ಸುದ್ದಿಲೈವ್/ಶಿವಮೊಗ್ಗ
ತಂತ್ರಜ್ಞಾನದ ಮೂಲಕ ರೈತ ಆಧುನಿಕ ಕೃಷಿಗಳನ್ನ ಅಳವಡಿಸಿಕೊಳ್ಳಬೇಕೆಂದು ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದರು.
ನಗರದ ನವುಲೆ ಕೃಷಿ ವಿಶ್ವವಿದ್ಯಾಲಯದಲ್ಲಿ ಕೃಷಿ ಮೇಳದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು, ಭತ್ತದ ಕೃಷಿ ನಿಂತಿದೆ. ಹಾಳುಬೀಡುವ ಪರಿಸ್ಥಿತಿ ಇದೆ. ಅಡಿಕೆ ತೋಟಕ್ಕೆ ಬದಲಾಗಿದ್ದಾರೆ. ಮುಂದಿನದಿನಗಳಲ್ಲಿ ಊಟದ ಸಮಸ್ಯೆ ಕಂಡುಬರುತ್ತದೆ. 11 ಲಕ್ಷ ಹೆಕ್ಟಾರ್ ನಲ್ಲಿ ಅಡಿಜೆ ಬೆಳೆಯಲಸಗುತ್ತಿದೆ. ಭತ್ತದ ನಾಡಾಗಿದ್ದ ಭದ್ರಾವತಿಯಲ್ಲಿ ಅಡಿಕೆಗೆ ಶಿಫ್ಟ್ ಆಗಿದ್ದಾರೆ ಎಂದರು.
ರೈತ ಆತ್ಮಹತ್ಯೆ ಮಾಡಿಕೊಳ್ಳಲು ಬಿಡಬಾರದು. ಯಾವುದೇ ಸರ್ಕಾರ ಬಂದರೂ ರೈತರ ಪರವಾಗಿರಬೇಕು. ಸರ್ಕಾರಗಳು ರೈತನನ್ನ ಬಿಟ್ಟರೆ ಹಾಳಾಗುತ್ತದೆ. ಬಡ್ಡಿರಹಿತ ಸಾಲ ಸಿಗಬೇಕು. ಕೃಷಿಕರು ಮಾದರಿ ಪದ್ಧತಿಯಾಗ ಬೇಕು. ಕೃಷಿ ಬಿಟ್ಟು ಐಟಿ ಬಿಟಿಯವರು ಒಂದೊಂದು ಎಕರೆಯಲ್ಲಿ ಮಾದರಿಯಾಗಿ ಬರುತ್ತಿದ್ದಾರೆ. ಸಾಂಪ್ರದಾಯಕ ಕೃಷಿಕರು ಅವರನ್ನ ಹಿಂಬಾಲಿಸಬೇಕು.
ವಿಜ್ಞಾನಿ ಗಳು ಎಲೆಚುಕ್ಕಿ ರೋಗಕ್ಕೆ ತಡೆಯದಿದ್ದರೆ ರೈತ ಸಂಕಷ್ಟಕ್ಕೆ ಸಿಲುಕಲಿದ್ದಾನೆ. ಅಡಿಕೆ ಬೆಳೆಯುವ ಬಗ್ಗೆ ನಮ್ಮ ವಿರೋಧವಿಲ್ಲ ಕಲಬೆರಕೆ ಮಾಡುವರ ವಿರುದ್ಧ ನಾವು ಇರುವುದಾಗಿ ಹೇಳಿದರು. ಭಾರತೀಯ ರೈತರು ಪ್ರಗತಿಪರರಾಗಬೇಕು ಎಂದರು. ರೈತರ ಧ್ವನಿಯಾಗಬೇಕು. ಜೀವನದ ಗುರಿ ಹೊಂದಿ ರೈತ ಸಾಗಬೇಕು. ಆತ್ಮಹತ್ಯೆಯ ದಾರಿ ಸರಿಯಲ್ಲವೆಂದಿದ್ದಾರೆ.
ಮಲೆನಾಡ ಕೃಷಿ ಸಮ್ಮೇಳನವನ್ನ ಕೃಷಿ ವಿವಿ ಕುಲಪತಿಗಳಿಗೆ ನಡೆಸಲು ಶಾಸಕರು ಸಲಹೆ ನೀಡಿದ್ದಾರೆ. ಕೃಷಿಕರು ಒಳ್ಳೊಳ್ಳೆ ಪ್ರಶಸ್ತಿ ಪಡೆಯಬೇಕು.ಅಡಿಕೆಯಿಂದ ಭತ್ತಕ್ಕೆ ಹೊಡೆತವಾಗಿದೆ. ಭತ್ತದ ತಳಿಯಲ್ಲೂ ಒಳ್ಳೆ ಇಳುವರಿ ಇದೆ ಎಂದರು.
