Girl in a jacket

ಸಿರಿಗೆರೆ ಫಾರೆಸ್ಟರ್ ಬಂದೂಕು ಎರಡು ತಿಂಗಳು ಹೋಗಿದ್ದೆಲ್ಲಿಗೆ?



ಸುದ್ದಿಲೈವ್/ಶಿವಮೊಗ್ಗ

ಅರಣ್ಯ ಇಲಾಖೆಯ ಅಧಿಕಾರಿಗಳ ಕೈಯಲ್ಲಿರಬೇಕಿದ್ದ ಬಂದೂಕು ಯಾರ್ ಯಾರೋ ಕೈಗಳಿಗೆ ಸೇರಿ ಕೊನೆಗೆ ಪತ್ತೆಯಾಗಿದ್ದು, ಈ ಮಾಹಿತಿಯನ್ನ ಮಾಧ್ಯಮಗಳಿಗೆ ಸ್ಪಷ್ಟ ಮಾಹಿತಿ ದೊರೆಯದಂತೆ ನೋಡಿಕೊಳ್ಳಲಾಗಿದೆ. 

ಮಾಧ್ಯಮಗಳ ಕೈಗೆ ಈ ವಿಷಯ ಸಿಕ್ಕರೆ ಇಲಾಖೆಯ ಮಾನ ಮರ್ಯಾದೆ ಮೂರಾಬಟ್ಟೆಯಾಗಲಿದೆ ಎಂಬ ಕಾರಣಕ್ಕೆ ಮಾಹಿತಿಗಳನ್ನ ಗೌಪ್ಯವಾಗಿಡಲು ಯತ್ನಿಸುತ್ತಿರುವುದಾಗಿರುವುದು ಮಾತ್ರ ಸ್ಪಷ್ಟವಾಗಿದೆ.  ಕೆಲವರ ಪ್ರಕಾರ ಬಂದೂಕು ಕಳೆದುಹೋಗಿದೆ ಎಂದು ಕೇಳಿ ಬಂದರೆ ಕೆಲವರ ಪ್ರಕಾರ ದುರ್ಬಳಕೆ ಆಗಿದೆ ಎಂಬ ಶಂಕೆಗಳು ಕೇಳಿ ಬರುತ್ತಿದೆ. 

ನಮಗೆ ಸಿಕ್ಕ ಮಾಹಿತಿ ಪ್ರಕಾರ ಅರಣ್ಯ ಇಲಾಖೆಯವರ ಬೇಜವಾಬ್ದಾರಿಯಿಂದ ಕಚೇರಿಯಲ್ಲಿದ್ದ ಬಂದೂಕು ಕಳ್ಳತನವಾಗಿ ನಕ್ಸಲ್ ಗಳ ಕೈ ಸೇರಿರುವ ಸಂಶಯನ್ನ ಕೆಲ ಸ್ಥಳೀಯರಿಂದ ವ್ಯಕ್ತಪಡಿಸಿದ್ದಾರೆ. ಸಿರಿಗೆರೆ ವಲಯದ ಆಫೀಸಲ್ಲಿ ಇದ್ದಂತಹ ಬಂದೂಕು ಎರಡು ತಿಂಗಳ ಹಿಂದೆ ಕಳುವು ಮಾಡಿರುವ ಬಗ್ಗೆ ಕೇಳಿ ಬಂದಿದೆ. 

ಆಗಿದ್ದಾದರೂ ಏನು? 

ಸಿರಿಗೆರೆಯ ಡಿಆರ್ಎಫ್ಒ ಕೈಯಲ್ಲಿದ್ದ ಬಂದೂಕನ್ನು ಕಳವಾಗಿದೆ. ನಂತರ ಎರಡು ತಿಂಗಳ ಬಳಿಕ ಈ ವಿಷಯ ಮೇಲಾಧಿಕಾರಿಗಳ ಗಮನಕ್ಕೆ ಬಂದ ನಂತರ ಹುಡುಕಾಟ ನಡೆಸಿದಾಗ ಬಂದೂಕು ಪತ್ತೆಯಾಗಿದೆ. ಈ ಬಗ್ಗೆ ಅರಣ್ಯ  ಅಧಿಕಾರಿಗಳೇ ಒಪ್ಪಿಕೊಂಡಿರುವ ಬಗ್ಗೆ ಮೂಲಗಳು ತಿಳಿಸಿವೆ. 

