ಸುದ್ದಿಲೈವ್/ಶಿವಮೊಗ್ಗ
ಶಿವಮೊಗ್ಗದ ಜಂಬೂಸವಾರಿಯೊಂದಿಗೆ ಹೊರಡುವ ಮೆರವಣಿಗೆ ಅಂಬುಕಡಿಯುವ ಮೂಲಕ ಸಂಪನ್ನಗೊಳ್ಳಲಿದೆ. ಅನೇಕ ದಸರಾ ಕಾರ್ಯಕ್ರಮಗಳನ್ನ ಈ 9 ದಿನಗಳು ನಡೆದು ಇಂದು ಫ್ರೀಢಂ ಪಾರ್ಕ್ ನಲ್ಲಿ ಅಂಬೂ ಕಡೆಯುವ ಮೂಲಕ ಹಬ್ಬಕ್ಕೆ ಅಂತ್ಯ ಹಾಡಲಾಗುವುದು.
ಇಂದು ಮಧ್ಯಾಹ್ನ 2-30 ಕ್ಕೆ ಕೋಟೆ ಶಿವಪ್ಪ ನಾಯಕನ ಅರಮನೆಯ ಎದುರು ನಂದಿಧ್ವಜಕ್ಕೆ ಪೂಜೆ ಮಾಡುವ ಮೂಲಕ ಅಂಬಾರಿಯನ್ನ ಆನೆಯ ಮೇಲೆ ಹೋರಿಸಿ ಮೆರವಣಿಗೆ ಮಾಡಲಾಗುತ್ತದೆ. ಅಂಬಾರಿಯನ್ನ ಪ್ರತಿಭಾರಿಯಂತೆ ಸಾಗರ ಆನೆ ಹೋರಲಾಗುತ್ತದೆ.
ಪ್ರತಿ ಬಾರಿ ಸಾಗರದ ಆನೆಗೆ ಎರಡು ಹೆಣ್ಣಾನೆಗಳು ಸಾಥ್ ನೀಡುತ್ತಿದ್ದವು. ಆದರೆ ಈ ಬಾರಿ ಸಾಗರನಿಗೆ ಬಾಲಣ್ಣ ಮತ್ತು ಬಹದ್ದೂರು ಎಂಬ ಆನೆ ಸಾಥ್ ನೀಡಲಿದೆ. 650 ಕೆಜಿಯ ಬೆಳ್ಳಿಯ ಮಂಟಪ ಮತ್ತು ಬೆಳ್ಳಿ ವಿಗ್ರಹವನ್ನ ಹೊತ್ತು ಆನೆಗಳು ಸಾಗಲಿವೆ. ಹಲವಾರು ತಾಲೀಮುಗಳನ್ನ ಆನೆಗಳಿಗೆ ನೀಡಿರುವುದರಿಂದ ಈ ಬಾರಿ ಆನೆಗಳು ಮೆರವಣಿಗೆಯಲ್ಲಿ ಆರೋಗ್ಯಕರವಾಗಿ ಭಾಗಿಯಾಗುವ ನಿರೀಕ್ಷೆಯಿದೆ.
ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನ, ಎಸ್ ಪಿ ಎಂ ರಸ್ತೆ, ರಾಮಣ್ಣ ಶ್ರೇಷ್ಠಿ ಪಾರ್ಕ್, ಗಾಂಧಿ ಬಜಾರ್, ಶಿವಪ್ಪ ನಾಯಕ ವೃತ್ತ, ಬಿ.ಹೆಚ್ ರಸ್ತೆ, ಎಎ ವೃತ್ತ, ನೆಹರೂ ರಸ್ತೆ, ದುರ್ಗಿಗುಡಿ, ಜೈಲ್ ವೃತ್ತ, ಜೈಲ್ ರಸ್ತೆ ಮೂಲಕ ಫ್ರೀಡಂ ಪಾರ್ಕ್ ಗೆ ತಲುಪಲಿದೆ. ಇಲ್ಲಿ ದೇವರ 53 ದೇವರುಗಳ ಮೆರವಣಿಗೆ ಫ್ರೀಡಂ ಪಾರ್ಕ್ ತಲುಪಲಿದೆ. ಕೋಟೆ ಆಂಜನೇಯ ಸ್ವಾಮಿ ದೇವರು ಬಂದ ನಂತರ ತಹಶೀಲ್ದಾರ್ ಗಿರೀಶ್ ಅಂಬು ಕಡಿಯಲಿದ್ದಾರೆ.
ನಂತರ ರಾವಣನನ್ನ ಸುಡುವ ಮೂಲಕ ಬನ್ನಿಯನ್ನ ಪರಸ್ಪರ ಹಂಚಿಕೊಳ್ಳಲಾಗುವುದು. ಇಲ್ಲಿಗೆ ದಸರಾ ಹಬ್ಬ ಸಂಪನ್ನಗೊಳ್ಳುತ್ತದೆ.