ಸುದ್ದಿಲೈವ್/ಶಿವಮೊಗ್ಗ
ಶಿವಮೊಗ್ಗದಲ್ಲಿ ಕುಡಿಯುವ ನೀರಿನ ಬಗ್ಗೆ ಪ್ರಕಟಣೆ ಹೊರಡಿಸಿ ಟರ್ಬಿಡಿಟಿ ಹೆಚ್ಚಾಗಿರುವುದರಿಂದ ಕುದಿಸಿ ಆರಿಸಿ ಕುಡಿಯಲು ತಿಳಿಸಿರುವ ವಿಷಯ ಹಳೆಯದಾಗಿದೆ.
ಅಧಿಕಾರಿಗಳ ಈ ಹೇಳಿಕೆ ಬಗ್ಗೆ ಸಂಘ ಸಂಸ್ಥೆಗಳು ಮುಗಿಬಿದ್ದು ಅಧಿಕಾರಿಗಳ ವೈಫಲ್ಯದ ಕಾರಣ ನೀರು ಕಲುಷಿತಗೊಂಡಿದೆ ಎಂದು ಆರೋಪಿಸಿದ ಮೇಲೆ ನೀರು ಕಲುಷಿತಗೊಂಡಿಲ್ಲವೆಂದು ಸ್ಪಷ್ಟನೆ ಸಹ ನೀಡಲಾಗಿತ್ತು.
ಆದರೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಕಲುಷಿತ ನೀರಿನ ಬಗ್ಗೆ ಇಂದು ಸುದ್ದಿಗೋಷ್ಠಿಯಲ್ಲಿ ಗಮನ ಸೆಳೆದ ಮಾಧ್ಯಮಗಳಿಗೆ ಉಡಾಫೆ ಉತ್ತರ ನೀಡಿದಂತೆ ಕಂಡು ಬಂದಿದೆ. ಪಾನಕದ ರೀತಿಯಲ್ಲಿ ನೀರು ಬಂದಿದೆ. ಈ ಬಗ್ಗೆ ಅಧಿಕಾರಿಗಳ ಗಮನ ಸೆಳೆಯಲಾಗಿದೆ ಎಂದರು.
ಏನೂ ಆಗಿಲ್ಲವೆಂಬಂತೆ ಮಾತನಾಡಿದ ಸಚಿವರು ವರ್ಷಕ್ಕೆ ಕುಡಿಯುವ ನೀರು 45 ಟಿಎಂಸಿ ಬೇಕಿದೆ. ಮಳೆಯ ಸಮಸ್ಯೆಯಿಂದಾಗಿ ಕುಡಿಯುವ ನೀರು ಮಣ್ಣಿನ ಬಣ್ಣ ಬಂದಿದೆ. ಮುಂದಿನ ವರ್ಷದಿಂದ ಜ್ಯಾಕ್ ವೆಲ್ ಮೂಲಕ ಕುಡಿಯುವ ನೀರು ಸರಬರಾಜಾಗಲಿದೆ ಎಂಬ ಭರವಸೆ ನೀಡಿದರು. ಆದರೆ 18 ರಿಂದ 20 ದಿನ ಕುಡಿಯುವ ನೀರು ಕಲೂಷಿತವೆಂದು ಕುಡಿಸಿ ಜನರಿಗೆ ಆಸ್ಪತ್ರೆಯ ದಾರಿ ತೋರಿಸಿರುವ ಅಧಿಕಾರಿಗಳ ವಿರುದ್ಧ ಕ್ರಮವಿಲ್ಲದಂತೆ ಮಾತನಾಡಿರುವುದು ಮಾತ್ರ ದುರಂತವೇ ಸರಿ.