ಕಚೇರಿಯಲ್ಲಿಯೇ ಕೆಲಸ ಮಾಡಿಕೊಂಡು ಇದ್ದಂತಹ ಪವನ್ ಆಚಾರ್  ಜೀಪ್ ಡ್ರೈವರ್   ಬಂದೂಕನ್ನು ಕದ್ದು ಸ್ನೇಹಿತ ಸುಧೀಶ್ ಮೂಲಕ ಹಣಗೆರೆ ಅರಣ್ಯ ಇಲಾಖೆಯ ಅಧಿಕಾರಗಳಿಂದಲೇ ಮಾರಾಟ ಮಾಡಲು ಯತ್ನಿಸಿರುವ ಬಗ್ಗೆ ತಿಳಿದು ಬಂದಿದೆ. ಪವನ್ ಆಚಾರ್ ಹೊರಗುತ್ತಿಗೆ ನೌಕರ ಸೇವೆಯಿಂದ ಕಿತ್ತುಹಾಕಲಾಗಿದೆ. 

ಕುಂಸಿ ಪೊಲೀಸ್ ಠಾಣೆಯಲ್ಲಿ ಇದು ಡಿಪಿ ಆಗಿದೆ. (ಡೈರೆಕ್ಟ್ ಪಿಟಿಷನ್) ಆದರೆ ಇದುವರೆಗೂ ಎಫ್ಐಆರ್ ದಾಖಲಾಗಿಲ್ಲ. ಕದ್ದ ವ್ಯಕ್ತಿಯನ್ನ ಕರೆಯಿಸಿ ವಿಚಾರಿಸಲು ಇಲಾಖೆ ಮುಂದಾಗಿದೆ. ಹಾಗೆಯೇ ಸ್ಥಳೀಯರು ಹೇಳುವ ಪ್ರಕಾರ ಎರಡು ತಿಂಗಳುಗಳ ಕಾಲ ಈ ಬಂದೂಕು ನಕ್ಸಲ್ ಗಳ ಕೈಯಲ್ಲಿ ಇದ್ದು ಬಂದಿದೆ ಎಂಬುದು ಸ್ಥಳೀಯರ ವಾದ, ಆದರೆ ಯಾವ ನಕ್ಸಲರು ಎಂಬುದರ ಬಗ್ಗೆ ಸ್ಪಷ್ಟನೆ ಇಲ್ಲವಾಗಿದೆ. 

ಇಷ್ಟೆಲ್ಲಾ ಆಗಿದ್ದರು ಅರಣ್ಯ ಇಲಾಖೆಯ ಅಧಿಕಾರಿಗಳು ಕಣ್ಣು ಮುಚ್ಚಿ ಕೂತಿರುವುದು ಅನುಮಾನಗಳಿಗೆ ಎಡೆ ಮಾಡಿದೆ. ಅರಣ್ಯ ಇಲಾಖೆಯವರು ಒಂದು ವಾರದ ಹಿಂದೆನೇ ಕುಂಸಿ ಪೊಲೀಸ್ ಠಾಣೆಗೆ ದೂರು ನೀಡಿ ಅರೊಪಿತನ ಬೆಂಬಲಕ್ಕೆ ನಿಂತಿರುವ ಅನುಮಾನಗಳು ವ್ಯಕ್ತವಾಗಿದೆ. ಕದ್ದುಮುಚ್ಚಿ ಸಾರ್ವಜನಿಕರ ಮಾಹಿತಿಗೆ ಬಾರದಂತೆ ಒಳಸೆಳೆತವಾದರೂ ಎಂಬುದು ಬೆಳಕಿಗೆ ಬರಬೇಕಿದೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು