ಭದ್ರಜಲಾಶಯದ ಬಫರ್ ಜೋನ್ ನಲ್ಲಿ ಕಟ್ಟಡ ಮತ್ತು ವಸತಿ ನಿರ್ಮಾಣ-ಡಿಕೆಶಿಗೆ ರೈತ ಸಂಘ ಖಡಕ್ ಎಚ್ಚರಿಕೆ


ಸುದ್ದಿಲೈವ್/ಶಿವಮೊಗ್ಗ

4½ ಲಕ್ಷ ಜಮೀನಿಗೆ ನೀರು ಒದಗಿಸುವ  ಭದ್ರ ಜಲಾಶಯಕ್ಕೆ ಅಪಾಯವಾಗುವಂತೆ ಜಲಜೀವನ್ ಮಿಷನ್ ಕಟ್ಟಡ ಕಟ್ಟುತ್ತಿರುವುದಕ್ಕೆ ರೈತ ಸಂಘದ ಮುಖ್ಯಸ್ಥ ಕೆ.ಟಿ.ಗಂಗಾಧರ್ ಆತಂಕ ವ್ಯಕ್ತಪಡಿಸಿದರು. 

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಲಾಶಯದಿಂದ 7½ ಟಿಎಂಸಿ ನೀರನ್ನ ಬಯಲು ಸೀಮೆಯ ಭಾಗವಾದ ತರೀಕೆರೆ ಮತ್ತು ಹೊಸದುರ್ಗಕ್ಕೆ ಜಲಜೀವನ್ ಮಿಷನ್ ಮೂಲಕ ಒದಗಿಸಲಾಗುತ್ತದೆ ಎಂದರು.

ತರೀಕೆರೆ ಗ್ರಾಮಾಂತರ ಭಾಗ ಹೊಸದುರ್ಗಕ್ಕೆ ಭದ್ರಜಲಾಶಯದ ಬಫರ್ ಜೋನ್ ಒಳಗೆ ಯಾವುದೇ ಕಟ್ಟಡ ಮತ್ತು ನಿವಾಸಗಳನ್ನ ನಿಷೇಧಿಸಲಾಗಿದೆ. ಭದ್ರತಾ ವ್ಯವಸ್ಥೆಗೆ ಧಕ್ಕೆ ಉಂಟಾಗುವಂತೆ ಡ್ಯಾಂ ನ ಪಕ್ಕದಲ್ಲಿ ಜಲಜೀವನ್ ಮಿಷನ್ ಕಟ್ಟಡಕ್ಕೆ ನೀಡಲಾಗಿದೆ ಎಂದು ದೂಷಿಸದರು‌.

ಈ ಕಟ್ಟಡ ನಿರ್ಮಾಣಕ್ಕೆ ಸಿಡಬ್ಲುಸಿ ಅನುಮತಿ ಪಡೆದಿಲ್ಲ. ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿಗಳಿಗೆ ಕಟ್ಟಡ ನಿರ್ಮಾಣದ ಮಾಹಿತಿ ಇಲ್ಲ. ಡ್ಯಾಂ ಪಕ್ಷದಲ್ಲಿ16 ಎಕರೆಯಲ್ಲಿ ಕಟ್ಟಡ  ನಿರ್ಮಿಸಲಾಗುತ್ತದೆ. ಜಲಾಶಯ 71 ಟಿಎಂಸಿ ಲೋಡನ್ನ‌ಬೆಟ್ಟಗಳು ತಡೆದಿರುತ್ತದೆ. ಬೆಟ್ಟದ ಕೆಳಗೆ ಕಟ್ಟಡ ನಿರ್ಮಿಸುತ್ತಿರುವುದು ಅಪರಾಧವಾಗಿದೆ. ಜಲಾಶಯಕ್ಕೆ ಅಪಾಯವೂ ಆಗಲಿದೆ. 

