ಸುದ್ದಿಲೈವ್/ಶಿವಮೊಗ್ಗ
ಭದ್ರ ಹುಲಿ ಸಂರಕ್ಷಣ ಪ್ರದೇಶ ಘೋಷಣೆಯಾಗಿ 25 ವರ್ಷ ಕಳೆದಿದ್ದು ಅದರ ಹಿನ್ಬಲೆಯಲ್ಲಿ ರಜತ ಮಹೋತ್ಸವ ಆಚರಣೆ ಮಾಡಲಾಗುತ್ತಿದೆ. 1000 ಸ್ಕ್ಯಾರ್ ಕಿಲೋಮೀಟರ್ ವಿಸ್ತೀರ್ಣದ ಅಭಯಾರಣ್ಯ ಇದಾಗಿದೆ. ಇಲ್ಲಿ ವನ್ಯ ಜೀವಿ ಸಂಪತ್ತು ಇದೆ. ಕರ್ನಾಟಕ 7ನೇ ಹಾಟ್ ಸ್ಪಾಟ್, ಆಗಿದೆ. ಇಲ್ಲಿ ವನ್ಯಜೀವಿ ಸಂರಕ್ಷಣೆಯೂ ಆಗಬೇಕಿದೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಸೂಚಿಸಿದರು.
ಶಿವಮೊಗ್ಗದ ಶಂಕರಘಟ್ಟದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿ, ಹಂತವಾಗಿ ಸಂರಕ್ಷಣೆ ಮಾಡಲಾಗುತ್ತಿದೆ. ಮಲೆನಾಟಿನಲ್ಲಿ ಒಕ್ಕಲೆಬ್ಬಿಸುವ ಕೆಲಸ ಭರದಿಂದ ನಡೆದಿದೆ. ಈಗಾಗಲೇ ಇಲಾಖೆಯ ಅಧಿಕಾರಿಗಳಿಗೆ ಗಮನಕ್ಕೆತರಲಾಗಿದೆ 3 ಎಕರೆ ಒಳಗಿನ ಜಮೀನು ಉಳ್ಳವರನ್ನ ಒಕ್ಕಲೆಬ್ಬಿಸದಂತೆ ಸೂಚಿಸಲಾಗಿದೆ.
ನ್ಯಾಯಾಲಯದಲ್ಲಿರುವ ಪ್ರಕರಣಗಳನ್ನ ಒಕ್ಕಲೆಬ್ಬಿಸದಂತೆ ಹಾಗೂ 2015ರ ಒಳಗೆ ಅರ್ಜಿ ಹಾಕಿದವನ್ನೂ ಒಕ್ಕಲೆಬ್ಬಿಸದಂತೆ ಸೂಚಿಸಲಾಗಿದೆ. 2015 ರ ನಂತರ ಒತ್ತುವರಿ ಹೆಚ್ಚಾಗಿದೆ. ಉಪಗೃಹದ ಚಿತ್ರಣ ಬಂದಿದೆ. ಉಪಗೃಹ ಚಿತ್ರಣದಲ್ಲಿ ಒತ್ತುವರಿ ಕಂಡು ಬಂದವರಿಗೆ ಒಕ್ಕಲೆಬ್ಬಿಸಲಾಗುವುದು ಎಂದರು
ಕೇಂದ್ರ ಸಚಿವ ಕುಮಾರ ಸ್ವಾಮಿ ವಿರುದ್ಧ ಎಫ್ಐಆರ್ ದಾಖಲಾಗಿದೆ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕಾನೂನು ತನ್ನ ಕೆಲಸ ಮಾಡುತ್ತಿದೆ. ಯಾರೂ ಕಾನೂನಿಲ್ಲಿ ದೊಡ್ಡವರಿಲ್ಲ. ಅದರಲ್ಲಿ ದೊಡ್ಡ ವ್ಯಾಖ್ಯಾನವಿಲ್ಲ ಎಂದಿದ್ದಾರೆ.
ವನ್ಯ ಜೀವಿ ವಿಭಾಗದಲ್ಲಿ ವಾರ್ಡನ್ ಗಳ ನೇಮಕಾತಿ ಆಗಿಲ್ಲ. ಮೂರು ವರ್ಷಗಳಿಂದ ನೇಮಕಾತಿ ಆಗಿಲ್ಲ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಸಚಿವರು ವೈಲ್ಡ್ ಲೈಫ್ ಮಂಡಳಿ ಸದಸ್ಯರಿಗೆ ನೇಮಕಾತಿ ಮಾಡಲಾಗಿದೆ. ಯಾರಿಗೆ ವನ್ಯ ಜೀವಿ ಅರಣ್ಯದಲ್ಲಿ ನಿರ್ಬಂಧಿಸಿಲ್ಲ. ಮುಂದಿನ ದಿನಗಳಲ್ಲಿ ನೇಮಕಾತಿ ಮಾಡಿಕೊಳ್ಳಲಾಗುವುದು ಎಂದರು.
ದನೇಶ್ ಗುಂಡೂರಾವ್ ಸಾವರ್ಕರ್ ಅವರುಮಾಙಸಸ್ವೀಕರಿಸುತ್ತಿದ್ದರು ಎಂಬ ಹೇಳಿಕೆ ವಿವಾದವನ್ನಹುಟ್ಟು ಹಾಕಿವೆಎಂಬ ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದ ಸಚಿವರು ಅನಾವಶ್ಯಕ ಪ್ರಶ್ನೆಗೆ ಉತ್ತರಿಸುವುದಿಲ್ಲ ಎಂದರು.
ಇದನ್ನೂ ಓದಿ-https://www.suddilive.in/2024/10/blog-post_33.html