ಸುದ್ದಿಲೈವ್/ಶಿವಮೊಗ್ಗ
ಶಿವಮೊಗ್ಗ ನಗರದ ನಂಜಪ್ಪ ಲೇಔಟ್ ನ ಬಳಿಯಿರುವ ಮಾಲ್ ಗೆ ಹೋಗಲು ರಸ್ತೆ ಪಕ್ಕದಲ್ಲಿ ನಿಲ್ಲಿಸಿದ್ದ ಕಾರಿಗೆ ಒಂದೇ ಬೈಕ್ ನಲ್ಲಿ ಬಂದ ಮೂವರು ಡಿಕ್ಕಿ ಹೊಡೆದು ಕಿರಿಕ್ ತೆಗೆದಿರುವ ಘಟನೆ ಪೊಲೀಸ್ ಠಾಣೆಯಲ್ಲಿ ದೂರಾಗಿ ದಾಖಲಾಗಿದೆ.
ನಂಜಪ್ಪ ಲೇಔಟ್ ನ ಪ್ರಿಯಾಂಕ ಬಡಾವಣೆಯ ಬಳಿ ಇಂಜಿನಿಯರ್ ಒಬ್ಬರು ಮಾಲ್ ಗೆ ಹೋಗಿ ವಸ್ತುಗಳ ಖರೀದಿ ಮಾಡಿಕೊಂಡು ಕೆಎ 14 ಎಂಎ 4737 ಕ್ರಮ ಸಂಖ್ಯೆಯ ಕಾರಿನ ಬಳಿ ಬಂದಾಗ ತ್ರಿಬ್ಬಲ್ ರೈಡಿಂಗ್ ನಲ್ಲಿ ಬಂದ ಯುವಕರು ನಿಂತ ಕಾರಿಗೆ ಡಿಕ್ಕಿ ಹೊಡೆದು ಮಾಲೀಕರಿಗೆ ಕಣ್ಣು ಕಾಣೊಲ್ವಾ ಎಂದು ಕಿರಿಕ್ ತೆಗೆದಿದ್ದಾರೆ.
ನಂತರ ಈ ಗಲಾಟೆಯಲ್ಲಿ ಮೂವರು ಸೇರಿ ಮಾಲೀಕನ ಮರ್ಮಾಂಗ, ಎದೆ ಹೊಟ್ಟೆಭಾಗಕ್ಕೆ ಒದ್ದು ಕುತ್ತಿಗೆಗೆ ಕೈಹಾಕಿ ಕೊಲೆಯತ್ನ ನಡೆಸಿದ್ದಾರೆ ಎಂದು ದೂರಲಾಗಿದೆ. ಸ್ಥಳೀಯರ ಮತ್ತು ಸ್ನೇಹಿತರ ಸಹಾಯದಿಂದ ಜಗಳ ಬಿಡಿಸಿ ಇಂಜಿನಿಯರ್ ಅವರನ್ನ ಮೆಗ್ಗಾನ್‌ಗೆ ದಾಖಲಿಸಲಾಗಿದೆ.
ಬೈಕ್ ನಲ್ಲಿ ಬಂದು ಕಿರಿಕ್ ತೆಗೆದವರನ್ನ ಅಭಿಷೇಕ್, ನಂದನ್ ಎಂದು ಗುರುತಿಸಲಾಗಿದ್ದು, ಮತ್ತೋರ್ವನ ಬಗ್ಗೆ ಮಾಹಿತಿ ತಿಳಿದು ಬರಬೇಕಿದೆ. ಗಾಂಜಾ ನಶೆಯಲ್ಲಿ ಮೂವರು ಯುವಕರು ತಾವಾಗಿಯೇ ಬಂದು ಕಾರಿಗೆ ಡಿಕ್ಕಿಹೊಡೆದು ಹಾನಿ ಉಂಟು ಮಾಡಿರುವುದಾಗಿ ತುಂಗ ನಗರದಲ್ಲಿ ದೂರು ದಾಖಲಾಗಿದೆ.