ಹಾಗಾಗಿ ತಕ್ಷಣವೇ ಜಲಜೀವನ್ ಶುದ್ಧೀಕರಣ ಘಟಕದ ಕಟ್ಟಡ ನಿರ್ಮಾಣ ಸ್ಥಗಿತಗೊಳಿಸಬೇಕು. ಇಲ್ಲಿ ವಸತಿ ಗೃಹಗಳನ್ನ ನಿರ್ಮಿಸಲಾಗಿದೆ. ಅಪ್ಪರ್ ಭದ್ರ ಜಲಾಶಯದ ನೀರು ಒದಗಿಸುತ್ತಿರುವುದು ಈ ಜಲಾಶಯದಿಂದಲೇ ಆಗಿದೆ. ಇದನ್ನ ಸ್ಥಗಿತಗೊಳಿಸದಿದ್ದರೆ ರೈತ ಸಂಘ ಪ್ರತಿಭಟಿಸಲಾಗುವುದು ಎಂದರು.

ಸೂಪರಿಂಟೆಂಡೆಂಟ್ ಇಂಜಿನಿಯರ್ ಮತ್ತು ಅಸಿಸ್ಟೆಂಟ್ ಇಂಜಿನಿಯರ್ ಗೆ ಮಾತನಾಡಿದರೆ ಮೀನುಗಾರಿಕೆ ಇಲಾಖೆಗೆ ಗುತ್ತಿಗೆ ಆದಾರದ ಮೇಲೆಗೆ ಜಾಗ ಕೊಡಲಾಗಿದೆ ಎನ್ನುತ್ತಾರೆ. ಬಾಡಿಗೆ ನೀಡಿದರೆ ಮಾಲಿಕತ್ವ ಕೊಟ್ಟಿರೊಲ್ಲ. ಆದರೆ  ಭದ್ರಜಲಾಶಯದ ಭದ್ರತೆ ಬಗ್ಗೆ ಸರ್ಕಾರಕ್ಕೆ ಕಾಳಜಿ ಇಲ್ಲ. ಜಲಾಶಯದ ಬುಡದಲ್ಲಿ ಸ್ಟೀಲ್ ಪ್ಲಾಂಟ್ ಕಟ್ಟಲಾಗಿದೆ. ಸೌಂದರ್ಯ ಮತ್ತು ಅಪಾಯವನ್ನ‌ಒಡ್ಡುವ ಯೋಜನಿಯ ನಿರ್ಮಾಣಕ್ಕೆ ಸರ್ಕಾರವೇ ಮುಂದಾಗಿದೆ. ಡಿಕೆಶಿ ಅವರು ಗಂಭೀರವಾಗಿ ತೆಗೆದುಕೊಂಡು ಸ್ಥಗಿತಗೊಳಿಸದಿದ್ದರೆ 9 ಜಿಲ್ಲೆಯ ರೈತರ ವಿರೋಧ ಎದುರಿಸಬೇಕೆಂದು ಗುಡುಗಿದರು.

ತರೀಕೆರೆ ಮತ್ತು ಹೊಸದುರ್ಗದ ಭಾಗಕ್ಕೆ ಜಲಜೀವನ್ ಶುದ್ಧಕುಡಿಯುವ ನೀರಿನ ಘಟಕದ ಯೋಜನೆಯಾಗಿದೆ. 500 ಕೋಟಿ ರೂ ಯೋಜನೆ ಇದಾಗಿದೆ.  ಕೇಂದ್ರ ಸರ್ಕಾರದ ಪಾತ್ರವಿಲ್ಲ. ಬಫರ್ ಜೋನ್ ಎಂದಿದ್ದರೆ ಮುಗಿದುಹೋಗಿತ್ತು. ಡಿಪಿಆರ್ ಕೊಟ್ಟರೆ ಭ್ರಷ್ಟತೆ ಆಗಿದೆ. ಡಿಪಿಆರ್ ಕೊಡಬೇಕು ಎಂದು ಒತ್ತಾಯಿಸಿದರು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close