ಕಾಸ್ಟ್ಲೀ ದೀಪಾವಳಿ...!


ಸುದ್ದಿಲೈವ್/ಶಿವಮೊಗ್ಗ

ಹಿಂದೂಗಳ ಹಬ್ಬ ಯಾವಾಗಲೂ ದುಬಾರಿ. ಪ್ರತಿ ಹಬ್ಬಕ್ಕೆ 25-35% ಗೆ ಏರಿಕೆಯಾಗುತ್ತಿದ್ದ ಹೂವುಗಳು ದೀಪಾವಳಿಗೆ 50% ಹೆಚ್ಚಿಗೆ ದರದಲ್ಲಿ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ. 

ಹಣ್ಣುಗಳಲ್ಲಿ  ಪೂಜೆ ಪುರಸ್ಕಾರಕ್ಕೆ ಬಳಸುವ ಮೂಸುಂಬೆ ಕೆಜಿಗೆ 100 ರೂ. ಸೇಬು 180 ರೂ., ಕಿತ್ತಲೆ ಹಣ್ಣು ಕೆಜಿಗೆ 100 ರೂ., ಸೀಬೆಹಣ್ಣು 180 ರೂ. ಮಿಕ್ಸ್ ಹಣ್ಣು ಕೆಜಿಗೆ 100 ರೂ.ಗೆ ಮಾರಾಟವಾಗುತ್ತಿದೆ. ಹಣ್ಣಿನಲ್ಲಿ ಬಹಳಷ್ಟು ವ್ಯತ್ಯಾಸಗಳು ಇಲ್ಲದಿದ್ದರು, ಹೂಗಳು ದುಬಾರಿಯಾಗಿದೆ. 

ಸೇವಂತಿಗೆ ಕಾಲುಕೆಜಿಗೆ 50 ರೂ., ಕೆಜಿಗೆ 180-200 ರೂ. ಚಂಡು ಹೂ ಮಾರಿಗೆ 150 ರೂ. ಸಣ್ಣಗುಲಾಬಿ ಕೆಜಿಗರ 300 ಕೆಜಿ, ಸುಗಂಧ ರಾಜ 250 ಕೆಜಿ, ದುಂಡು ಮಲ್ಲಿಗೆ 1000 ಕೆಜಿ, ಸೂಜಿ‌ಮಲ್ಲಿಗೆ 600 ರೂ. ಕಣಗಲೆ ಹೂವು ಕೆಜಿಗೆ  400 ರೂ. ಚಂಡು ಹೂ ಕೆಜಿಗೆ 60 ರೂ.ಗೆ ಮಾರಾಟವಾಗುತ್ತಿದೆ. 

ಬಹು ಜನರು ಈ ಹೂವುಗಳನ್ನ ಹಬ್ಬಕ್ಕೆ ಬಳಸುವುದರಿಂದ ಹೂವುಗಳಿಗೆ ಡಿಮ್ಯಾಂಡ್ ಹೆಚ್ಚಿಗೆಯಾಗಿದೆ. ಬಾಳೆಕಂದು ಮತ್ತು ಮಾವಿನಸೊಪ್ಪುಗಳ ಮಾರಾಟವೂ ಭರದಿಂದ ಮಾರಾಟವಾಗುತ್ತಿದೆ. ಪಟಾಕಿಗಳು ಶೇ.15 ರಿಂದ 20 ರಷ್ಟು ಕಳೆದ ವರ್ಷಕ್ಕಿಂತ ಈ ವರ್ಷಕ್ಕೆ ಹೆಚ್ಚಾಗಿದೆ.‌ ಒಟ್ಟಿನಲ್ಲಿ ದೀಪಾವಾಳಿ ಯಾವಾಗಲೂ ಕಾಸ್ಟ್ಲೀ ಎನಿಸುವಂತೆ ಈ ವರ್ಷವೂ ದುಬಾರಿ ಆಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close