Girl in a jacket

ಕುತೂಹಲ ಮೂಡಿಸಿದ ದಶಗ್ರಂಥ ಪಾರಾಯಣ ಮತ್ತು ಶೋಭಯಾತ್ರೆ ಕಾರ್ಯಕ್ರಮ

ಸುದ್ದಿಲೈವ್/ಶಿವಮೊಗ್ಗ

ಕೂಡ್ಲಿ ಮಠದಲ್ಲಿ ನಡೆಯುತ್ತಿರುವ ವಿಷಯಗಳು ಮಾತ್ರ ಸಾರ್ವಜನಿಕರಿಗೆ ಅರಗಿಸಿಕೊಳ್ಳುವುದೇ ಕಷ್ಟ ಎನ್ನುವಂತಾಗಿದೆ. ಪ್ರತಿಬಾರಿಯೂ ಗೊಂದಲದ ವಿಷಯಗಳೇ ಮುಂದುವರೆಯುತ್ತಿದೆ. ಈ ಬಾರಿ ದಶಗ್ರಂಥ ಪಾರಾಯಾಣದ ಶೋಭಯಾತ್ರೆಯಲ್ಲೂ ಗೊಂದಲ ಮುಂದುವರೆದಿದೆ. 

ದಶಗ್ರಂಥ ಘನಪಾಠಿ ಗೌರವ ಸಮರ್ಪಣಾ ಸಮಿತಿಯ ವತಿಯಿಂದ ಕಂಠಸ್ಥ ಹಾಗೂ ಏಕಾಕೀ ದಶಗ್ರಂಥ ಸಹಿತ ಸಂಪುರ್ಣ ಋಗ್ವೇದ ಘನ ಪಾರಾಯಣ ಸಮಾರೋಪ ಸಮಾರಂಭ ಹಾಗೂ ಶೋಭಯಾತ್ರೆ ಕಾರ್ಯಕ್ರಮವು ಅ.19 ರಂದು ನಡೆಯಲಿದೆ ಎಂದು ಸಮಿತಿ ಸುದ್ದಿಗೋಷ್ಠಿ ನಡೆಸಿದರೆ, ಕೂಡಲಿ ಶಂಕರಾಚಾರ್ಯ ಮಹಾಸಂಸ್ಥಾನದ ಪೀಠಾಧಿಪತಿಗಳಾದ ಶಂಕರಾಚಾರ್ಯ ವಿದ್ಯಾಭಿನವ ವಿದ್ಯಾರಣ್ಯ ಭಾರತಿ ಸ್ವಾಮಿಗಳು ಕಾರ್ಯಕ್ರಮಕ್ಕೂ ಮಠಕ್ಕೂ ಸಂಬಂಧವಿಲ್ಲ ಎಂದಿದ್ದಾರೆ. 

ಇಂದು ಸುದ್ದಿಗೋಷ್ಠಿ ನಡೆಸಿದ ಸಮಿತಿಯ ನಟರಾಜ ಭಾಗವಾತ್, ಈ ಮೊದಲು ಕಾಶಿ ಮತ್ತು ಪೂನದಲ್ಲಿ ಈ ದಶಗ್ರಂಥ ಪಾರಾಯಣ ನಡೆದಿತ್ತು. ಈಗ ಶಿವಮೊಗ್ಗದಲ್ಲಿ ನಡೆಯಲಿದೆ. ಬ್ರಾಹ್ಮಣ, ಶಿಕ್ಷ ವ್ಯಾಕರಣ, ಕಲ್ಪ, ಪ್ರತಿಶಾಕ್ಯ ಸೇರಿದಂತೆ 10 ಅಂಶಗಳನ್ನ ಪಾರಾಯಣ ಮಾಡಲಾಗುತ್ತಿದೆ ಎಂದಿದ್ದಾರೆ. 

ವೇ.ಬ್ರ. ಚಂದ್ರಮೌಳಿ ಘನಪಾಠಿಗಳು ದಿನಾ ಕೂಡ್ಲಿ ಮಠದಲ್ಲಿ ಅಭ್ಯಾಸ ನಡೆಸುತ್ತಿದ್ದಾರೆ. ಇದನ್ನ ಗಮನಿಸಲು ಇಬ್ಬರು ವೀಕ್ಷರನ್ನ ನೇಮಿಸಲಾಗಿದೆ. ಗುರುಕುಲದಲ್ಲಿ ವ್ಯವಸ್ಥೆ ಇದ್ದಾಗ ಈ ವ್ಯವಸ್ಥೆ  ಇತ್ತು.ಈಗ ವೇದಗಳನ್ನ ಕಲಿಯುವುದು ಕಷ್ಟವಾಗಿದೆ ಮತ್ತು ಒಂದು ಜಾತಿಗೆ ಸೀಮಿತವಾಗಿದೆ. ವೇದ ಪಾರಾಯಣವು ಜ್ಞಾಪಕ ಶಕ್ತಿ ಹೆಚ್ಚಿಸಲಿದೆ. 50-60 ಸಾವಿರ ಮಂತ್ರಗಳನ್ನ ನೆನಪಿನಲ್ಲಿಡುವುದು ಈ ಪಾರಾರಯಣದಲ್ಲಿ ಮುಖ್ಯವಾಗಿದೆ ಎಂದರು. 

