ದಿಶಾ ಸಮಿತಿಗೆ ಗಿರೀಶ್ ಭದ್ರಾಪುರ ನೇಮಕ

 


ಸುದ್ದಿಲೈವ್/ಶಿವಮೊಗ್ಗ

ಬಿಜೆಪಿ ಮುಖಂಡ ಹಾಗೂ ಜಿಲ್ಲಾವಾಲ್ಮೀಕಿಸಮಾಜದ ಮುಖಂಡ ಗಿರೀಶ್ ಭದ್ರಾಪುರ ಅವರನ್ನು ಜಿಲ್ಲಾ ದಿಶಾ ಸಮಿತಿಗೆ ನಾಮ ನಿರ್ದೇಶನ ಮಾಡಲಾಗಿದೆ.

ಬಿಜೆಪಿಯನಿಷ್ಟಾವಂತ ಕಾರ್ಯಕರ್ತರಾಗಿರುವ ಗಿರೀಶ್ ಭದ್ರಾಪುರ ಅವರು, ಕಳೆದಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಬಿ.ವೈ. ರಾಘವೇಂದ್ರ ಅವರ ಪರವಾಗಿ ಶಿವಮೊಗ್ಗ ಗ್ರಾಮಾಂತರದಲ್ಲಿ ಬಿರುಸಿನ ಪ್ರಚಾರ ನಡಸಿ, ಆ ಭಾಗ ದಲ್ಲಿ ಬಿಜೆಪಿಗೆ ಹೆಚ್ಚಿನ ಮತಗಳು ಬರುವಂತೆ ಶ್ರಮಿಸಿದ್ದರು. 

ಬಿಜೆಪಿ ಎಸ್ಟಿ ಮೋರ್ಚಾ ರಾಜ್ಯಕಾರ್ಯಕಾರಣಿ ಸದಸ್ಯರೂ ಆಗಿರುವ ಗಿರೀಶ್ ಅವರು, ಪರಿಶಿಷ್ಟ ಸಮುದಾ ಯಕ್ಕೆ ಯಡಿಯೂರಪ್ಪ ನೇತೃತದ ಬಿಜೆಪಿ ಸರ್ಕಾರ ನೀಡಿದ ಕೊಡುಗೆಗಳನ್ನು ಕ್ರೂಢೀಕರಣ ಮಾಡಿಕೊಡುವಲ್ಲಿ ಶ್ರಮ ವಹಿಸಿದ್ದರು. ಈಗ ಸಂಸದ ಬಿ.ವೈ. ರಾಘವೇಂದ್ರರ ಶಿಫಾರಸ್ಸಿನ ಮೇರೆಗೆ ಕೇಂದ್ರ ಸರ್ಕಾರ ದಿಶಾ ಸಮಿತಿಗೆ ಗಿರೀಶ್ ಅವರನ್ನು ನೇಮಕ ಮಾಡಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close