯಾತ್ರೆ, ರಾಜ್ಯದ  ರಾಜ್ಯಾಧ್ಯಕ್ಷ ವಿಜೇಂದ್ರ ಬಿಜೆಪಿ ಪಕ್ಷವನ್ನ ಗಟ್ಟಿ ಮಡಬೇಕು ಎಂಬ ನಿಟ್ಟಿನಲ್ಲಿ ಪಕ್ಷದ ಚಟುವಟಿಕೆಯಿಂದ ಮಾಡುತ್ತಿದ್ದಾರೆ. ಮೂಡಾ, ವಾಲ್ಮೀಕಿ ಹಗರಣ ಬೆಳಕಿಗೆ ತಂದವರಿಗೆ ಅಭಿನಂದನೆಗಳು ಎಂದರು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
close