ಆಂಧ್ರ, ಮಹರಾಷ್ಟ್ರಗಳಲ್ಲಿ ಇದು ಹೆಚ್ಚು ನಡೆಯುತ್ತದೆ. ಘನಪಾಠಿಗಳು ತಮಿಳು ನಾಡಿನ ಶ್ರೀರಂಗಂನವರಾಗಿದ್ದಾರೆ, ಅ.19 ರಂದು ಕೋರ್ಪಲಯ್ಯನ ದೇವಸ್ಥಾನದಿಂದ ಶೋಭಾಯಾತ್ರೆ ನಡೆಯಲಿದ್ದು ಈ ಯಾತ್ರೆಯಲ್ಲಿ ಚಂದ್ರಮೌಳಿ ಘನಪಾಟಿಯನ್ನ ಮೆರವಣಿಗೆಯ ಮೂಲಕ ಕರೆತರಲಾಗುವುದು. ಕೋರ್ಪಲಯ್ಯನ ಛತ್ರದಿಂದ ಹೊರಟ ಶೋಭಾಯಾತ್ರೆ ಗಾಯಿತ್ರಿ ಮಾಂಗಲ್ಯ ಮಂದಿರಕ್ಕೆ ತಲುಪಲಿದೆ ಎಂದು ವಿವರಿಸಿದರು. 

ಪೀಠಾಧಿಪತಿಗಳ ಆಕ್ಷೇಪಣೆ

ಕೂಡಲಿ ಶಂಕರಾಚಾರ್ಯ ಮಹಾಸಂಸ್ಥಾನದ ಪೀಠಾಧಿಪತಿಗಳಾದ ಶಂಕರಾಚಾರ್ಯ ವಿದ್ಯಾಭಿನವ ವಿದ್ಯಾರಣ್ಯ ಭಾರತಿ ಸ್ವಾಮಿಗಳು ಈ ದಶಗ್ರಂಥ ಪಾರಾಯಣ ಮತ್ತು ಶೋಭಾಯಾತ್ರೆಗೆ ಆಕ್ಷೇಪಣೆ ಎತ್ತಿದ್ದಾರೆ. ತಮ್ಮ ಗಮನಕ್ಕೆ ತಾರದೆ ಈ ಕಾರ್ಯಕ್ರಮ ನಡೆಯುತ್ತಿದ್ದು, ಮಠಕ್ಕೂ ಮತ್ತು ಕಾರ್ಯಕ್ರಮಕ್ಕೆ ಯಾವುದೇ ಸಂಬಂಧವಿಲ್ಲವೆಂದು ಶ್ರೀಗಳು ಪತ್ರಿಕಾ ಪ್ರಕಟಣೆ ಹೊರಡಿಸಿರುವುದು ಅಚ್ಚರಿ ಮೂಡಿಸಿದೆ. 

ಪೀಠಾಧಿಪತಿಗಳ ಆಕ್ಷಪಣೆಯ ನಡುವೆಯೂ ಕಿರಿ ಸ್ವಾಮಿಗಳ ದಿವ್ಯ ಸಾನಿಧ್ಯ ವಹಿಸಿರುವುದು ಅಚ್ಚರಿಮೂಡಿಸಿದೆ. 

ಸುದ್ದಿಗೋಷ್ಠಿ ನಡೆದ ವೇಳೆ ಮಾಜಿ ಡಿಸಿಎಂ ಈಶ್ವರಪ್ಪ, ಶಾಸಕ ಚೆನ್ನಬಸಪ್ಪ, ವಿಹೆಚ್ ಪಿಯ ವಾಸುದೇವ, ಎಂಕೆ ಸುರೇಶ್ ಕುಮಾರ್, ಬ್ರಾ.ಮಹಾಸಭಾ ರಾಜೇಶ್ ಶಾಸ್ತ್ರಿ, ಋಷಿಕೇಶ್ ಪೈ, ಸುಧೀಂದ್ರ ಕಟ್ಟೆ, ನಾಗೇಶ್ ಮೋಹನ್, ಮಹೀಪತಿ ಜೋಷಿ ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು