ಸುದ್ದಿಲೈವ್/ಶಿವಮೊಗ್ಗ
ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದಡಿ ಜಿಲ್ಲೆಯ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ತಂಬಾಕು ಮುಕ್ತ ಯುವ ಅಭಿಯಾನ 2.0 ಪ್ರಯುಕ್ತ ಅ.22 ರಂದು ಜಿಲ್ಲೆಯಾದ್ಯಂತ ಏಕಕಾಲದಲ್ಲಿ 32 ತಂಬಾಕು ದಾಳಿ ನಡೆಸಲಾಯಿತು.
ಜಿಲ್ಲೆಯ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಏಕ ಕಾಲದಲ್ಲಿ ಕೋಟ್ಪಾ ಕಾಯ್ದೆ ಉಲ್ಲಂಘಿಸುವವರ ವಿರುದ್ದ ದಾಳಿಯನ್ನು ಹಮ್ಮಿಕೊಂಡು ಒಟ್ಟು 751 ಪ್ರಕರಣ ದಾಖಲಿಸಿ, ರೂ.50210 ದಂಡವನ್ನು ಸಂಗ್ರಹಿಸಲಾಯಿತು.