Girl in a jacket

ಸೂಳೆಬೈಲಿನಲ್ಲಿ ಅನ್ನಭಾಗ್ಯಕ್ಕೆ ಆಹಾಕಾರ



ಸುದ್ದಿಲೈವ್/ಶಿವಮೊಗ್ಗ

ನಗರದ ಹೊರವಲಯದಲ್ಲಿರುವ ನ್ಯಾಯಬೆಲೆ ಅಂಗಡಿಯಲ್ಲಿ ಆಹಾಕಾರ ಉಂಟಾಗಿದೆ. ಅನ್ನಭಾಗ್ಯದ ಫಲಾನುಭವಿಗಳಿಗೆ ಪ್ರತಿ ತಿಂಗಳು ನೀಡುವ ರೇಷನ್ ಗೆ ಅಡಚಣೆ ಉಂಟಾಗಿದ್ದ ಸಾರ್ವಜನಿಕರ ಆಕ್ರೋಶ ಟಿಸಿಲೊಡೆದಿದೆ. 

ಸೂಳೆಬೈಲಿನ ನ್ಯಾಯಬೆಲೆ ಅಂಗಡಿಯ ಕ್ರಮ ಸಂಖ್ಯೆ 91 ರಲ್ಲಿ ಸಾರ್ವಜನಿಕರು ರೇಷನ್ ಗಾಗಿ ಜಮಾಯಿಸಿದ್ದಾರೆ. ರೇಷನ್ ನೀಡಲು ಕಂಪ್ಯೂಟರ್ ಸಾಫ್ಟ್ ವೇರ್ ಬದಲಾಗುವುದರಿಂದ ಬೇರೆ ಸಾಫ್ಟ್ ವೇರ್ ಗೆ ಶಿಫ್ಟ್ ಆಗುತ್ತಿರುವುದರಿಂದ ಸಮಸ್ಯೆಯಾಗಿದೆ. ಬೆಳಿಗ್ಗೆ 4 ಗಂಟೆಗೆ ನ್ಯಾಯಬೆಲೆ ಅಂಗಡಿ ಬಳಿ ನಿಂತಿದ್ದ ಫಲಾನುಭವಿಗಳು ಅಂಗಡಿ ವಿರುದ್ಧವೇ ಆಕ್ರೋಶ ವ್ಯಕ್ತಪಡಿಸಿದ್ದಾರೆ. 


ಈ ತಿಂಗಳ ರೇಷನ್ ನ್ನ ಮುಂದಿನ ತಿಂಗಳು ನೀಡಲಾಗುತ್ತಿದೆ. ಪ್ರತಿದಿನ ಬೆಳಿಗ್ಗಿಂದ ಕಾದರೂ ನಾಳೆ ಎಂದು ಹೇಳಿಕಳುಹಿಸಲಾಗುತ್ತಿದೆ. ದಿನ ಇದೇ ರಗಳೆಯಾಗಿದೆ ಎಂದು ಸಾರ್ವಜನಿಕರ ಗೋಳಾಗಿದೆ. 

ಆದರೆ ಈ ಕುರಿತು ಪ್ರತಿಕ್ರಿಯೆ ನೀಡಿರುವ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಉಪನಿರ್ದೇಶಕರು ಅ. 18 ರಿಂದ ಈಸಾಫ್ಟ್ ವೇರ್ ಅಪ್ಡೇಟ್ ನಿಂದ ಸಮಸ್ಯೆ ಉಂಟಾಗಿದೆ. ನಿನ್ನೆ ಸಂಬಂಧ ಪಟ್ಟ ಸಚಿವರು ಮತ್ತು ಸಿಎಂ ಜೊತೆ ಮಾತನಾಡಲಾಗಿದೆ. ನಾಳೆ ಅಷ್ಟು ಹೊತ್ತಿಗೆ ಈ ಸಮಸ್ಯೆ ಬಗೆಹರಿಯುವ ನಿರೀಕ್ಷೆ ಇದೆ ಎಂಬ ಭರವಸೆ ನೀಡಿದ್ದಾರೆ. 



ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
close