ನಂತರ ಮಾತನಾಡಿದ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ, ಸ್ವಾತಂತ್ರ್ಯ ಬಂದಾಗ 33 ಕೋಟಿ ಜನಸಂಖ್ಯೆ ಇತ್ತು. ಆಹಾರಕ್ಕೆ ಆಹಾಕಾರವಿತ್ತು. ಜನಸಂಖ್ಯೆಗೆ ತಕ್ಕ ಆಹಾರವಿರಲಿಲ್ಲ. 140 ಕೋಟಿ ಜನಸಂಖ್ಯೆ ಇದೆ. ಇದರ ಹಿಂದೆ ಇರುವುದು ಸಂಶೋಧನಾ ಕೃಷಿ ಅಳವಡಿಜೆಯಿಂದ ಆಹಾರದಲ್ಲಿ ಸ್ವಾವಲಂಭಿಯಾಗಿದ್ದೇವೆ.
ಹಾಲಿನ ಉತ್ಪಾದನೆಯಲ್ಲಿ ಪ್ರಮುಖರಾಗಿದ್ದೇವೆ. ಉದ್ದಿಮೆಗಳಿಗೆ ಕಚ್ಚಾವಸ್ತುಗಳನ್ನ ನೀಡಲಾಗಿದೆ. ವಿವಿಯಲ್ಲಿ ಸಂಶೋಧನ ಮಾಡಲಾಗುತ್ತಿದೆ. ವಿವಿಯ ಸಂಶೋಧನೆಯಲ್ಲಿ ತಜ್ಞರ ನೇಮಕ, ಅನುದಾನ ನೀಡಲಾಗುತ್ತಿಲ್ಲ. ಹೆಚ್ಚಿನ ಆಧ್ಯತೆ ನೀಡಬೇಕಕಿದೆ. ಪ್ರೊಫೆಸರ್ ಗಳಿಲ್ಲ. ಲ್ಯಾಬರೇಟರ್ ಗೆ ಬೇಕಾದ ವಸ್ತುಗಳ ಖರೀದಿಗೆ ಹಣವಿಲ್ಲ. ಇವುಗಳ ಬಗ್ಗೆ ಸರ್ಕಾರ ಗಮನ ಹರಿಸಲುಕೋರಿದರು.
ಹೈಬ್ರಿಡ್ ತಳಿಯಿಂದ ಅನಾರೋಗ್ಯ ಹೆಚ್ಚಾಗಿದೆ. ವಿಷಮುಕ್ತವಾಗಬೇಕು ಎಂಬುದು ಇಂದಿನ ಸವಾಲಾಗಿದೆ. ಗೊಬ್ವರದ ಕಾರ್ಖಾನೆ ಕೊಟ್ಟಿಗೆಯಾಗಿತ್ತು. ಜಾನುವಾರುಗಳ ಇಲ್ಲದ ಕಾರಣ ಗೊಬ್ಬರವಿಲ್ಲವಾಗಿದೆ. ಇದರಿಂದ ವಾಪಾಸಾಗಬೇಕುದೆ ಸಾವಯವ ಕೃಷಿ ಇಂದು ಅಳವಡಿಕೆ ಮಾಡಿಕೊಳ್ಳಬೇಕಿದೆ. ಇದನ್ನ ಕೃಷಿ ವಿವಿಗಳು ಸವಾಲಾಗಿ ಸ್ವೀಕರಿಸಬೇಕಿದೆ. ಸಾವಯವ ಕೃಷಿಗೆ ಒತ್ತು ನೀಡಬೇಕಿದೆ ಎಂದರು.
ಮಣ್ಣಿನ ಸತ್ವ ಕಳೆದುಕೊಂಡಿದೆ. ಮಣ್ಣು ಸತ್ತಿದೆ. ಮಣ್ಣು ಸತ್ತರೆ ರೈತ ಸತ್ತಂಗೆ. ಸಾವಯವ ಕೃಷಿಯಲ್ಲಿ ಮಣ್ಣಿನ ಫಲವತ್ತತೆ ಹೆಚ್ಚಿಸಬೇಕಿದೆ. ಕೋವಿಡ್ ರೋಗ ಮನುಷ್ಯನಿಗೆ ಪಾಠಕಲಿಸಿದೆ ಎಂದ ಅವರು ಮೋದಿ ರೈತರ ಖಾತೆಗೆ 18 ನೇ ಕಂತಿನ ಹಣ ಹಾಕಿದ್ದಾರೆ.
ಸಮಗ್ರ ಕೃಷಿ ಪದ್ಧತಿ ಅನುಸರಿಸಿದ 15 ಜನ ಕೃಷಿಕರನ್ನ ಸನ್ಮಾನಿಸಲಾಯಿತು. ಶಾಸಕ ಆರಗ ಜ್ಞಾನೇಂದ್ರ ಅವರಿಂದ ಬೇಸಾಯ ಕೃಷಿಗಳ ಪುಸ್ತಕ ಬಿಡುಗಡೆಗೊಳಿಸಲಾಯಿತು. ಮೋದಿ ಸರ್ಕಾರ ಫಸಲಿಗೆ ವಿಮೆ ನೀಡುತ್ತಿದೆ. ಮಳೆ ಮಾಪಕಗಳು ಸರಿ ಇದ್ದರೆ ವಿಮಾ ಕಂತುಗಳು ಸರಿಯಿರಬೇಕಿದೆ. ಅದರ ದುರಸ್ಥಿಯಾಗಬೇಕಿದೆ ಎಂದರು.